AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Real Star Upendra: ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ಲೀಕ್; ಚಿತ್ರದ ಟೈಟಲ್ ಏನು?

ಉಪೇಂದ್ರ ಡೈರೆಕ್ಷನ್ ಕ್ಯಾಪ್ ತೊಡಲಿರುವ ಹೊಸ ಚಿತ್ರದ ಟೈಟಲ್ ಹಾಗೂ ಮೊದಲ ಪೋಸ್ಟರ್ ಲೀಕ್ ಆಗಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

Real Star Upendra: ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ಲೀಕ್; ಚಿತ್ರದ ಟೈಟಲ್ ಏನು?
ಲೀಕ್ ಆಗಿದೆ ಎನ್ನಲಾಗುತ್ತಿರುವ ಉಪೇಂದ್ರ ಅವರ ನೂತನ ಚಿತ್ರದ ಪೋಸ್ಟರ್
TV9 Web
| Edited By: |

Updated on:Sep 15, 2021 | 9:36 PM

Share

ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಆದ ಶೈಲಿಯ ಚಿತ್ರಗಳಿಂದ ರಿಯಲ್ ಸ್ಟಾರ್ ಉಪೇಂದ್ರ ಚಿರಪರಿಚಿತರು. ಆದರೆ ಇತ್ತೀಚೆಗೆ ಅವರು ನಿರ್ದೇಶನಕ್ಕಿಂತ ನಟನೆಯ ಕಡೆ ಹೆಚ್ಚು ಗಮನ ಕೊಟ್ಟಿದ್ದರು. ಆದ್ದರಿಂದಲೇ ಉಪ್ಪಿ 2 ಚಿತ್ರದ ನಂತರ ಅವರ ನಿರ್ದೇಶನದಲ್ಲಿ ಯಾವ ಚಿತ್ರಗಳೂ ಮೂಡಿರಲಿಲ್ಲ. ಆದರೆ ಇತ್ತೀಚೆಗೆ ಅವರು ಮಾತನಾಡುತ್ತಾ, ನಿರ್ದೇಶನಕ್ಕೆ ತಾನು ತಯಾರಾಗಿದ್ದೇನೆ, ಸ್ಕ್ರಿಪ್ಟಿಂಗ್ ಕೆಲಸಗಳು ನಡೆಯುತ್ತಿವೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಇದೀಗ ಸ್ಯಾಂಡಲ್​ವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಬಂದಿದೆ. ಉಪೇಂದ್ರ ನಿರ್ದೇಶನದ ಚಿತ್ರ ಅವರ ಜನ್ಮದಿನವಾದ ಸೆಪ್ಟೆಂಬರ್ 18ಕ್ಕೆ ಘೋಷಣೆಯಾಗಲಿದೆ ಎನ್ನಲಾಗಿದೆ. ಇದರೊಂದಿಗೆ ಹೊಸ ಚಿತ್ರ ‘ಯು & ಐ’ (U and I)ನ ಪೋಸ್ಟರ್ ಕೂಡ ಲೀಕ್ ಆಗಿದೆ, ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಮೇಲ್ನೋಟಕ್ಕೆ ನಾಮದ ಚಿಹ್ನೆಯಂತೆ ಕಾಣುವ ಈ ಟೈಟಲ್, ಆಂಗ್ಲ ಭಾಷೆಯ ‘ಯು’ ಮತ್ತು ‘ಐ’ಯನ್ನು ಒಳಗೊಂಡಿದೆ. ಇದರೊಂದಿಗೆ ಉಪೇಂದ್ರರ ಬಹುತೇಕ ಚಿತ್ರಗಳಲ್ಲಿ ಕಾಣಸಿಗುವ ‘ನೀನು’, ‘ನಾನು’ ಇಲ್ಲಿಯೂ ಮುಂದುವರೆಯಲಿದೆಯೇ ಎಂಬ ಕುತೂಹಲ ಹುಟ್ಟುಹಾಕಿದೆ.  ಪೋಸ್ಟರ್​ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಸುಳಿವನ್ನೂ ನೀಡಲಾಗಿದೆ.  ಒಟ್ಟಿನಲ್ಲಿ ಉಪೇಂದ್ರ ಅವರ ಅಭಿಮಾನಿ ಬಳಗ ಇದನ್ನು ಸಂತಸದಿಂದ ಶೇರ್ ಮಾಡುತ್ತಿದ್ದು, ರಿಯಲ್ ಸ್ಟಾರ್ ನಿರ್ದೇಶನಕ್ಕೆ ಭರ್ಜರಿ ವೇದಿಕೆ ಕಲ್ಪಿಸುತ್ತಿದ್ದಾರೆ.

ಕೆಲವು ಟ್ವೀಟ್​ಗಳು ಇಲ್ಲಿವೆ:

ಹೊಸ ಸಿನಿಮಾದ ಕುರಿತ ವಿಡಿಯೊ ವರದಿ:

ಸದ್ಯ ‘ಕಬ್ಜ’ ಸಿನಿಮಾದಲ್ಲಿ ಉಪೇಂದ್ರ ಬ್ಯುಸಿಯಾಗಿದ್ದಾರೆ. ಈ ಚಿತ್ರತಂಡ ಬಿಡುಗಡೆಗೊಳಿಸಿದ್ದ, ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಜೊತೆಗಿರುವ ಒಂದು ಪೋಸ್ಟರ್ ಸಖತ್ ವೈರಲ್ ಆಗಿತ್ತು. ಅದೇನೆ ಇದ್ದರೂ ಉಪೇಂದ್ರ ಅಭಿಮಾನಿಗಳು ರಿಯಲ್ ಸ್ಟಾರ್ ನಿರ್ದೇಶನದ ಕ್ಯಾಪ್ ತೊಡುವುದನ್ನೇ ಕಾಯುತ್ತಿರುವುದು ಸುಳ್ಳಲ್ಲ.

ಇದನ್ನೂ ಓದಿ:

ನಿರ್ದೇಶನಕ್ಕೆ ಉಪೇಂದ್ರ ರೆಡಿ; ಅಧಿಕೃತ ಘೋಷಣೆ ಯಾವಾಗ?

ಬಾಲಿವುಡ್​ನ ಖ್ಯಾತ ತಾರೆಯರ ನೈಜ ಹೆಸರೇನು? ಇಲ್ಲಿದೆ ಅಪರೂಪದ ಮಾಹಿತಿ

ಬಾಲಿವುಡ್ ನಟಿ ತಲೆಗೆ ಗನ್​ ಇಟ್ಟು ಹಣ, ಆಭರಣ ದೋಚಿದ ದರೋಡೆಕೋರರು; ಸಿನಿಮೀಯ ರೀತಿಯಲ್ಲಿ ನಡೆಯಿತು ಘಟನೆ

(Is Real Star Upendra directorial new film U and I title and poster leaked?)

Published On - 6:41 pm, Wed, 15 September 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್