Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಟ್ವಿಟರ್​ನಲ್ಲಿ ಟ್ರೆಂಡ್ ಆದ ‘ಬಾಯ್ಕಾಟ್ ಶಾರುಖ್ ಖಾನ್’; ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?

Boycott Shah Rukh Khan: ಟ್ವಿಟರ್​ನಲ್ಲಿ ಬಾಯ್ಕಾಟ್ ಶಾರುಖ್ ಖಾನ್ ಟ್ರೆಂಡಿಂಗ್ ಆಗಿದೆ. ಹಾಗೆಯೇ ಅಭಿಮಾನಿಗಳಿಂದ ವಿ ಲವ್ ಶಾರುಖ್ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

Shah Rukh Khan: ಟ್ವಿಟರ್​ನಲ್ಲಿ ಟ್ರೆಂಡ್ ಆದ ‘ಬಾಯ್ಕಾಟ್ ಶಾರುಖ್ ಖಾನ್’; ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?
ಶಾರುಖ್ ಖಾನ್
Follow us
TV9 Web
| Updated By: shivaprasad.hs

Updated on:Sep 16, 2021 | 2:30 PM

ಟ್ವಿಟರ್‌ನಲ್ಲಿ ಬಾಯ್ಕಾಟ್ ಶಾರುಖ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಶಾರುಖ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ನೆಟ್ಟಿಗರು ಶಾರುಖ್​ರನ್ನು ಬಾಯ್ಕಾಟ್ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಪಾಕಿಸ್ತಾನ ಕ್ರಿಕೆಟಿಗರು ವಿಶ್ವದಲ್ಲೇ ಶ್ರೇಷ್ಠ ಆಟಗಾರರು’ ಹಾಗೂ ‘ಪಾಕ್ ಕ್ರಿಕೆಟಿಗರು ಚಾಂಪಿಯನ್‌ಗಳು’ ಎಂದಿದ್ದ ಶಾರುಖ್ ಹೇಳಿಕೆ ಇದೀಗ ವೈರಲ್ ಆಗಿದ್ದು ಅದನ್ನು ಆಧರಿಸಿ ವಿರೋಧ ವ್ಯಕ್ತವಾಗುತ್ತಿದೆ. ಇದರೊಂದಿಗೆ ಶಾರುಖ್ ಇಮ್ರಾನ್ ಖಾನ್ ಅವರೊಂದಿಗೆ ಇದ್ದ ಚಿತ್ರಗಳು ಕೂಡ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಈ ವಿಷಯದೊಂದಿಗೆ ಶಾರುಖ್ ವಿರುದ್ಧ ಇನ್ನೂ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ನೆಟ್ಟಿಗರು ಬಾಯ್ಕಾಟ್ ಶಾರುಖ್ ಎಂದು ಟ್ವೀಟ್ ಮಾಡುತ್ತಿದ್ದಾರೆ. ‘ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ’ ಎಂಬ ಹೇಳಿಕೆ, ಕರಣ್ ಜೋಹರ್, ಜಾಹ್ನವಿ ಚಿತ್ರಕ್ಕೆ ಬೆಂಬಲ ಸೂಚಿಸಿ ಆದರೆ ಸುಶಾಂತ್ ಸಿಂಗ್ ರಜಪೂತ್ ಚಿತ್ರಕ್ಕೆ ಬೆಂಬಲ ಸೂಚಿಸದಿರುವುದು ಮೊದಲಾದ ವಿಚಾರಗಳೂ ಚರ್ಚೆಯಾಗುತ್ತಿವೆ.

ಸಾಧ್ವಿ ಪ್ರಾಚಿ ಕೂಡ ಶಾರುಖ್ ವಿರುದ್ಧ ಕಿಡಿ ಕಾರಿದ್ದು, ‘ಶಾರುಖ್ ಖಾನ್ ಹಿಂದೂಸ್ತಾನದ ಅನ್ನ ತಿನ್ನುತ್ತಾರೆ. ಆದರೆ ಪಾಕಿಸ್ತಾನದ ಹಾಡು ಹಾಡುತ್ತಾರೆಂದು’ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾರುಖ್ 5 ವರ್ಷದ ಹಿಂದೆ ನೀಡಿದ್ದ ಹೇಳಿಕೆಗಳು ಈಗ ವೈರಲ್ ಆಗಿದ್ದು, ಇದರ ಆಧಾರದಲ್ಲಿ ಅವರ ನೂತನ ಚಿತ್ರ ‘ಪಠಾಣ್’ ಸೇರಿದಂತೆ ಶಾರುಖ್​ಗೆ ಸಂಬಂಧಪಟ್ಟ ವಿಚಾರಗಳಿಗೆ ‘ಬಾಯ್ಕಾಟ್ ಶಾರುಖ್’ ಟ್ರೆಂಡಿಂಗ್ ಆಗಿದೆ.

ಶಾರುಖ್ ಅಭಿಮಾನಿಗಳಿಂದ ವಿ ಲವ್ ಶಾರೂಖ್ ಖಾನ್ ಟ್ರೆಂಡಿಂಗ್: ಟ್ವಿಟರ್ ನಲ್ಲಿ ಬಾಯ್ಕಾಟ್ ಶಾರೂಖ್ ಖಾನ್ ಟ್ರೆಂಡಿಂಗ್​ಗೆ ವಿರುದ್ಧವಾಗಿ ಶಾರುಖ್ ಖಾನ್ ಪರ ಅಭಿಯಾನ ಆರಂಭವಾಗಿದೆ. ‘SRK ಪ್ರೈಡ್ ಆಫ್ ಇಂಡಿಯಾ’, ‘ವಿ ಲವ್ ಶಾರೂಖ್ ಖಾನ್’ ಮೊದಲಾದ ಹ್ಯಾಶ್ ಟ್ಯಾಗ್​ಗಳ ಮುಖಾಂತರ ಅಭಿಮಾನಿಗಳು ಶಾರುಖ್​ಗೆ ಬೆಂಬಲ ಸೂಚಿಸುತ್ತಿದ್ದಾರೆ. ‘ಭಾರತಕ್ಕೆ ಯಾರೇ ಬಂದರೂ ಶಾರೂಖ್ ಖಾನ್ ಭೇಟಿಯಾಗುತ್ತಾರೆ’, ‘ಶಾರೂಖ್ ಖಾನ್ ಭಾರತದ ಹೆಮ್ಮೆಯ ನಟ’, ‘ಭಾರತದ ದಿಗ್ಗಜ‌ ನಟರೆಲ್ಲರೂ ಶಾರೂಖ್ ಖಾನ್ ಅಭಿಮಾನಿಗಳು’, ‘ಶಾರೂಖ್ ಖಾನ್ ಬಡವರು, ಸಂಕಷ್ಟದಲ್ಲಿದ್ದವರಿಗೆ ಸಾಕಷ್ಟು ಹಣ ದಾನ ಮಾಡಿದ್ದಾರೆ’ ಮೊದಲಾದ ವಿಚಾರಗಳನ್ನು ಶಾರುಖ್ ಅಭಿಮಾನಿಗಳು ಪ್ರಸ್ತಾಪಿಸುತ್ತಿದ್ದಾರೆ. ಹಾಗೆಯೇ ಶಾರುಖ್ ಇಮ್ರಾನ್ ಜೊತೆಗಿರುವ ಫೊಟೊ ವೈರಲ್ ಆಗಿದ್ದಕ್ಕೆ ಪ್ರತಿಯಾಗಿ, ಕಪಿಲ್ ದೇವ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಅನೇಕ ಗಣ್ಯರು ಇಮ್ರಾನ್ ಜೊತೆಗಿರುವ ಚಿತ್ರಗಳು ವೈರಲ್ ಆಗುತ್ತಿವೆ.

ಇದಲ್ಲದೇ ಭಾರತಕ್ಕೆ ಬೇರೆ ದೇಶದಿಂದ ಗಣ್ಯ ವ್ಯಕ್ತಿಗಳು ಆಗಮಿಸಿದರೆ ಅವರು ಶಾರುಖ್​ರನ್ನು ಸ್ಮರಿಸಿಕೊಳ್ಳುತ್ತಾರೆ ಎಂದೂ ಅಭಿಮಾನಿಗಳು ಸಮರ್ಥನೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ, ‘ಬರಾಕ್ ಒಬಾಮ ದೆಹಲಿಗೆ ಬಂದಾಗ ಡಿಡಿಎಲ್​ಜೆ ಸಿನಿಮಾದ ಬಡೇ ಬಡೇ ದೇಶೋ ಮೇ ಡೈಲಾಗ್ ಹೇಳಿದ ಸಂದರ್ಭ’, ‘ಡೊನಾಲ್ಡ್ ಟ್ರಂಪ್ ಕೂಡ ಶಾರೂಖ್ ಖಾನ್ ಹೆಸರು ಹೇಳಿದ ಘಟನೆ’ ಸೇರಿದಂತೆ, ‘ಅನಾಥ ಮಕ್ಕಳಿಗೆ ಶಾರೂಖ್ ಖಾನ್ ಚಿಕಿತ್ಸೆ ಕೊಡಿಸಿದ ಉದಾಹರಣೆ’, ‘ಕೊರೊನಾ ಕಾಲದಲ್ಲಿ ತಮ್ಮ ಕಚೇರಿಯನ್ನು ಕ್ವಾರಂಟೈನ್ ಸೆಂಟರ್ ಮಾಡಿದ ವಿಚಾರ’ ಮೊದಲಾದ ಅಂಶಗಳನ್ನು ಪ್ರಸ್ತಾಪಿಸಿ ಶಾರುಖ್​ರನ್ನು ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ‘ಬಾಯ್ಕಾಟ್ ಶಾರುಖ್​ಗೆ ಪ್ರತಿಯಾಗಿ, ಅಭಿಮಾನಿಗಳಿಂದ ‘SRK ಪ್ರೈಡ್ ಆಫ್ ಇಂಡಿಯಾ’ ಹಾಗೂ ‘ವಿ ಲವ್ ಶಾರುಖ್’ ಟ್ರೆಂಡಿಂಗ್ ಆಗಿವೆ.

ಇದನ್ನೂ ಓದಿ:

ಪದೇ ಪದೇ ಮದ್ದೂರಿಗೆ ಭೇಟಿ: ಅಭಿಷೇಕ್ ಅಂಬರೀಶ್ ಮದ್ದೂರಿನಲ್ಲಿ ಚುನಾವಣೆಗೆ ನಿಲ್ತಾರಾ?

ನರೇಂದ್ರ ಮೋದಿ, ಅಕ್ಷಯ್, ರಜನಿಕಾಂತ್ ಸಾಲಿನಲ್ಲಿ ಅಜಯ್ ದೇವಗನ್, ವಿಕ್ಕಿ ಕೌಶಲ್; ಏನಿದು ಸಮಾಚಾರ?

(Boycott Shah Rukh Khan and we love Shah Rukh are trending on twitter here is the reason)

Published On - 11:37 am, Thu, 16 September 21

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ