AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾ ಏನಿಂಥ ಅಚ್ಚರಿ; ಬದ್ಧ ವೈರಿ ಕರಣ್​ ಜೋಹರ್​ ಕೆಲಸಕ್ಕೆ ಮನಸಾರೆ ಹೊಗಳಿದ ಕಂಗನಾ ರಣಾವತ್​

ಕರಣ್​ ಜೋಹರ್​ ನಿರ್ಮಿಸಿರುವ ‘ಶೇರ್ಷಾ’ ಚಿತ್ರವನ್ನು ಕಂಗನಾ ಮೆಚ್ಚಿಕೊಂಡಿದ್ದಾರೆ. ಅವರ ಹೊಗಳಿಕೆಯ ಮಾತುಗಳಿಗೆ ಕರಣ್​ ಜೋಹರ್​ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ತಿಳಿದುಕೊಳ್ಳಲು ಸಿನಿಪ್ರಿಯರು ಕಾಯುತ್ತಿದ್ದಾರೆ.

ಆಹಾ ಏನಿಂಥ ಅಚ್ಚರಿ; ಬದ್ಧ ವೈರಿ ಕರಣ್​ ಜೋಹರ್​ ಕೆಲಸಕ್ಕೆ ಮನಸಾರೆ ಹೊಗಳಿದ ಕಂಗನಾ ರಣಾವತ್​
ಕಂಗನಾ ರಣಾವತ್​, ಕಿಯಾರಾ ಅಡ್ವಾಣಿ
TV9 Web
| Edited By: |

Updated on: Aug 26, 2021 | 3:41 PM

Share

ಸದಾ ಕಾಲ ವಿವಾದಗಳಿಂದಲೇ ಸುದ್ದಿಯಾಗುತ್ತಾರೆ ನಟಿ ಕಂಗನಾ ರಣಾವತ್​. ಬಾಲಿವುಡ್​ ಸೆಲೆಬ್ರಿಟಿಗಳ ಪೈಕಿ ಅನೇಕರ ಜೊತೆ ಅವರು ವಿರೋಧ ಕಟ್ಟಿಕೊಂಡಿದ್ದಾರೆ. ಅದರಲ್ಲೂ ನಿರ್ದೇಶಕ-ನಿರ್ಮಾಪಕ ಕರಣ್​ ಜೋಹರ್​ (Karan Johar) ಅವರನ್ನು ಕಂಡರೆ ಕಂಗನಾಗೆ ಆಗುವುದೇ ಇಲ್ಲ. ಅವಕಾಶ ಸಿಕ್ಕಾಗಲೆಲ್ಲ ಅವರು ಕರಣ್​ ಮಾಡಿರುವ ಕೆಲಸಗಳನ್ನು ಖಂಡಿಸುತ್ತಲೇ ಇರುತ್ತಾರೆ. ಬಾಲಿವುಡ್​ನಲ್ಲಿ ನೆಪೋಟಿಸಂ ಹಬ್ಬಲು ಪ್ರಮುಖ ಕಾರಣವೇ ಕರಣ್​ ಜೋಹರ್​ ಎಂಬುದು ಕಂಗನಾ (Kangana Ranaut) ಆರೋಪ. ಆದರೆ ಈಗ ಅದೇ ಕಂಗನಾ ಅವರು ಕರಣ್​ ನಿರ್ಮಿಸಿರುವ ‘ಶೇರ್ಷಾ’ (Shershaah Movie) ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

ಶೇರ್ಷಾ ಸಿನಿಮಾದಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಕರಣ್​ ಜೋಹರ್​ ಅವರ ‘ಧರ್ಮ ಪ್ರೊಡಕ್ಷನ್ಸ್​’ ಬ್ಯಾನರ್​ನಲ್ಲಿ ಈ ಸಿನಿಮಾ ತಯಾರಾಗಿದೆ. ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆ ಆಗಿರುವ ಈ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಕಂಗನಾ ರಣಾವತ್​ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಕಾರ್ಗಿಲ್​ ಯುದ್ಧದಲ್ಲಿ ಮಡಿದ ‘ಪರಮವೀರ ಚಕ್ರ’ ಪುರಸ್ಕೃತ ವಿಕ್ರಮ್​ ಭಾತ್ರಾ ಜೀವನವನ್ನು ಆಧರಿಸಿ ‘ಶೇರ್ಷಾ’ ಸಿನಿಮಾ ಮೂಡಿಬಂದಿದೆ. ಇದು ಕಂಗನಾಗೆ ಮೆಚ್ಚುಗೆ ಆಗಿದೆ. ‘ನ್ಯಾಷನಲ್​ ಹೀರೋ ವಿಕ್ರಮ್​ ಭಾತ್ರಾ ಅವರು ಹಿಮಾಚಲದವರಾಗಿದ್ದರು. ತುಂಬ ಜನಪ್ರಿಯ ಮತ್ತು ಪ್ರೀತಿಪಾತ್ರ ಸೈನಿಕನಾಗಿದ್ದರು. ಅವರ ದುರಂತ ಅಂತ್ಯವಾದಾಗ ಹಿಮಾಚಲದಲ್ಲಿ ಆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಬಾಲಕಿಯಾಗಿದ್ದ ನಾನು ಹಲವು ದಿನಗಳ ಕಾಲ ನೋವಿನಲ್ಲಿ ಮುಳುಗಿದ್ದು ಈಗಲೂ ನೆನಪಿದೆ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಚಿತ್ರದ ಹೀರೋ ಸಿದ್ಧಾರ್ಥ್​ ಮಲ್ಹೋತ್ರಾ ಅವರ ಫೋಟೋವನ್ನು ಕಂಗನಾ ಹಂಚಿಕೊಂಡಿದ್ದಾರೆ. ‘ಸಿದ್ಧಾರ್ಥ್​ ಮಲ್ಹೋತ್ರಾ ಅವರಿಂದ ಎಂಥ ಅದ್ಭುತವಾದ ನಮನ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಒಂದು ದೊಡ್ಡ ಜವಾಬ್ದಾರಿಯನ್ನು ನೀವು ನಿಭಾಯಿಸಿದ್ದೀರಿ’ ಎಂದು ಅವರು ಬರೆದುಕೊಂಡಿದ್ದಾರೆ. ಕಂಗನಾರ ಈ ಮಾತುಗಳಿಗೆ ಕರಣ್​ ಜೋಹರ್​ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ತಿಳಿದುಕೊಳ್ಳಲು ಸಿನಿಪ್ರಿಯರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:

Kangana Ranaut: ವಾಯುಸೇನೆ ಸಮವಸ್ತ್ರ ಧರಿಸಿದ ಕಂಗನಾ ರಣಾವತ್​ ಫೋಟೋ ವೈರಲ್​

ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್?: ಬಾಲಿವುಡ್​ ಅಂಗಳದಿಂದ ಹೊರ ಬಿತ್ತು ಹೊಸ ಸುದ್ದಿ​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್