ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಭೀಕರ ಅಪಘಾತ! ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ, ವಿಡಿಯೋ ಇದೆ ನೋಡಿ
Bengaluru Accident: ಕಾರು ಗುದ್ದಿದ ರಭಸಕ್ಕೆ ಫ್ಲೈ ಓವರ್ನಿಂದ ಯುವಕ, ಯುವತಿ ಹಾರಿ ಬಿದ್ದಿದ್ದಾರೆ. ಸುಮಾರು 150 ರಿಂದ 200 ಅಡಿ ದೂರಕ್ಕೆ ಯುವಕ, ಯುವತಿ ಹಾರಿ ಬಿದ್ದಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಇಬ್ಬರು ಸರ್ವಿಸ್ ರೋಡ್ಗೆ ಹಾರಿ ಬಿದ್ದಿದ್ದಾರೆ.
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈ ಓವರ್ ಮೇಲೆ ನಡೆದ ಕಾರು, ಬೈಕ್ ಅಪಘಾತದ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಫ್ಲೈ ಓವರ್ನಲ್ಲಿ ಬೈಕ್ ಪಾರ್ಕ್ ಮಾಡುವಾಗ ಯುವಕ, ಯುವತಿಗೆ ಕಾರು ವೇಗವಾಗಿ ಬಂದು ಗುದ್ದಿದೆ. ಸುಮಾರು 120 ಕಿಮೀ ಸ್ಪೀಡ್ನಲ್ಲಿ ಕಾರು ಬಂದು ಬೈಕ್ಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಫ್ಲೈ ಓವರ್ನಿಂದ ಯುವಕ, ಯುವತಿ ಹಾರಿ ಬಿದ್ದಿದ್ದಾರೆ. ಸುಮಾರು 150 ರಿಂದ 200 ಅಡಿ ದೂರಕ್ಕೆ ಯುವಕ, ಯುವತಿ ಹಾರಿ ಬಿದ್ದಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಇಬ್ಬರು ಸರ್ವಿಸ್ ರೋಡ್ಗೆ ಹಾರಿ ಬಿದ್ದಿದ್ದಾರೆ. ಇಬ್ಬರೂ ನೆಲಕ್ಕೆ ಬೀಳುವ ಮೊದಲು 8-10 ಸೆಕೆಂಡ್ ಗಾಳಿಯಲ್ಲೇ ಇದ್ದರು. ಫ್ಲೈ ಓವರ್ ಮೇಲಿಂದ ಬಿದ್ದ ಪರಿಣಾಮದಿಂದಲೇ ಯುವಕ- ಯುವತಿ ಸಾವನ್ನಪ್ಪಿದ್ದಾರೆ. ತಮ್ಮ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ಪಾರ್ಕ್ ಮಾಡುತ್ತಿದ್ದರಂತೆ. ಈ ವೇಳೆ ಭೀಕರ ಅಪಘಾತ ನಡೆದಿದೆ.
Latest Videos