ಆಲಿಬಾಗ್​ನಲ್ಲಿ ಬೃಹತ್ ಮನೆಯನ್ನು ಖರೀದಿಸಿದ ದೀಪಿಕಾ- ರಣವೀರ್; ಅದರ ಬೆಲೆ ಎಷ್ಟು ಗೊತ್ತಾ?

Ranveer Singh and Deepika Padukone: ರಣವೀರ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಆಲಿಬಾಗ್​ನಲ್ಲಿ ಹೊಸ ಮನೆ ಖರೀದಿಸಿದೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ.

ಬಾಲಿವುಡ್​ನ ಖ್ಯಾತ ತಾರಾ ಜೋಡಿಗಳಲ್ಲಿ ಒಂದಾಗಿರುವ ರಣವೀರ್ ಸಿಂಗ್(Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೋಡಿ ಆಲಿಬಾಗ್​ನಲ್ಲಿ(Alibaug) ಹೊಸ ಬಂಗಲೆಯೊಂದನ್ನು ಖರೀದಿಸಿದೆ. ಮನಿಕಂಟ್ರೋಲ್ ವರದಿ ಮಾಡಿರುವ ಪ್ರಕಾರ, ಬಂಗಲೆಯು ಸುಮಾರು 2.25 ಎಕರೆ ವಿಸ್ತೀರ್ಣದಲ್ಲಿದೆ. ಇದು 5 BHK ಮನೆಯಾಗಿದ್ದು, ಎರಡು ಅಂತಸ್ತನ್ನು ಹೊಂದಿದೆ. ಖ್ಯಾತ ಕಿಹಿಮ್ ಬೀಚ್​ಗೆ ಕೇವಲ ಹತ್ತು ನಿಮಿಷ ದೂರದಲ್ಲಿ ಈ ಮನೆಯಿದೆ ಎಂದು ವರದಿಯಾಗಿದೆ. ಈ ಏರಿಯಾವು ಕೋಟ್ಯಾಧಿಪತಿಗಳ ಮನೆಗಾಗಿ ಪ್ರಸಿದ್ಧಿ ಪಡೆದಿದೆ. ಖ್ಯಾತ ಬಾಲಿವುಡ್ ತಾರೆಯರು, ಉದ್ಯಮಿಗಳು ಇಲ್ಲಿ ಮನೆಯನ್ನು ಹೊಂದಿದ್ದಾರೆ. ಮುಂಬೈಗೆ ಈ ಸ್ಥಳ ಸುಮಾರು 45 ನಿಮಿಷಗಳ ದೂರದಲ್ಲಿದೆ. ಈ ಮನೆಗೆ ಬರೋಬ್ಬರಿ 22 ಕೋಟಿ ನೀಡಿದ್ದಾರೆ ದೀಪಿಕಾ- ರಣವೀರ್ ಜೋಡಿ.

ರಣವೀರ್ ಹಾಗೂ ದೀಪಿಕಾ ಈಗಾಗಲೇ ಮುಂಬೈಯಲ್ಲಿ 4 ಬಿಎಚ್​​ಕೆ ಫ್ಲಾಟನ್ನು ಹೊಂದಿದ್ದಾರೆ. ಅದು ಪ್ರಭಾದೇವಿ ಏರಿಯಾದಲ್ಲಿದೆ. ಕಳೆದ ತಿಂಗಳು ದೀಪಿಕಾ ಬೆಂಗಳೂರಿನಲ್ಲಿ ಸರ್ವೀಸ್ ಅಪಾರ್ಟ್​ಮೆಂಟ್ ಖರೀದಿಸಿದ್ದರು. ಈಗ ಖರೀದಿಸಲಾಗಿರುವ ಹೊಸ ಮನೆಯ ಸುತ್ತಮುತ್ತ ತೆಂಗಿನ ತೋಟಗಳೂ ಇವೆ ಎನ್ನುತ್ತವೆ ವರದಿಗಳು. ವಿಡಿಯೊಗೆ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ:

ಪ್ರೇಮಲೋಕ ಸೃಷ್ಟಿಸಿದ ರವಿಚಂದ್ರನ್​ಗೆ ಕಾಡಿತ್ತು ಏಕಾಂಗಿತನ? ಕ್ರೇಜಿ ಸ್ಟಾರ್​ ಬಿಚ್ಚು ಮಾತು

ಮಚ್ಚು ಹಿಡಿದ ಶ್ರೇಯಸ್​ಗೆ ಆಲ್​ ದಿ ಬೆಸ್ಟ್​ ಹೇಳಿದ ಉಪೇಂದ್ರ

(Ranveer Singh and Deepika Padukone buys a new in Alibaug)

Click on your DTH Provider to Add TV9 Kannada