AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಆನ್‌ಲೈನ್ ಹೂಡಿಕೆ ಹೆಸರಲ್ಲಿ ಭಾರಿ ವಂಚನೆ, ಮಹಿಳೆಯ ಮಾತಿಗೆ ಮರುಳಾಗಿ 5.95 ಕೋಟಿ ರೂ. ಕಳಕೊಂಡ ವ್ಯಕ್ತಿ

ಬೆಂಗಳೂರಿನ 50 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್ ಹೂಡಿಕೆ ವಂಚನೆ ಜಾಲಕ್ಕೆ ಬಲಿಯಾಗಿ ಕೋಟ್ಯಂತರ ರೂ. ಕಳೆದುಕೊಂಡಿದ್ದಾರೆ. ಹೂಡಿಕೆ ಮಾರ್ಗದರ್ಶನ ನೀಡುವ ನೆಪದಲ್ಲಿ ಪರಿಚಯವಾದ ಮಹಿಳೆಯನ್ನು ನಂಬಿ, ನಕಲಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತಮಗರಿವಿಲ್ಲದಂತೆ 5.95 ಕೋಟಿ ರೂ. ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ.

ಬೆಂಗಳೂರು: ಆನ್‌ಲೈನ್ ಹೂಡಿಕೆ ಹೆಸರಲ್ಲಿ ಭಾರಿ ವಂಚನೆ, ಮಹಿಳೆಯ ಮಾತಿಗೆ ಮರುಳಾಗಿ 5.95 ಕೋಟಿ ರೂ. ಕಳಕೊಂಡ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: PTI
ಗಣಪತಿ ಶರ್ಮಾ
|

Updated on: Jun 02, 2026 | 7:33 AM

Share

ಬೆಂಗಳೂರು, ಜೂನ್ 2: ಆನ್‌ಲೈನ್ ಮೂಲಕ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ನಂಬಿಸುವ ಸೈಬರ್ (Cyber Fraud) ವಂಚಕರ  ಜಾಲದಿಂದ ಮೋಸಹೋದ ಬೆಂಗಳೂರಿನ ವ್ಯಕ್ತಿಯೊಬ್ಬರು ಬರೋಬ್ಬರಿ 5.95 ಕೋಟಿ ರೂ. ಕಳೆದುಕೊಂಡಿದ್ದಾರೆ. ವಾಯುವ್ಯ ಬೆಂಗಳೂರಿನ (Bengaluru) ನಿವಾಸಿಯೊಬ್ಬರಿಗೆ ಸೈಬರ್ ವಂಚಕರು ನಕಲಿ ಹೂಡಿಕೆ ತಾಣದ (Trading Platform) ಮೂಲಕ ವಂಚಿಸಿ, ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವುದಾಗಿ ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ, ಹೂಡಿಕೆ ಮಾಡಿದ ಹಣಕ್ಕೆ ಭಾರಿ ಲಾಭ ಬಂದಂತೆ ನಕಲಿ ಡ್ಯಾಶ್‌ಬೋರ್ಡ್ ಸೃಷ್ಟಿಸಿ ತೋರಿಸಲಾಗಿತ್ತು. ಇದನ್ನು ನಂಬಿದ ವ್ಯಕ್ತಿ ಹಣ ಹೂಡುತ್ತಾ ಹೋಗಿದ್ದರು.

ಮುಖ್ಯಾಂಶಗಳು

  • ನಕಲಿ ಟ್ರೇಡಿಂಗ್ ಆಪ್‌ಗಳ ಮೂಲಕ ಬೆಂಗಳೂರಿನ ವ್ಯಕ್ತಿಗೆ 5.95 ಕೋಟಿ ರೂ. ವಂಚಿಸಿದ ಸೈಬರ್ ಖದೀಮರು.
  • ಗೂಗಲ್ ಮತ್ತು ಫೇಸ್‌ಬುಕ್‌ನಲ್ಲಿ ಸಿಕ್ಕ ಮಹಿಳೆಯ ಮಾರ್ಗದರ್ಶನ ನಂಬಿ ಹಣ ಹೂಡಿಕೆ ಮಾಡಿದ್ದ ಸಂತ್ರಸ್ತ.
  • ಹೂಡಿಕೆ ಖಾತೆಯಲ್ಲಿ 50 ಕೋಟಿ ರೂ. ಲಾಭ ತೋರಿಸಿ ನಂಬಿಸಿದ್ದ ವಂಚಕರು.

ಫೇಸ್‌ಬುಕ್ ಗೈಡ್ ನಂಬಿ ಇಟ್ಟರು ಹೆಜ್ಜೆ!

ಸಂತ್ರಸ್ತ ವ್ಯಕ್ತಿಗೆ ಅವರ ಸ್ನೇಹಿತರು ಮೊದಲು ‘PU Prime’ ಎಂಬ ಆನ್‌ಲೈನ್ ಟ್ರೇಡಿಂಗ್ ವೇದಿಕೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಅವರಿಗೆ ಆನ್‌ಲೈನ್ ಹೂಡಿಕೆಯ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದ ಕಾರಣ, ಅವರು ಗೂಗಲ್ ಮತ್ತು ಫೇಸ್‌ಬುಕ್‌ನಲ್ಲಿ ವೃತ್ತಿಪರ ಮಾರ್ಗದರ್ಶನಕ್ಕಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಅವರಿಗೆ ‘ಶಿಲ್ಪಾ ಶಿವಕುಮಾರ್’ ಎಂಬಾಕೆಯ ಪರಿಚಯವಾಗಿತ್ತು. ಇಬ್ಬರ ನಡುವೆ ಲಾಭ ಹಂಚಿಕೆಯ (Profit-Sharing) ಒಪ್ಪಂದ ಏರ್ಪಟ್ಟ ಬಳಿಕ, ಆಕೆ ಇದು ಭಾರತೀಯ ಟ್ರೇಡರ್ಸ್‌ಗಳಿಗಾಗಿಯೇ ಇರುವ ಅಧಿಕೃತ ವೇದಿಕೆ ಎಂದು ನಂಬಿಸಿ ವಂಚನೆಯ ಜಾಲತಾಣದಲ್ಲಿ ನೋಂದಣಿ ಮಾಡಿಸಿದ್ದಳು.

ಲಾಭದ ನಕಲಿ ದರ್ಶನ, ಸಂಪೂರ್ಣ ಹಣ ಸ್ವಾಹಾ

ಸಂತ್ರಸ್ತ ವ್ಯಕ್ತಿ ಆ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೇಡಿಂಗ್ ಆರಂಭಿಸಿದಾಗ, ಅದರ ಡ್ಯಾಶ್‌ಬೋರ್ಡ್‌ನಲ್ಲಿ ಭಾರಿ ಪ್ರಮಾಣದ ಲಾಭ ಕಾಣತೊಡಗಿತ್ತು. ಆರಂಭದಲ್ಲಿ ಸ್ವಲ್ಪ ಹಣವನ್ನು ಹಿಂಪಡೆಯಲು (Withdraw) ಅವಕಾಶ ಸಿಕ್ಕಿದ್ದರಿಂದ ಅವರಿಗೆ ನಂಬಿಕೆ ಹೆಚ್ಚಾಗಿತ್ತು. ಪ್ಲಾಟ್‌ಫಾರ್ಮ್‌ನ ಅಸಲಿಯತ್ತನ್ನು ಪರೀಕ್ಷಿಸಲು ಅವರು ಬೇರೊಂದು ಖಾತೆಯನ್ನು ತೆರೆದಾಗಲೂ ಅದರಲ್ಲಿ ಲಾಭ ತೋರಿಸಲಾಗಿತ್ತು. ಆದರೆ, ಆ ನಕಲಿ ಆ್ಯಪ್ ಅನ್ನು ಕೇವಲ ಸುಳ್ಳು ಲಾಭ ತೋರಿಸಲೆಂದೇ ವಿನ್ಯಾಸಗೊಳಿಸಲಾಗಿತ್ತು ಎಂಬುದು ಅವರಿಗೆ ತಿಳಿದಿರಲಿಲ್ಲ!

ಇದನ್ನೂ ಓದಿ: ಬೆಂಗಳೂರು: ಅರ್ಧಕ್ಕೆ ಕಾಲೇಜು ಬಿಟ್ಟು ತಾಯಿ ಜತೆ ಆನ್‌ಲೈನ್ ವಂಚನೆಗಿಳಿದ ಮೊಹಮ್ಮದ್ ಉಜೈಫ್

ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು, ಹೂಡಿಕೆಯನ್ನು ಹೆಚ್ಚಿಸುವಂತೆ ನಿರಂತರವಾಗಿ ಪ್ರಚೋದಿಸಿದರು. ಕೊನೆಗೆ ಸಂತ್ರಸ್ತರು ತಮ್ಮ ಮತ್ತು ಪತ್ನಿಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 5.95 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದರು. ಒಂದು ಹಂತದಲ್ಲಿ ಅವರ ಟ್ರೇಡಿಂಗ್ ಖಾತೆಯಲ್ಲಿ ಬರೋಬ್ಬರಿ 50 ಕೋಟಿ ರೂ. ಲಾಭ ಇರುವುದು ಕಾಣಿಸುತ್ತಿತ್ತು. ಆದರೆ, ಆ ಹಣವನ್ನು ಹಿಂಪಡೆಯಲು ಹೋದಾಗ ತಾವೇ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಮೇ 28ರಂದು ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ