ಸುಮಧುರವಾಗಿ ಹಾಡುವ ಮೂಲಕ ರಂಜಿಸಿದ ಸಂಸದ ಶಶಿ ತರೂರ್; ವಿಡಿಯೋ ವೈರಲ್
Viral Video: ಶ್ರಿನಗರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಶಿ ತರೂರ್ ಹಿಂದಿ ಹಾಡನ್ನು ಹಾಡಿದ್ದಾರೆ. ಕೆಲವರು ತುಂಬಾ ಅದ್ಭುತವಾಗಿ ಹಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಡು ಇದೀಗ ಫುಲ್ ವೈರಲ್ ಆಗಿದೆ. ಇತ್ತೀಚೆಗಷ್ಟೇ ನಮ್ಮ ಟ್ವೀಟ್ ಖಾತೆಯಲ್ಲಿ, ದೇವಸ್ಥಾನದಲ್ಲಿ ತೆಂಗಿನಕಾಯಿ ಒಡೆಯುವ ದೃಶ್ಯವನ್ನು ಹಂಚಿಕೊಂಡಿದ್ದರು. ಆ ವಿಡಿಯೋ ಫುಲ್ ವೈರಲ್ ಆಗಿತ್ತು. ಹೀಗೆಯೇ ವಿವಿಧ ಅಚ್ಚರಿ ಮೂಡಿಸುವ ವಿಡಿಯೋಗಳನ್ನು ಸಂಸದ ಶಶಿ ತರೂರ್ ಟ್ವೀಟ್ ಮಾಡುತ್ತಾ ತಮ್ಮ ಹಿಂಬಾಲಕರನ್ನು ರಂಜಿಸುತ್ತಿರುತ್ತಾರೆ. ಇದೀಗ ಹಾಡು ಹೇಳಿದ ವಿಡಿಯೋವನ್ನು ಹಂಚಿಕೊಂಡಿದ್ದು ನೆಟ್ಟಿಗರನ್ನು ರಂಚಿಸಿದ್ದಾರೆ.
ಶ್ರಿನಗರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಶಿ ತರೂರ್ ಹಿಂದಿ ಹಾಡನ್ನು ಹಾಡಿದ್ದಾರೆ. ಕೆಲವರು ತುಂಬಾ ಅದ್ಭುತವಾಗಿ ಹಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, ಇಷ್ಟು ಸುಂದರವಾಗಿ ಹಾಡು ಹಾಡುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲವೆಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
1974ರಲ್ಲಿ ಬಿಡುಗಡೆಗೊಂಡ ಬಾಲಿವುಡ್ನ ಅಜನಬಿ ಚಿತ್ರದ ಎಕ್ ಅಜನಬಿ ಹಸೀನಾ ಸೆ ಹಾಡನ್ನು ಹಾಡಿದ್ದಾರೆ. ಈ ವಿಡಿಯೋದಲ್ಲಿ ಗಮನಿಸುವಂತೆ ಶಶಿ ತರೂರ್, ಮೊಬೈಲ್ನಲ್ಲಿ ಹಾಡಿನ ಸಾಲುಗಳನ್ನು ನೋಡುತ್ತಾ ಹಾಡುತ್ತಿರುವುದನ್ನು ನೋಡಬಹುದು. ವೀಕ್ಷಕರು ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸುವುದನ್ನು ಕಾಣಬಹುದು. ಟ್ವಿಟರ್ನಲ್ಲಿ ಸಹ ವಿಡಿಯೋ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹಾಡಿನ ಮೂಲ ಗಾಯಕರು ಕಿಶೋರ್ ಕುಮಾರ್.
After the cultural programme by Doordarshan Srinagar for the Parliamentary Standing Committee on Information Technology, I was persuaded to sing for the Members. Unrehearsed and amateur but do enjoy! pic.twitter.com/QDT4dwC6or
— Shashi Tharoor (@ShashiTharoor) September 6, 2021
ಇದನ್ನೂ ಓದಿ:
Viral Video: ಎರಡು ಸುರಂಗಗಳ ಮೂಲಕ ವಿಮಾನ ಹಾರಿಸಿದ ಪೈಲಟ್; ದಿಗ್ಭ್ರಮೆಗೊಳಿಸುವ ವಿಡಿಯೋ ವೈರಲ್
Viral Video: ಮದುವೆಯ ಸಂಭ್ರಮದಲ್ಲಿ ಪಿಜ್ಜಾ ರುಚಿ ಸವಿಯುತ್ತಿರುವ ವಧು; ವೈರಲ್ ವಿಡಿಯೋ ನೋಡಿ
(Shashi Tharoor sings ek ajnabee haseena se song goes viral)