ಕೌಟುಂಬಿಕ ದೌರ್ಜನ್ಯ ಆರೋಪದ ನಂತರ ಮೊದಲ ಬಾರಿಗೆ ಹೊಸ ಹಾಡಿನ ಪೋಸ್ಟ್ ಹಂಚಿಕೊಂಡ ಯೋ ಯೋ ಹನಿ ಸಿಂಗ್

Honey Singh: ಖ್ಯಾತ ಬಾಲಿವುಡ್ ಗಾಯಕ ಯೋ ಯೋ ಹನಿ ಸಿಂಗ್ ತಮ್ಮ ಮುಂದಿನ ಹಾಡಿನ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ಕೌಟುಂಬಿಕ ದೌರ್ಜನ್ಯ ಆರೋಪದ ನಂತರ ಮೊದಲ ಬಾರಿಗೆ ಹೊಸ ಹಾಡಿನ ಪೋಸ್ಟ್ ಹಂಚಿಕೊಂಡ ಯೋ ಯೋ ಹನಿ ಸಿಂಗ್
ಯೋ ಯೋ ಹನಿ ಸಿಂಗ್
Follow us
TV9 Web
| Updated By: shivaprasad.hs

Updated on: Aug 26, 2021 | 5:39 PM

ಬಾಲಿವುಡ್​ನ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಯೋ ಯೋ ಹನಿ ಸಿಂಗ್ ವೈವಾಹಿಕ ದೌರ್ಜನ್ಯದ ಆರೋಪದ ನಂತರ ಮೊದಲ ಬಾರಿಗೆ ತಮ್ಮ ನೂತನ ಹಾಡಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹನಿ ಸಿಂಗ್ ವಿರುದ್ಧ ಅವರ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದರು. ಜೊತೆಗೆ ಹನಿ ಸಿಂಗ್ ಅವರಿಗೆ ಅಕ್ರಮ ಸಂಬಂಧವಿದೆ ಎಂದೂ ಅವರು ಆರೋಪಿಸಿದ್ದರು. ನಂತರದಲ್ಲಿ ಹನಿ ಸಿಂಗ್ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲೇ ಒಂದು ಸ್ಪಷ್ಟೀಕರಣವನ್ನು ಕೊಟ್ಟಿದ್ದರು. ಇದೀಗ ಹನಿ ಸಿಂಗ್, ತಮ್ಮ ನೂತನ ಆಲ್ಬಂ ಸಾಂಗ್​ನ ಮಾಹಿತಿಗಳನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

ಹನಿ ಸಿಂಗ್ ಮುಂದಿನ ಆಲ್ಬಂ ಯಾವುದು? ಬಾಲಿವುಡ್​ನ ಸಂಗೀತದಲ್ಲಿ ಹೆಸರು ಮಾಡಿರುವ ಖ್ಯಾತರಾದ ಟೋನಿ ಕಕ್ಕರ್ ಹಾಗೂ ನೇಹಾ ಕಕ್ಕರ್ ಅವರೊಂದಿಗೆ ಹನಿ ಸಿಂಗ್ ತಮ್ಮ ನೂತನ ಹಾಡಿಗೆ ಜೊತೆಯಾಗಲಿದ್ದಾರೆ. ಹನಿ ಸಿಂಗ್ ತಿಳಿಸಿರುವ ಪ್ರಕಾರ, ನೂತನ ಹಾಡಿನ ಸಾಹಿತ್ಯವನ್ನು ಬರೆದು, ಸಂಗೀತವನ್ನು ನೀಡಿರುವುದು ಟೋನಿ ಕಕ್ಕರ್. ಇದರೊಂದಿಗೆ ಹಾಡಿನ ಭರ್ಜರಿ ಧಮಾಕಾದ ಸುಳಿವನ್ನೂ ನೀಡಿರುವ ಹನಿ ಸಿಂಗ್, ಈ ವರ್ಷದ ಅತ್ಯಂತ ದೊಡ್ಡ ಹಾಡಾಗಲಿದೆ ಇದು ಎಂದು ಬರೆದುಕೊಂಡಿದ್ದಾರೆ. ಹಾಡಿಗೆ ‘ಕಂಟಾ ಲಗಾ’ ಎಂಬ ಶೀರ್ಷಿಕೆ ನೀಡಲಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹನಿ ಸಿಂಗ್ ತಿಳಿಸಿದ್ದಾರೆ.

ಹನಿ ಸಿಂಗ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಇದಕ್ಕೂ ಮುನ್ನ ಹನಿ ಸಿಂಗ್ ತಮ್ಮ ಪತ್ನಿ ಶಾಲಿನಿ ಮಾಡಿದ ಆರೋಪಕ್ಕೆ ಸಾಮಾಜಿಕ ಜಾಲತಾಣಗಳ ಮುಖಾಂತರವೇ ಉತ್ತರ ಕೊಟ್ಟಿದ್ದರು. ‘ಕಳೆದ 15 ವರ್ಷಗಳಿಂದ ಈ ಇಂಡಸ್ಟ್ರಿಯಲ್ಲಿದ್ದೇನೆ. ದೇಶ-ವಿದೇಶದ ಹಲವು ಕಲಾವಿದರು ಮತ್ತು ಸಂಗೀತಗಾರರ ಜೊತೆ ಕೆಲಸ ಮಾಡಿದ್ದೇನೆ. ಪತ್ನಿ ಜೊತೆ ನನ್ನ ಸಂಬಂಧ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆಕೆ ಕೂಡ ನನ್ನ ಕಾರ್ಯಕ್ಷೇತ್ರದ ಭಾಗವಾಗಿರುತ್ತಿದ್ದಳು. ನಾನು ಹೋದಲೆಲ್ಲ ಬರುತ್ತಿದ್ದಳು. ಆಕೆ ಮಾಡಿದ ಎಲ್ಲ ಆರೋಪಗಳನ್ನು ನಾನು ಅಲ್ಲಗಳೆಯುತ್ತೇನೆ. ಆದರೆ ಹೆಚ್ಚಿನ ಕಮೆಂಟ್​ ಮಾಡುವುದಿಲ್ಲ. ಯಾಕೆಂದರೆ ಈ ಪ್ರಕರಣ ಈಗ ಕೋರ್ಟ್​ನಲ್ಲಿದೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:

ಅಕ್ರಮ ಸಂಬಂಧ ಮತ್ತು ಪತ್ನಿ ಮೇಲೆ ಹಲ್ಲೆ ಆರೋಪ; ಮೊದಲ ಬಾರಿಗೆ ಮೌನ ಮುರಿದ ಯೋ ಯೋ ಹನಿ ಸಿಂಗ್​

ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಪಡೆಯುವ ಅಮಿತಾಭ್ ‘ಚೆಹ್ರೆ’ ಚಿತ್ರಕ್ಕೆ ಸಂಭಾವನೆಯೇ ಪಡೆದಿಲ್ಲ; ಅಚ್ಚರಿಯ ಕಾರಣ ಇಲ್ಲಿದೆ

(Honey Singh opens up about his new project Kanta Lagaa with Kakkar Siblings)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ