AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಕ್ಷಯ್​ ಕುಮಾರ್​ ಸಿನಿಮಾ ನೋಡೋರಿಗೆ ನಾಚಿಕೆ ಆಗ್ಬೇಕು’; ಘೋಷಣೆ ಕೂಗಿ ಪ್ರತಿಭಟಿಸಿದ ಪಂಜಾಬ್​ ರೈತರು

Bell Bottom: ಪಂಜಾಬ್​ನ ಹಲವು ಥಿಯೇಟರ್​ಗಳಲ್ಲಿ ‘ಬೆಲ್​ ಬಾಟಂ’ ಪ್ರದರ್ಶನ ಮಾಡದಂತೆ ರೈತರು ಒತ್ತಾಯ ಹೇರಿದ್ದಾರೆ. ಅದರ ನಡುವೆಯೂ ಕೆಲವು ಚಿತ್ರಮಂದಿರಗಳು ಈ ಸಿನಿಮಾವನ್ನು ಪ್ರದರ್ಶಿಸುತ್ತಿವೆ.

‘ಅಕ್ಷಯ್​ ಕುಮಾರ್​ ಸಿನಿಮಾ ನೋಡೋರಿಗೆ ನಾಚಿಕೆ ಆಗ್ಬೇಕು’; ಘೋಷಣೆ ಕೂಗಿ ಪ್ರತಿಭಟಿಸಿದ ಪಂಜಾಬ್​ ರೈತರು
ಬೆಲ್​ ಬಾಟಂ ಚಿತ್ರದಲ್ಲಿ ಅಕ್ಷಯ್​ ಕುಮಾರ್
TV9 Web
| Updated By: ಮದನ್​ ಕುಮಾರ್​|

Updated on: Aug 27, 2021 | 7:58 AM

Share

ವರ್ಷಕ್ಕೆ ಕನಿಷ್ಠ ಮೂರು ಸಿನಿಮಾಗಳನ್ನು ಮಾಡುತ್ತ, ಅಭಿಮಾನಿಗಳನ್ನು ರಂಜಿಸೋಕೆ ಪ್ರಯತ್ನಿಸುತ್ತಾರೆ ನಟ ಅಕ್ಷಯ್​ ಕುಮಾರ್​. ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ಅವರ ಈ ವೇಗಕ್ಕೆ ಬ್ರೇಕ್​ ಬಿದ್ದಿದೆ. ಬಹುದಿನಗಳ ಬಳಿಕ ಅಕ್ಷಯ್​ ಕುಮಾರ್​ ನಟನೆಯ ‘ಬೆಲ್​ ಬಾಟಂ’ ಸಿನಿಮಾ ತೆರೆಕಂಡಿದೆ. ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್​ ಆಫೀಸ್​ನಲ್ಲಿ ಸಾಧಾರಣ ಗಳಿಕೆ ಮಾಡುತ್ತಿರುವ ‘ಬೆಲ್​ ಬಾಟಂ’ ವಿರುದ್ಧ ಪಂಜಾಬ್​ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.

ಪಂಜಾಬ್​ನ ಹಲವು ಥಿಯೇಟರ್​ಗಳಲ್ಲಿ ಈ ಸಿನಿಮಾ ಪ್ರದರ್ಶನ ಮಾಡದಂತೆ ರೈತರು ಒತ್ತಾಯ ಹೇರಿದ್ದಾರೆ. ಅದರ ನಡುವೆಯೂ ಕೆಲವು ಚಿತ್ರಮಂದಿರಗಳು ‘ಬೆಲ್​ ಬಾಟಂ’ ಪ್ರದರ್ಶಿಸುತ್ತಿವೆ. ಸಿನಿಮಾ ನೋಡಲು ಅಕ್ಷಯ್​ ಕುಮಾರ್​ ಅಭಿಮಾನಿಗಳು ಮುಗಿಬಿದ್ದು ಸಾಗುತ್ತಿದ್ದಾರೆ. ಅಂತಹ ಒಂದು ಚಿತ್ರಮಂದಿರದ ಎದುರು ರೈತರು ಪ್ರತಿಭಟನೆ ನಡೆಸಿದ್ದಾರೆ. ‘ಅಕ್ಷಯ್​ ಕುಮಾರ್​ ಸಿನಿಮಾ ನೋಡುವವರಿಗೆ ನಾಚಿಕೆ ಆಗ್ಬೇಕು’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ.

ಅಷ್ಟಕ್ಕೂ ಪಂಜಾಬ್​ ರೈತರ ಕೋಪಕ್ಕೆ ಕಾರಣ ಏನು? ಅವರ ಬಗ್ಗೆ ಈ ಸಿನಿಮಾದಲ್ಲಿ ಏನಾದರೂ ಆಕ್ಷೇಪಾರ್ಹ ಅಂಶಗಳಿವೆಯೇ? ಹಾಗೇನೂ ಇಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಯನ್ನು ವಿರೋಧಿಸಿ ಪಂಜಾಬ್​ ರೈತರು ಬೃಹತ್​ ಪ್ರತಿಭಟನೆ ನಡೆಸಿದ್ದರು. ಅದರ ಬಗ್ಗೆ ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆಗ ಅಕ್ಷಯ್​ ಕುಮಾರ್​ ಅವರು ಆ ಪ್ರತಿಭಟನೆಯನ್ನು ‘ಒಂದು ಪ್ರಚಾರ’ ಎಂದು ಟೀಕಿಸಿದ್ದರು. ಅದಕ್ಕಾಗಿಯೇ ಈಗ ಪಂಜಾಬ್ ರೈತರು ಅಕ್ಷಯ್​ ಕುಮಾರ್​ ನಟನೆಯ ಸಿನಿಮಾವನ್ನು ಬಹಿಷ್ಕರಿಸುತ್ತಿದ್ದಾರೆ. ಇಂಥ ನಟನ ಸಿನಿಮಾವನ್ನು ನೋಡುವ ಪಂಜಾಬ್​ ಜನರಿಗೆ ನಾಚಿಕೆ ಆಗಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ.

ದೇಶದ ಹಲವೆಡೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊವಿಡ್​ಗೆ ಹೆದರಿಕೊಂಡು ಬಹುತೇಕರು ಚಿತ್ರಮಂದಿರದ ಕಡೆಗೆ ಬರುತ್ತಿಲ್ಲ. ಇಂಥ ಕಷ್ಟದ ಪರಿಸ್ಥಿತಿಯಲ್ಲೂ ‘ಬೆಲ್​ ಬಾಟಂ’ ಸಿನಿಮಾ ಬಿಡುಗಡೆ ಮಾಡುವ ಧೈರ್ಯವನ್ನು ನಿರ್ಮಾಪಕರು ತೋರಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ವಾಣಿ ಕಪೂರ್​, ಲಾರಾ ದತ್ತಾ, ಹುಮಾ ಖುರೇಷಿ, ಆದಿಲ್​ ಹುಸೇನ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಂಜಿತ್​ ಎಂ. ತಿವಾರಿ ನಿರ್ದೇಶನ ಮಾಡಿದ್ದಾರೆ. ಈವರೆಗೂ ‘ಬೆಲ್​ ಬಾಟಂ’ ಸಿನಿಮಾ 17.40 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ:

ಬಾಲಿವುಡ್ ಪಾರ್ಟಿಗಳೆಂದರೆ ಅಕ್ಷಯ್​ ಕುಮಾರ್​​ಗೆ ಅಲರ್ಜಿ? ಇದರ ಹಿಂದಿದೆ ಇಂಟರೆಸ್ಟಿಂಗ್​ ವಿಚಾರ

Akshay Kumar: ಪಾಕಿಸ್ತಾನದ ಬಗ್ಗೆ ಅಕ್ಷಯ್​ ಕುಮಾರ್​ ಪ್ರೀತಿಯ ಮಾತು; ವಿಡಿಯೋ ವೈರಲ್​ ಮಾಡಿದ ಕಮಾಲ್​ ಖಾನ್​

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ