ಅಕ್ಷಯ್​ ಕುಮಾರ್​ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್​​ಗೆ 1.2 ಕೋಟಿ ರೂ. ಸಂಬಳ; ಈ ವ್ಯಕ್ತಿಯ ಕೆಲಸಗಳೇನು?

ಅಕ್ಷಯ್​ ಕುಮಾರ್​ ಬಾಡಿ ಗಾರ್ಡ್​ ಹೆಸರು ಶ್ರೇಯಸ್​ ಟೇಲೆ. ಹಲವು ವರ್ಷಗಳಿಂದ ಅವರು ಅಕ್ಷಯ್​ ಕುಮಾರ್​ಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಅಕ್ಕಿಗೆ ಸಿಕ್ಕಾಪಟ್ಟೆ ನಂಬಿಕೆ.

ಅಕ್ಷಯ್​ ಕುಮಾರ್​ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್​​ಗೆ 1.2 ಕೋಟಿ ರೂ. ಸಂಬಳ; ಈ ವ್ಯಕ್ತಿಯ ಕೆಲಸಗಳೇನು?
ಅಕ್ಷಯ್​ ಕುಮಾರ್​ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್​​ಗೆ 1.2 ಕೋಟಿ ರೂ. ಸಂಬಳ
Follow us
TV9 Web
| Updated By: ಮದನ್​ ಕುಮಾರ್​

Updated on: Sep 14, 2021 | 3:32 PM

ಬಾಲಿವುಡ್​ನಲ್ಲಿ ಸದಾ ಕಾಲ ಬ್ಯುಸಿ ಆಗಿರುವ ನಟ ಅಕ್ಷಯ್​ ಕುಮಾರ್​ ಅವರು ಹೆಚ್ಚು ಸಮಯ ಶೂಟಿಂಗ್​ನಲ್ಲೇ ಕಳೆಯುತ್ತಾರೆ. ಪ್ರತಿ ವರ್ಷ ಅತಿ ಹೆಚ್ಚು ಸಿನಿಮಾ ಮಾಡುವ ಸ್ಟಾರ್​ಗಳ ಪಟ್ಟಿಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ಇರುತ್ತದೆ. ಸಿನಿಮಾ ಚಟುವಟಿಕೆ ಮಾತ್ರವಲ್ಲದೇ ಹತ್ತಾರು ಕೆಲಸಗಳ ನಿಮಿತ್ತ ಅವರು ಹೊರಗಡೆ ಸುತ್ತಾಡಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಅವರ ರಕ್ಷಣೆಗೆ ಒರ್ವ ಅಂಗರಕ್ಷಕನನ್ನು ನೇಮಿಸಿಕೊಂಡಿದ್ದಾರೆ. ಆ ಬಾಡಿಗಾರ್ಡ್​ಗೆ ಅಕ್ಷಯ್​ ಕುಮಾರ್​ ವಾರ್ಷಿಕೆ 1.2 ಕೋಟಿ ರೂ. ನೀಡುತ್ತಾರೆ ಎಂಬುದು ಅಚ್ಚರಿಯ ಮಾಹಿತಿ!

ಅಕ್ಷಯ್​ ಕುಮಾರ್​ ಬಾಡಿ ಗಾರ್ಡ್​ ಹೆಸರು ಶ್ರೇಯಸ್​ ಟೇಲೆ. ಹಲವು ವರ್ಷಗಳಿಂದ ಅವರು ಅಕ್ಷಯ್​ ಕುಮಾರ್​ಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಅಕ್ಕಿಗೆ ಸಿಕ್ಕಾಪಟ್ಟೆ ನಂಬಿಕೆ. ಅಕ್ಷಯ್​ ಎಂಥದ್ದೇ ಜನಜಂಗುಳಿಯ ಪ್ರದೇಶದಲ್ಲಿ ಇದ್ದರೂ ಕೂಡ ಅವರನ್ನು ಶ್ರೇಯಸ್​ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಇದು ಅವರ ಮುಖ್ಯ ಕೆಲಸ. ಇದಲ್ಲದೆ ಅವರು ಅಕ್ಷಯ್​ ಕುಟುಂಬದವರ ರಕ್ಷಣೆಯನ್ನೂ ಮಾಡುತ್ತಾರೆ. ಅಕ್ಷಯ್​ ಕುಮಾರ್​ ಪುತ್ರ ಆರವ್​ ಎಲ್ಲಿಗೆ ಹೋದರೂ ಕೂಡ ಅವರ ಜೊತೆ ಶ್ರೇಯಸ್​ರನ್ನು ಕಳಿಸಿಕೊಡಲಾಗುತ್ತದೆ. ಈ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಕ್ಕಾಗಿ ಅವರಿಗೆ ವಾರ್ಷಿಕ 1.2 ಕೋಟಿ ರೂ. ಸಂಬಳ ಸಿಗುತ್ತಿದೆ. ಅಂದರೆ, ಪ್ರತಿ ತಿಂಗಳು ಅವರಿಗೆ 10 ಲಕ್ಷ ರೂ. ಸಂಬಳ ನೀಡುತ್ತಾರೆ ಅಕ್ಷಯ್​ ಕುಮಾರ್​.

ಅಕ್ಷಯ್ ಕುಮಾರ್​ ಮಾತ್ರವಲ್ಲದೇ ಸಲ್ಮಾನ್​ ಖಾನ್​, ಶಾರುಖ್​ ಖಾಣ್​, ದೀಪಿಕಾ ಪಡುಕೋಣೆ ಮುಂತಾದವರು ಕೂಡ ತಮ್ಮ ಬಾಡಿಗಾರ್ಡ್​ಗಳಿಗೆ ಕೋಟಿಗಟ್ಟಲೆ ಸಂಬಳ ನೀಡುತ್ತಾರೆ. ಸಲ್ಮಾನ್​ ಬಾಡಿಗಾರ್ಡ್​ ಶೇರಾ ಅವರು ವಾರ್ಷಿಕ 2 ಕೋಟಿ ರೂ. ಸಂಬಳ ಪಡೆಯುತ್ತಾರೆ. ಶಾರುಖ್​ ಖಾನ್​ ಬಾಡಿಗಾರ್ಡ್​ ರವಿ ವಾರ್ಷಿಕ 2.7 ಕೋಟಿ ರೂ. ಪಡೆಯುವ ಮೂಲಕ ಅತಿ ದುಬಾರಿ ಬಾಡಿಗಾರ್ಡ್​ ಎನಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಬಾಡಿಗಾರ್ಡ್​ ಜಲಾಲ್​ ಹಾಗೂ ಅನುಷ್ಕಾ ಶರ್ಮಾ-ವಿರಾಟ್​ ಕೊಹ್ಲಿ ಬಾಡಿಗಾರ್ಡ್​ ಪ್ರಕಾಶ್​ ಸಿಂಗ್​ಗೆ ತಲಾ 1.2 ಕೋಟಿ ರೂ. ಸಿಗುತ್ತಿದೆ. ಅಮಿತಾಭ್​ ಬಚ್ಚನ್​ ಅವರ ಅಂಗರಕ್ಷಕ ಜೀತೇಂದ್ರ ಅವರು ವಾರ್ಷಿಕ 1.5 ಕೋಟಿ ರೂ. ಸಂಬಳ ಪಡೆಯುತ್ತಾರೆ.

ಇದನ್ನೂ ಓದಿ:

ತಾಯಿ ಸತ್ತ ಮರುದಿನವೇ ಅಕ್ಷಯ್​ ಕುಮಾರ್​ ಹುಟ್ಟುಹಬ್ಬ; ಅಮ್ಮನ ಬಗ್ಗೆ ನಟನ ಭಾವುಕ ಮಾತು​

‘ಅಕ್ಷಯ್​ ಕುಮಾರ್​ ಸಿನಿಮಾ ನೋಡೋರಿಗೆ ನಾಚಿಕೆ ಆಗ್ಬೇಕು’; ಘೋಷಣೆ ಕೂಗಿ ಪ್ರತಿಭಟಿಸಿದ ಪಂಜಾಬ್​ ರೈತರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ