‘ಕೂಲಿನಾಲಿ ಮಾಡಿ ತಾಯಿಯೇ ನನ್ನನ್ನು ಸಾಕಿದ್ದು’; ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಕಣ್ಣೀರಿಟ್ಟ ಸೂರ್ಯಕಾಂತ್​

ಸೂರ್ಯಕಾಂತ್​ ವೃತ್ತಿಯಲ್ಲಿ ಗಾಯಕರು. ಅವರು ತೊದಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಅವರ ಬಾಯಿಯಿಂದ ಶಬ್ದಗಳನ್ನು ಹೊರ ಹಾಕುವಾಗ ಕಷ್ಟಪಡಬೇಕಾಗುತ್ತದೆ.

‘ಕೂಲಿನಾಲಿ ಮಾಡಿ ತಾಯಿಯೇ ನನ್ನನ್ನು ಸಾಕಿದ್ದು’; ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಕಣ್ಣೀರಿಟ್ಟ ಸೂರ್ಯಕಾಂತ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 27, 2021 | 2:45 PM

‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ಅನೇಕ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಈ ಶೋ ಆರಂಭವಾಗಿದೆ. ಸಾಕಷ್ಟು ಗಾಯಕರಿಗೆ ಈ ಶೋ ವೇದಿಕೆ ಕಲ್ಪಿಸಿಕೊಡುತ್ತಿದೆ. ಅದರಲ್ಲೂ ವಿಶೇಷವಾಗಿ ಗಮನ ಸೆಳೆದಿದ್ದು ಕಲಬುರಗಿ ಜಿಲ್ಲೆಯ ಸೂರ್ಯಕಾಂತ್​ ಅವರು.

ಸೂರ್ಯಕಾಂತ್​ ವೃತ್ತಿಯಲ್ಲಿ ಗಾಯಕರು. ಅವರು ತೊದಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಅವರ ಬಾಯಿಯಿಂದ ಶಬ್ದಗಳನ್ನು ಹೊರ ಹಾಕುವಾಗ ಕಷ್ಟಪಡಬೇಕಾಗುತ್ತದೆ. ಆದರೆ, ಹಾಡನ್ನು ಮಾತ್ರ ಅವರು ಅದ್ಭುತವಾಗಿ ಹಾಡುತ್ತಾರೆ. ಕಳೆದ ವಾರ ‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ರವೀಂದ್ರ ಹಂದಿಗನೂರು ಅವರು ಸಂಗೀತ ಸಂಯೋಜನೆ ಮಾಡಿದ ‘ಮೂಕನಾಗಬೇಕು ಜಗದೊಳು..’ ತತ್ವಪದವನ್ನು ಸೂರ್ಯಕಾಂತ್​ ಹಾಡಿದ್ದರು. ಹಾಡು ಹೇಳಿದ ರೀತಿಗೆ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.

ಈ ಕುರಿತಂತೆ ಕಲರ್ಸ್​ ಕನ್ನಡ ವಾಹಿನಿ ವೀಕ್ಷಕರ ಬಳಿ ಹೋಗಿ ಅಭಿಪ್ರಾಯ ಕೇಳಿದೆ. ಈ ವೇಳೆ ಅನೇಕರು ಸೂರ್ಯಕಾಂತ್​ ಅವರ ಹಾಡು ಹೇಳಿದ ರೀತಿಯನ್ನು ಮನಃಪೂರ್ವಕವಾಗಿ ಹೊಗಳಿದ್ದಾರೆ.

ಇನ್ನು, ವೇದಿಕೆ ಮೇಲೆ ಸೂರ್ಯಕಾಂತ್​ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ‘ನಾನು ಇಲ್ಲಿಗೆ ಬರೋಕೆ ಕಾರಣ ನನ್ನ ತಾಯಿ. ಅವರು ಕೂಲಿನಾಲಿ ಮಾಡಿ ನನ್ನನ್ನು ಸಾಕಿದ್ದಾರೆ. ನನ್ನ ತಾಯಿ ಎಂದೆಂದಿಗೂ ಹೃದಯದಲ್ಲೇ ಇದ್ದಾಳೆ. ಅವಳೇ ನನಗೆ ಮೆಡಲ್​’ ಎನ್ನುತ್ತಲೇ ಸೂರ್ಯಕಾಂತ್​ ಕಣ್ಣೀರು ಹಾಕಿದರು.

ಕಳೆದ ಎಪಿಸೋಡ್​​ನಲ್ಲಿ ಸೂರ್ಯಕಾಂತ್​ ಹಾಡಿದ ಹಾಡು ಕೇಳಿ ರಾಜೇಶ್​ ಕೃಷ್ಣನ್​ ಭಾವುಕರಾದರು. ‘ಸೂರ್ಯಕಾಂತ್ ಗೆಲ್ಲೋಕೂ ಮುಂಚೆನೇ ಗೆದ್ದಾಯ್ತು. ಸೂರ್ಯಕಾಂತ್ ಪ್ರತಿಭೆ ಎದೆ ತುಂಬಿ ಹಾಡುವೆನು ಅಷ್ಟೇ ಅಲ್ಲಾ ಇಡೀ ಕರ್ನಾಟಕಕ್ಕೇ ಹೆಮ್ಮೆ’ ಎಂದಿದ್ದರು.

ಎಸ್​.ಪಿ ಬಾಲಸುಬ್ರಹ್ಮಣ್ಯಂ​ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್​ ಇದಾಗಿದೆ. ಈ ವೇದಿಕೆ ಸಾಕಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇದರ ಜತೆಗೆ ಎಸ್​ಪಿಬಿ ಅವರನ್ನು ನೆನಪಿಸಿಕೊಳ್ಳುವ ಕೆಲಸ ಕೂಡ ಆಗುತ್ತಿದೆ. ಜಡ್ಜ್​ಗಳು ಎಸ್​ಪಿಬಿ ಅವರನ್ನು ನೆನೆನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಸಮಸ್ಯೆಯನ್ನು ಮೆಟ್ಟಿ ನಿಂತ ಪ್ರತಿಭೆ; ‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಲ್ಲರ ಮನಗೆದ್ದ ಸೂರ್ಯಕಾಂತ್

Published On - 2:39 pm, Fri, 27 August 21

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್