ಬಾಲಿವುಡ್ ನಟಿ ತಲೆಗೆ ಗನ್​ ಇಟ್ಟು ಹಣ, ಆಭರಣ ದೋಚಿದ ದರೋಡೆಕೋರರು; ಸಿನಿಮೀಯ ರೀತಿಯಲ್ಲಿ ನಡೆಯಿತು ಘಟನೆ

ನಿರ್ಜನ ಪ್ರದೇಶದಲ್ಲಿ ಕೆಲ ಮುಸುಕುಧಾರಿಗಳು ಇವರಿಗೆ ಎದುರಾಗಿದ್ದಾರೆ. ಅವರನ್ನು ನೋಡಿ ನಿಖಿತಾಗೆ ಭಯವಾಗಿದೆ. ಗನ್​ ತೋರಿಸಿ ಎಲ್ಲವನ್ನೂ ನೀಡುವಂತೆ ಬೆದರಿಕೆ ಹಾಕಿದ್ದಾರೆ.

ಬಾಲಿವುಡ್ ನಟಿ ತಲೆಗೆ ಗನ್​ ಇಟ್ಟು ಹಣ, ಆಭರಣ ದೋಚಿದ ದರೋಡೆಕೋರರು; ಸಿನಿಮೀಯ ರೀತಿಯಲ್ಲಿ ನಡೆಯಿತು ಘಟನೆ

ನಡೆದುಕೊಂಡು ಹೋಗುತ್ತಿದ್ದ ಬಾಲಿವುಡ್​ ನಟಿಯನ್ನು ಮುಸುಕುಧಾರಿಗಳು ಅಡ್ಡಗಟ್ಟಿ ದರೋಡೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ, ಪೊಲೀಸರು ವಿಚಾರಣೆ ಆರಂಭಿಸಿದ್ದು, ಶೀಘ್ರವೇ ಅಪರಾಧಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ.

ಹಿಂದಿ ಸಿನಿಮಾ ನಟಿ ನಿಖಿತಾ ರಾವಲ್​ ಹೊರಗೆ ತೆರಳಿದ್ದರು. ಕೆಲಸ ಮುಗಿಸಿ ನಂತರ ಅವರು ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಶಾಸ್ತ್ರಿ ನಗರದಲ್ಲಿ ಅವರ ನಿವಾಸ ಇದೆ. ಈ ವೇಳೆ ನಿರ್ಜನ ಪ್ರದೇಶದಲ್ಲಿ ಕೆಲ ಮುಸುಕುಧಾರಿಗಳು ಇವರಿಗೆ ಎದುರಾಗಿದ್ದಾರೆ. ಅವರನ್ನು ನೋಡಿ ನಿಖಿತಾಗೆ ಭಯವಾಗಿದೆ. ಗನ್​ ತೋರಿಸಿ ಎಲ್ಲವನ್ನೂ ನೀಡುವಂತೆ ಬೆದರಿಕೆ ಹಾಕಿದ್ದಾರೆ. ನಟಿ ಗನ್ ನೋಡಿ ಭಯಗೊಂಡಿದ್ದಾರೆ. ನಿಖಿತಾ ಬಳಿ 7 ಲಕ್ಷ ರೂಪಾಯಿ ನಗದು ಹಣ ಇತ್ತು. ಇದರ ಜತೆ, ಅವರ ಬಳಿ ಇದ್ದ ಬೆಲೆ ಬಾಳುವ ವಸ್ತು ಹಾಗೂ ಚಿನ್ನದ ಸರಗಳನ್ನು ಕದ್ದು ದರೋಡೆಕೋರರು ಪರಾರಿಯಾಗಿದ್ದಾರೆ.

ದರೋಡೆಕೋರರು ಶೂಟ್​ ಮಾಡಬಹುದು ಎನ್ನುವ ಭಯ ನಿಖಿತಾಗೆ ಕಾಡಿದೆ. ಈ ಕಾರಣಕ್ಕೆ ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತಮ್ಮ ಮನೆಗೆ ಬಂದು ಅವರು ಬಾಗಿಲು ಹಾಕಿಕೊಂಡಿದ್ದಾರೆ. ನಂತರ ದೂರವಾಣಿ ಮೂಲಕ ಈ ವಿಚಾರವನ್ನು ಅವರು ಪೊಲೀಸರಿಗೆ ತಿಳಿಸಿದ್ದಾರೆ. ನಿಖಿತಾ ಈ ವಿಚಾರವನ್ನು ಸೋಶಿಯಲ್​ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರ ಅಭಿಮಾನಿಗಳು ಆತಂಕ ಹೊರಹಾಕಿದ್ದಾರೆ. ಸದ್ಯ, ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನಿಖಿತಾ ಬಾಲಿವುಡ್​ನಲ್ಲಿ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ರೋಟಿ ಕಪ್ಡಾ ಔರ್​ ರೊಮ್ಯಾನ್ಸ್​’ ಚಿತ್ರದಲ್ಲಿ ನಿಖಿತಾ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅರ್ಷದ್​ ವಾರ್ಷಿ ಮತ್ತು ಚಂಕಿ ಪಾಂಡೇ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನಾನು ವಿರಾಟ್ ಕೊಹ್ಲಿಯನ್ನು ಪ್ರೀತಿಸುತ್ತಿದ್ದೆ’; ರಹಸ್ಯ ಬಿಚ್ಚಿಟ್ಟ ಬಾಲಿವುಡ್​ ನಟಿ

ಬಾಲಿವುಡ್​ನ ಯಾವೆಲ್ಲಾ ಖ್ಯಾತ ನಟರು ಕೂದಲು ಕಸಿ ಮಾಡಿಸಿಕೊಂಡಿದ್ದಾರೆ?; ಇಲ್ಲಿದೆ ಅಚ್ಚರಿಯ ಮಾಹಿತಿ

Click on your DTH Provider to Add TV9 Kannada