ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್?: ಬಾಲಿವುಡ್​ ಅಂಗಳದಿಂದ ಹೊರ ಬಿತ್ತು ಹೊಸ ಸುದ್ದಿ​

ಸದ್ಯ ‘ಧಕಾಡ್’ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿರುವ ಕಂಗನಾ, ‘ಅಪರಾಜಿತ ಅಯೋಧ್ಯ’, ‘ಮಣಿಕರ್ಣಿಕಾ ರಿಟರ್ನ್ಸ್’ ಕೆಲಸಗಳಲ್ಲೂ ಬ್ಯುಸಿಯಾಗಿದ್ದಾರೆ.

ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್?: ಬಾಲಿವುಡ್​ ಅಂಗಳದಿಂದ ಹೊರ ಬಿತ್ತು ಹೊಸ ಸುದ್ದಿ​
ನಟಿ ಕಂಗನಾ
TV9kannada Web Team

| Edited By: ganapathi bhat

Apr 06, 2022 | 8:31 PM

ನಟಿ ಕಂಗನಾ ರಣಾವತ್, ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಹರಿದಾಡಿದೆ. ಪೊಲಿಟಿಕಲ್ ಡ್ರಾಮಾ ಶೈಲಿಯಲ್ಲಿ ಸಿನಿಮಾ ಮೂಡಿ ಬರಲಿದ್ದು, ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಸಿನಿಮಾ ಬಯೋಪಿಕ್ ಅಲ್ಲ ಎಂಬ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳ ಬಗ್ಗೆ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುವ ಕಂಗನಾ, ಸಿನಿಮಾ ಆಯ್ಕೆಯಲ್ಲೂ ಚೂಸಿಯಾಗಿದ್ದಾರೆ. ಸದ್ಯ ‘ಧಕಾಡ್’ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿರುವ ಕಂಗನಾ, ‘ಅಪರಾಜಿತ ಅಯೋಧ್ಯ’, ‘ಮಣಿಕರ್ಣಿಕಾ ರಿಟರ್ನ್ಸ್’ ಕೆಲಸಗಳಲ್ಲೂ ಬ್ಯುಸಿಯಾಗಿದ್ದಾರೆ.

ಪೊಲಿಟಿಕಲ್ ಡ್ರಾಮಾ, ಪೀರಿಯಾಡಿಕ್ ಸಿನಿಮಾ ಒಂದಕ್ಕೆ ನಾವು ಕೆಲಸ ಮಾಡುತ್ತಿದ್ದೇವೆ. ಚಿತ್ರದ ಸ್ಕ್ರಿಪ್ಟ್ ಕೆಲಸ ಅಂತಿಮ ಹಂತದಲ್ಲಿದೆ. ಈಗಿನ ಸಾಮಾಜಿಕ-ರಾಜಕೀಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಈ ಸಿನಿಮಾ ಸಹಕಾರಿಯಾಗಲಿದೆ. ನಾನು ಭಾರತದ ಇತಿಹಾಸ ಕಂಡ ಐಕಾನಿಕ್ ನಾಯಕಿಯೊಬ್ಬರ ಪಾತ್ರದಲ್ಲಿ ಕಾಣಿಸಿಕೊಳ್ಳಲು ಕಾತುರಳಾಗಿದ್ದೇನೆ. ಆದರೆ, ಇದು ಇಂದಿರಾ ಗಾಂಧಿ ಬಯೋಪಿಕ್ ಅಲ್ಲ ಎಂದು ಕಂಗನಾ ಹೇಳಿಕೆ ನೀಡಿದ್ದಾರೆ. ಚಿತ್ರದಲ್ಲಿ ಬಹಳಷ್ಟು ಪ್ರಮುಖ ನಟರು ಕಾಣಿಸಿಕೊಳ್ಳಲಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

‘ರಿವಾಲ್ವರ್ ರಾಣಿ’ ಚಿತ್ರದಲ್ಲಿ ಕಂಗನಾ ಜೊತೆ ಕೆಲಸ ಮಾಡಿದ್ದ, ಸಾಯಿ ಕಬೀರ್ ಈ ಸಿನಿಮಾವನ್ನು ಬರೆದು, ನಿರ್ದೇಶಿಸಲಿದ್ದಾರೆ. ಒಂದು ಪುಸ್ತಕ ಆಧಾರಿತ ಸಿನಿಮಾ ಇದಾಗಿರಲಿದೆ ಎಂದು ಕಂಗನಾ ತಿಳಿಸಿದ್ದಾರೆ. ಕಂಗನಾ ರಣಾವತ್ ಸ್ವತಃ ಸಿನಿಮಾ ನಿರ್ಮಾಣ ಮಾಡಲಿರುವ ಬಗ್ಗೆಯೂ ಮಾಹಿತಿ ದೊರಕಿದೆ. ಚಿತ್ರದಲ್ಲಿ, ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಪಾತ್ರಗಳು ಇರಲಿವೆ ಎಂದು ತಿಳಿದುಬಂದಿದೆ.

ಗೃಹಿಣಿಯರಿಗೆ ಸಂಬಳ: ಕಮಲ್ ಹಾಸನ್, ಶಶಿ ತರೂರ್ ಯೋಚನೆಗೆ ಕಂಗನಾ ವಿರೋಧ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada