AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big Breaking: ಸೋನು ಸೂದ್​ಗೆ ಸಂಕಷ್ಟ?; ನಟನಿಗೆ ಸೇರಿದ ಆರು ಜಾಗಗಳಲ್ಲಿ ಐಟಿ ಅಧಿಕಾರಿಗಳ ಸರ್ವೇ

ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಸೋನು ಸೂದ್​ಗೆ ಸಂಬಂಧಿಸಿದ ಆರು ಪ್ರದೇಶಗಳಲ್ಲಿ ಸರ್ವೇ ನಡೆಸಿದ್ದಾರೆ. ಈ ಮೂಲಕ ಐಟಿ ಇಲಾಖೆಗೆ ಅಕ್ರಮ ನಡೆದಿರುವ ವಾಸನೆ ಹೊಡೆದಿದೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ.

Big Breaking: ಸೋನು ಸೂದ್​ಗೆ ಸಂಕಷ್ಟ?; ನಟನಿಗೆ ಸೇರಿದ ಆರು ಜಾಗಗಳಲ್ಲಿ ಐಟಿ ಅಧಿಕಾರಿಗಳ ಸರ್ವೇ
ಸೋನು ಸೂದ್​
TV9 Web
| Edited By: |

Updated on:Sep 15, 2021 | 5:07 PM

Share

ನಟ ಸೋನು ಸೂದ್​ ಅವರು ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅವರನ್ನು ದೇವರಂತೆ ಅನೇಕರು ಪೂಜಿಸುತ್ತಿದ್ದಾರೆ. ಈಗ ನಟನಿಗೆ ಸಂಕಷ್ಟ ಒಂದು ಎದುರಾಗಿದೆ. ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಸೋನು ಸೂದ್​ಗೆ ಸಂಬಂಧಿಸಿದ ಆರು ಪ್ರದೇಶಗಳಲ್ಲಿ ಸರ್ವೇ ನಡೆಸಿದ್ದಾರೆ.  ಸದ್ಯ, ಈ ವಿಚಾರ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಅವ್ಯವಹಾರ ನಡೆದಿರುವ ಬಗ್ಗೆ ಐಟಿ ಇಲಾಖೆಗೆ ಮಾಹಿತಿ ಬಂದಿದೆ. ಈ ಕಾರಣಕ್ಕೆ ಸೋನು ಸೂದ್​ ಹಾಗೂ ಅವರಿಗೆ ಸೇರಿದ 6 ಲೊಕೇಷನ್​ಗಳಲ್ಲಿ ಐಟಿ ಇಲಾಖೆ ಸರ್ವೇ ನಡೆಸಿದೆ. ಇದು ಪ್ರಾಥಮಿಕ ತನಿಕೆ ಆಗಿದೆ.

ಸೋನು ಸೂದ್​ ಅವರು ಕಳೆದ ವರ್ಷ ಸಂಕಷ್ಟಕ್ಕೆ ಸಿಲುಕಿದ್ದರು. ಮುಂಬೈ ಮಹಾನಗರ ಪಾಲಿಕೆ ನಟನ ವಿರುದ್ಧ ದೂರೊಂದನ್ನು ದಾಖಲು ಮಾಡಿತ್ತು. ಜುಹುದಲ್ಲಿರುವ ಆರು ಅಂತಸ್ತಿನ ಕಟ್ಟಡವನ್ನು ಅವರು ಹೋಟೆಲ್​ ಆಗಿ ಬದಲಾಯಿಸಿದ್ದರು. ಆದರೆ, ಇದಕ್ಕೆ ಅವರು ಯಾವುದೇ ಒಪ್ಪಿಗೆ ಪಡೆದಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಆಗಿತ್ತು.

ಬಹುಭಾಷಾ ನಟ ಸೋನು ಸೂದ್​ ಅವರನ್ನು ಜನರೆಲ್ಲ ರಿಯಲ್​ ಹೀರೋ ಎಂದು ಒಪ್ಪಿಕೊಂಡಿದ್ದಾರೆ. ಸಿನಿಮಾ ಪರದೆ ಮೇಲೆ ಖಳನಾಯಕನಾಗಿ ಕಾಣಿಸಿಕೊಳ್ಳುವ ಅವರು ನಿಜಜೀವನದಲ್ಲಿ ಲಕ್ಷಾಂತರ ಜನರ ಪಾಲಿಗೆ ಆಪ್ತರಕ್ಷಕನಾಗಿದ್ದಾರೆ. ತಮ್ಮ ಆಸ್ತಿಪಾಸ್ತಿಯನ್ನೆಲ್ಲ ಮುಡಿಪಿಟ್ಟು ಬಡವರ, ಸಂಕಷ್ಟದಲ್ಲಿ ಇರುವವರ ಸಹಾಯಕ್ಕೆ ನಿಂತಿದ್ದಾರೆ. ತೀವ್ರ ಕಷ್ಟಕಾಲದಲ್ಲಿ ಅವರಿಂದ ಸಹಾಯ ಪಡೆದುಕೊಂಡವರು ತಮ್ಮ ಮನೆಗಳಲ್ಲಿ ಸೋನು ಸೂದ್ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಸೋನು ಸೂದ್​ ಅವರಿಂದ ಸಹಾಯ ಪಡೆದ ಅನೇಕರು ಋಣ ಹೇಗೆ ತೀರಿಸಬೇಕು ಎಂಬುದು ತಿಳಿಯದೇ ತಮ್ಮ ಮಕ್ಕಳಿಗೆ ಅವರದೇ ಹೆಸರಿಟ್ಟಿದ್ದಾರೆ. ಇನ್ನೂ ಕೆಲವರು ಅಂಗಡಿ ಹೆಸರನ್ನು ಬದಲಾಯಿಸಿದ್ದಾರೆ. ಅವರೆಲ್ಲರಿಗೂ ಈ ಸುದ್ದಿ ಕೇಳಿ ಬೇಸರವಾಗಿದೆ.

ಇದನ್ನೂ ಓದಿ: ‘ಈಗಾಗಲೇ ಸಾಮಾನ್ಯ ಜನರು ಬಡತನ, ನಿರುದ್ಯೋಗದ ಕಾರಣ 3ನೇ ಅಲೆಯನ್ನು ಅನುಭವಿಸುತ್ತಿದ್ದಾರೆ’: ಸೋನು ಸೂದ್

ಸೋನು ಸೂದ್ ಏರ್​ಲಿಫ್ಟ್ ಮಾಡಿದ್ದ ಹಿತೇಶ್ ಶರ್ಮಾ ನಿಧನ; ಭಾವಪೂರ್ಣ ಪೋಸ್ಟ್​​ ಮೂಲಕ ಮಕ್ಕಳಲ್ಲಿ ಕ್ಷಮೆ ಕೇಳಿದ ಸೋನು

Published On - 4:45 pm, Wed, 15 September 21

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್