ಬಾಲಿವುಡ್​ನ ಖ್ಯಾತ ತಾರೆಯರ ನೈಜ ಹೆಸರೇನು? ಇಲ್ಲಿದೆ ಅಪರೂಪದ ಮಾಹಿತಿ

TV9 Digital Desk

| Edited By: shivaprasad.hs

Updated on: Sep 15, 2021 | 6:00 PM

Bollywood: ಚಿತ್ರರಂಗಕ್ಕೆ ಪ್ರವೇಶಿಸಿದ ನಂತರ ಅಭಿಮಾನಿಗಳಿಗೆ ಹತ್ತಿರವಾಗುವ ದೃಷ್ಟಿಯಿಂದ ಅನೇಕ ಖ್ಯಾತ ನಟರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಬಾಲಿವುಡ್​ನಲ್ಲಿ ಕೂಡ ಈ ಪಟ್ಟಿ ದೊಡ್ಡದಿದೆ. ಅಂತಹ 27 ಕಲಾವಿದರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಬಾಲಿವುಡ್​ನ ಖ್ಯಾತ ತಾರೆಯರ ನೈಜ ಹೆಸರೇನು? ಇಲ್ಲಿದೆ ಅಪರೂಪದ ಮಾಹಿತಿ
ಬಾಲಿವುಡ್​ನ ಖ್ಯಾತ ತಾರೆಯರು (ಸಾಂದರ್ಭಿಕ ಚಿತ್ರ)

ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಂತರ ಅನೇಕ ತಾರೆಯರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣಗಳು ಹಲವಾರು. ಸ್ಯಾಂಡಲ್​ವುಡ್​ನಲ್ಲೂ ಕೂಡ ಬಹುತೇಕ ಚಿತ್ರತಾರೆಯರು ತಮ್ಮ ನಿಜ ಜೀವನದ ಹೆಸರುಗಳಿಗಿಂತ ಬೇರೆ ಹೆಸರಿನಿಂದ ಅಭಿಮಾನಿಗಳ ಜನಮಾನಸದಲ್ಲಿ ಪರಿಚಿತರಾದದ್ದೇ ಹೆಚ್ಚು. ಈ ಸಂಸ್ಕೃತಿ ಬಾಲಿವುಡ್​ ಹಾಗೂ ಭಾರತದ ಇತರ ಚಿತ್ರರಂಗದಲ್ಲೂ ಸಾಮಾನ್ಯವಾಗಿದೆ. ಹೊಸ ಹೆಸರನ್ನಿಟ್ಟುಕೊಂಡು ನಂತರ ಅನೇಕ ಕಲಾವಿದರು ಯಶಸ್ಸಿನ ಮೆಟ್ಟಿಲನ್ನೇರಿದ್ದಾರೆ. ಇಲ್ಲಿ ಬಾಲಿವುಡ್​ನ ಖ್ಯಾತ ತಾರೆಯರ ನಿಜ ಹೆಸರನ್ನು ನೀಡಲಾಗಿದೆ.

ಬಾಲಿವುಡ್​ನ ಚಿತ್ರರಂಗದಲ್ಲಿ ಖ್ಯಾತರಾಗಿರುವ ಜ್ಯೋತಿಷಿ ಸಂಜಯ್ ಬಿ ಜುಮಾನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಮರುನಾಮಕರಣ ಮಾಡಿಕೊಂಡ ಕೆಲವು ತಾರೆಯರ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅನೇಕ ತಾರೆಯರ ನಿಜವಾದ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಹಲವು ತಾರೆಯರು ತಮ್ಮ ಮೂಲ ಹೆಸರಿನಲ್ಲಿದ್ದ ಕೆಲವು ಪದಗಳನ್ನು ತೆಗೆದು ಸಂಕ್ಷಿಪ್ತ ಮಾಡಿಕೊಂಡಿದ್ದಾರೆ.ಮತ್ತೆ ಕೆಲವರು ಹೊಸ ಹೆಸರನ್ನೇ ಇಟ್ಟುಕೊಂಡಿದ್ದಾರೆ. ಸಲ್ಮಾನ್ ಖಾನ್​ರಿಂದ ರಜನಿಕಾಂತ್​ವರೆಗೂ ಈ ಪಟ್ಟಿಯಲ್ಲಿ ಅನೇಕ ದೊಡ್ಡ ತಾರೆಯರ ಹೆಸರುಗಳಿದ್ದು, ಅವುಗಳು ಇಲ್ಲಿವೆ.

ಸಲ್ಮಾನ್ ಖಾನ್ – ಅಬ್ದುಲ್ ರಷೀದ್ ಸಲೀಮ್ ಸಲ್ಮಾನ್ ಖಾನ್ ಜಾಕಿ ಶ್ರಾಫ್ – ಜೈಕಿಶನ್ ಕಾಕುಭಾಯ್ ಪ್ರೀತಿ ಜಿಂಟಾ – ಪ್ರೀತಮ್ ಸಿಂಗ್ ಜಿಂಟಾ ಹೃತಿಕ್ ರೋಶನ್ – ಹೃತಿಕ್ ನಗ್ರತ್ ಕತ್ರಿನಾ ಕೈಫ್ – ಕೇಟ್ ಟರ್ಕೊಟ್ ಮಲ್ಲಿಕಾ ಶೆರಾವತ್ – ರೀಮಾ ಲಂಬಾ ಅಕ್ಷಯ್ ಕುಮಾರ್ – ರಾಜೀವ್ ಹರಿಓಮ್ ಭಾಟಿಯಾ ರಜನಿಕಾಂತ್ – ಶಿವಾಜಿ ರಾವ್ ಗಾಯಕ್ವಾಡ್ ಅಮಿತಾಭ್ ಬಚ್ಚನ್ – ಇಂಕ್ವಿಲಾಬ್ ಶ್ರೀವಾಸ್ತವ ದಿಲೀಪ್ ಕುಮಾರ್ – ಮೊಹಮ್ಮದ್ ಯೂಸುಫ್ ಖಾನ್ ರಣವೀರ್ ಸಿಂಗ್ – ರಣವೀರ್ ಭವ್ನಾನಿ ಶಾಹಿದ್ ಕಪೂರ್ – ಶಾಹಿದ್ ಖತ್ತರ್ ಸನ್ನಿ ಡಿಯೋಲ್ – ಅಜಯ್ ಸಿಂಗ್ ಡಿಯೋಲ್ ಸೈಫ್ ಅಲಿ ಖಾನ್ – ಸಾಜಿದ್ ಅಲಿ ಖಾನ್ ಮಿಥುನ್ ಚಕ್ರವರ್ತಿ – ಗೌರಾಂಗ ಚಕ್ರವರ್ತಿ ರೇಖಾ – ಭಾನುರೇಖ ಗಣೇಶನ್ ಅಜಯ್ ದೇವಗನ್ – ವಿಶಾಲ್ ದೇವಗನ್ ಸಂಜೀವ್ ಕುಮಾರ್ – ಹರಿಭಾಯ್ ಜರಿವಾಲ ಕಮಲ್ ಹಾಸನ್ – ಆಳ್ವಾರಪೆಟ್ಟಾಯ್ ಆಂದವರ್ ಸನ್ನಿ ಲಿಯೋನ್ – ಕರಂಜಿತ್ ಕೌರ್ ವೋಹ್ರಾ ಜಿತೇಂದ್ರ – ರವಿ ಕಪೂರ್ ಶ್ರೀದೇವಿ – ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್ ರಾಜೇಶ್ ಖನ್ನಾ – ಜತಿನ್ ಜಾನ್ ಅಬ್ರಹಾಂ – ಫರ್ಹಾನ್ ಜಾನಿ ಲಿವರ್ – ಜಾನ್ ಪ್ರಕಾಶ ರಾವ್ ಜನುಮಾಲಾ ತಬು – ತಬಸ್ಸುಮ್ ಹಶೀಮ್ ಖಾನ್

ಸಂಜಯ್ ಬಿ ಜುಮಾನಿ ಹಂಚಿಕೊಂಡ ಪಟ್ಟಿ ಇಲ್ಲಿದೆ:

ಅಭಿಮಾನಿಗಳಿಗೆ ಸುಲಭವಾಗಿ ಪರಿಚಿತರಾಗುವ ದೃಷ್ಟಿಯಿಂದ ಹೆಚ್ಚಾಗಿ ಕಲಾವಿದರು ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಈ ಟ್ರೆಂಡನ್ನು ಯುವ ಕಲಾವಿದರು ಕೂಡ ಮುಂದುವರೆಸುತ್ತಿದ್ದಾರೆ.

ಇದನ್ನೂ ಓದಿ:

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಜೆಟ್​ನ ಚಿತ್ರಕ್ಕೆ ತಯಾರಾಗುತ್ತಿದ್ದಾರಾ ರಾಜಮೌಳಿ?

Big Breaking: ಸೋನು ಸೂದ್​ಗೆ ಸಂಕಷ್ಟ?; ನಟನಿಗೆ ಸೇರಿದ ಆರು ಜಾಗಗಳಲ್ಲಿ ಐಟಿ ಅಧಿಕಾರಿಗಳ ಸರ್ವೇ

(Reel names vs Real names in Bollywood here is the well known artists details)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada