AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಪಡೆಯುವ ಅಮಿತಾಭ್ ‘ಚೆಹ್ರೆ’ ಚಿತ್ರಕ್ಕೆ ಸಂಭಾವನೆಯೇ ಪಡೆದಿಲ್ಲ; ಅಚ್ಚರಿಯ ಕಾರಣ ಇಲ್ಲಿದೆ

ಬಾಲಿವುಡ್ ಬಿಗ್​ಬಿ ಅಮಿತಾಭ್ ಬಚ್ಚನ್ ತಮ್ಮ ನೂತನ ಚಿತ್ರ ‘ಚೆಹ್ರೆ’ಗೆ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದಿಲ್ಲವಂತೆ. ಅದರ ಕುರಿತಾದ ಅಚ್ಚರಿಯ ವಿಚಾರ ಇಲ್ಲಿದೆ.

ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಪಡೆಯುವ ಅಮಿತಾಭ್ 'ಚೆಹ್ರೆ' ಚಿತ್ರಕ್ಕೆ ಸಂಭಾವನೆಯೇ ಪಡೆದಿಲ್ಲ; ಅಚ್ಚರಿಯ ಕಾರಣ ಇಲ್ಲಿದೆ
ಅಮಿತಾಭ್ ಬಚ್ಚನ್ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Aug 26, 2021 | 4:44 PM

Share

ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಚೆಹ್ರೆ’ ಚಿತ್ರವು ಬಿಡುಗಡೆಗೆ ಕಾದು ಕುಳಿತಿದೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕೆಲವೊಂದು ಕುತೂಹಲಕರ ವಿಚಾರಗಳು ಬೆಳಕಿಗೆ ಬರುತ್ತಿವೆ. ಚಿತ್ರದ ನಿರ್ಮಾಪಕ ಆನಂದ್ ಪಂಡಿತ್ ಇತ್ತೀಚೆಗೆ ಹಂಚಿಕೊಂಡ ಒಂದು ಮಾಹಿತಿ ಸಖತ್ ಸುದ್ದಿ ಮಾಡುತ್ತಿದ್ದು, ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಕಾರಣ, ಆನಂದ್ ಹೇಳಿರುವಂತೆ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಅಮಿತಾಭ್ ಬಚ್ಚನ್ ಚಿತ್ರಕ್ಕೆ ಸಂಭಾವನೆಯನ್ನೇ ಪಡೆದಿಲ್ಲವಂತೆ. ಜೊತೆಗೆ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳುವಾಗಲೂ ಸ್ವತಃ ತಮ್ಮ ಹಣದಿಂದ ಪ್ರಯಾಣ ಮಾಡಿದ್ದರಂತೆ. ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಅಮಿತಾಭ್ ಅವರ ಈ ನಡೆಯಿಂದ ಎಲ್ಲರಿಗೂ ಅಚ್ಚರಿಯಾಗಿದೆ.

ನಿರ್ಮಾಪಕ ಆನಂದ್ ಪಂಡಿತ್ ಅಮಿತಾಭ್ ಸಂಭಾವನೆ ಪಡೆಯದೇ ಇರುವ ಕಾರಣವನ್ನೂ ತಿಳಿಸಿದ್ದಾರೆ. ತೆರಿಗೆಯ ಕಾರಣದಿಂದಾಗಿ ಅಮಿತಾಭ್ ಅವರಿಗೆ ಚಿತ್ರದಲ್ಲಿ ‘ಅತಿಥಿ ಪಾತ್ರ’ ಎಂಬ ಕ್ರೆಡಿಟ್ ನೀಡಲಾಗಿದೆಯಂತೆ. ‘‘ತೆರಿಗೆಯ ದಾಖಲಾತಿಗಳಲ್ಲಿ ಅನಾವಶ್ಯಕ ಗೊಂದಲವೇರ್ಪಡುವ ಕಾರಣದಿಂದಾಗಿ ನಾವು ಆ ನಿರ್ಧಾರ ಕೈಗೊಂಡೆವು. ಇದಕ್ಕೆ ಸಂಪೂರ್ಣ ಬದ್ಧರಾದ ಅಮಿತಾಭ್, ವಿದೇಶ ಪ್ರಯಾಣಕ್ಕೂ ತಮ್ಮ ಸ್ವಂತ ಹಣವನ್ನು ಉಪಯೋಗಿಸಿದರು. ಇದು ಅವರ ಬದ್ಧತೆಯನ್ನು ತೋರಿಸುತ್ತದೆ’’ ಎಂದು ಆನಂದ್ ಬಿಗ್​ಬಿ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ.

ಮಿಸ್ಟರಿ- ಥ್ರಿಲ್ಲರ್ ಮಾದರಿಯಲ್ಲಿರುವ ಈ ಚಿತ್ರ ಈಗಾಗಲೇ ತನ್ನ ತಾರಾಗಣದಿಂದ ಕುತೂಹಲ ಕೆರಳಿಸಿದೆ. ಅಮಿತಾಭ್​ರೊಂದಿಗೆ ಇಮ್ರಾನ್ ಹಶ್ಮಿ, ಕ್ರಿಸ್ಟಲ್ ಡಿಸೋಜಾ, ರಿಯಾ ಚಕ್ರವರ್ತಿ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಮಿತಾಭ್ ಬತ್ತಳಿಕೆಯಲ್ಲಿ ಈ ಚಿತ್ರವಲ್ಲದೇ ಹಲವು ಚಿತ್ರಗಳಿವೆ.  ‘ಬ್ರಹ್ಮಾಸ್ತ್ರ’, ‘ಮೇಡೇ’, ‘ಗುಡ್​ ಬೈ’ ಮೊದಲಾದ ಚಿತ್ರಗಳಲ್ಲಿ ಅಮಿತಾಭ್ ಕಾಣಿಸಿಕೊಳ್ಳುತ್ತಿದ್ದು, ಜೊತೆಜೊತೆಗೆ ಕೌನ್ ಬನೇಗಾ ಕರೋಡ್​ ಪತಿಯ 13ನೇ ಸೀಸನ್​ ಕೂಡಾ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ:

ಮುಗ್ಧ ನೋಟ ಮತ್ತು ಆಕರ್ಷಕ ಮೈಮಾಟದ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಮೊದಲು ಡುಮ್ಮಿಯಾಗಿದ್ದಳು ಅಂತ ನಿಮಗೆ ಗೊತ್ತಾ?

ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ ಕೇಳಿ, ನಟನೆಯಿಂದ ಬ್ರೇಕ್​ ಪಡೆದ ಸಮಂತಾ ಅಕ್ಕಿನೇನಿ 

(Amitabh Bachchan does not take any payment for his movie Chehre says producer Anand Pandit)

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು