Budget 2021 | ಕಿಸಾನ್ ರೈಲು: ಕೊರೊನಾ ಕಾಲದಲ್ಲಿ ಮಹದುಪಯೋಗ, ಹೆಚ್ಚಲಿದೆಯೇ ರೈತ ರೈಲುಗಳ ಸಂಖ್ಯೆ?
1.70 ಲಕ್ಷ ಕೋಟಿ ಮೊತ್ತವನ್ನು ರೈಲ್ವೇ ಬಜೆಟ್ಗೆ ನೀಡುವ ಸಂಭವವಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಕಿಸಾನ್ ರೈಲು ಯೋಜನೆಗೆ ಪುಷ್ಟಿ ಒದಗಿಸುವ ನಿರೀಕ್ಷೆಯಂತೂ ಹೆಚ್ಚಿದೆ. ಸರ್ಕಾರ ಶೈತ್ಯಾಗಾರ ಸೌಭ್ಯವಿರುವ ಇನ್ನಷ್ಟು ಕಿಸಾನ್ ರೈಲುಗಳನ್ನು ಆರಂಭಿಸಬೇಕಿದೆ ಎಂಬ ಕೂಗಂತೂ ರೈತ ಸಮುದಾಯದಿಂದ ಹೊಮ್ಮಿದೆ.

ಹಿಂದಿನ ವರ್ಷದ ಬಜೆಟ್ನಲ್ಲಿ ನೆನಪಾಗಲೇಬೇಕಾದ ಒಂದು ಯೋಜನೆ ಕಿಸಾನ್ ರೈಲು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಈ ಯೋಜನೆಗಳು ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರುವ ಸಾಧ್ಯತೆಗಳನ್ನು ಹುಟ್ಟುಹಾಕಿದ್ದವು.
ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಸಹಕಾರಿ ಮಾದರಿಯಲ್ಲಿ ಅಗಸ್ಟ್ 7ರಿಂದ ಮಹಾರಾಷ್ಟ್ರದಿಂದ ಬಿಹಾರದ ನಡುವೆ ಮೊದಲ ಕಿಸಾನ್ ರೈಲನ್ನು 2020ರ ಅಗಸ್ಟ್ 7ರಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದರು.
ಈ ರೈಲು ಮಹಾರಾಷ್ಟ್ರದ ನಾಸಿಕ್ನಿಂದ ಬಿಹಾರದ ದಾನಾಪುರ್ಗೆ ವಾರಕ್ಕೊಮ್ಮೆ ಸಂಚರಿಸುತ್ತಿತ್ತು. 31 ಗಂಟೆಗಳ ಅವಧಿ 1519 ಕಿಮೀ ದೂರದ ಈ ಮಾರ್ಗ ಕ್ರಮಿಸುತ್ತಿತ್ತು. ಹಣ್ಣು,ತರಕಾರಿ ಸೇರಿದಂತೆ ಕೆಲ ದಿನಗಳಷ್ಟೇ ಬಾಳಿಕೆ ಬರುವ ಆಹಾರ ವಸ್ತುಗಳನ್ನು ದೇಶದ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವುದು ಕಿಸಾನ್ ರೈಲ್ನ ಮುಖ್ಯ ಉದ್ದೇಶವಾಗಿದೆ. ಜತೆಗೆ, 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಸಾಧಿಸಲು ಮಹತ್ತರ ಕೊಡುಗೆ ನೀಡುವ ಉದ್ದೇಶದೊಂದಿಗೆ ಕಿಸಾನ್ ರೈಲ್ನ್ನು ಘೋಷಿಸಲಾಗಿತ್ತು. 2009-10ರಲ್ಲಿ ಮಮತಾ ಬ್ಯಾನರ್ಜಿ ಹಣಕಾಸು ಸಚಿವರಾಗಿದ್ದಾಗಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರವಾನಿಸುವ ಶೈತ್ಯಾಗಾರಗಳನ್ನು ಸ್ಥಾಪಿಸುವ ಕುರಿತು ಪ್ರಸ್ತಾಪಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಲೇಬೇಕು.
ಕೊರೊನಾ ಕಾಲದಲ್ಲಿ ಮಹದುಪಯೋಗ ಕಿಸಾನ್ ರೈಲುಗಳ ಮೂಲಕವೇ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ಆಹಾರ ಸಾಮಾಗ್ರಿಗಳ ಸಾಗಾಟವನ್ನು ರೈಲ್ವೇ ಇಲಾಖೆ ನಡೆಸಿತ್ತು. ಅಲ್ಲದೇ, 100 ಕಿಸಾನ್ ರೈಲುಗಳನ್ನು 2020ರ ವರ್ಷಾಂತ್ಯದಲ್ಲಿ ಆರಂಭಿಸಲಾಗಿತ್ತು. ರೈತ ಉತ್ಪಾದಕ ಕಂಪನಿಗಳು ಕಿಸಾನ್ ರೈಲುಗಳಲ್ಲಿ ತಮ್ಮ ಸರಕು ಸಾಗಣೆಗೆ ಒಡಂಬಡಿಕೆ ಮಾಡಿಕೊಳ್ಳುವ ಅವಕಾಶದಿಂದ ಆರ್ಥಿಕವಾಗಿ ಮುಂಚೂಣಿಗೆ ಬರಲು ಸಹಕಾರಿಯಾಗಿದೆ. ಕಳೆದ ಸೆಪ್ಟೆಂಬರ್ 19ರಂದು ಆರಂಭವಾಗಿದ್ದ, ಬೆಂಗಳೂರಿನ ಯಶವಂತಪುರ- ದೆಹಲಿಯ ನಿಜಾಮಾಬಾದ್ ಕಿಸಾನ್ ರೈಲಿನಲ್ಲಿ ಪ್ರತಿ ಟನ್ ಸರಕು ಸಾಗಣೆಗೆ 4,860 ₹ ನಿಗದಿಪಡಿಸಲಾಗಿದೆ. 2751 ಕಿಮೀ ದೂರದ ಈ ಮಾರ್ಗ ಮಧ್ಯೆ ವಿವಿಧೆಡೆಯ ಕೃಷಿ ಸರಕುಗಳನ್ನು 54 ಗಂಟೆಗಳಲ್ಲಿ ದೆಹಲಿಗೆ ತಲುಪುತ್ತಿತ್ತು
ಇದನ್ನೂ ಓದಿ : Budget 2021 | ಮಂಡನೆಯಾಯ್ತು Economic Survey: ಕೃಷಿಯ ಭರವಸೆ, ಶೇ 11ರ ಜಿಡಿಪಿ ಪ್ರಗತಿ ನಿರೀಕ್ಷೆ
1.70 ಲಕ್ಷ ಕೋಟಿ ಮೊತ್ತವನ್ನು ರೈಲ್ವೇ ಬಜೆಟ್ಗೆ ನೀಡುವ ಸಂಭವವಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಕಿಸಾನ್ ರೈಲು ಯೋಜನೆಗೆ ಪುಷ್ಟಿ ಒದಗಿಸುವ ನಿರೀಕ್ಷೆಯಂತೂ ಹೆಚ್ಚಿದೆ. ಸರ್ಕಾರ ಶೈತ್ಯಾಗಾರ ಸೌಭ್ಯವಿರುವ ಇನ್ನಷ್ಟು ಕಿಸಾನ್ ರೈಲುಗಳನ್ನು ಆರಂಭಿಸಬೇಕಿದೆ ಎಂಬ ಕೂಗಂತೂ ರೈತ ಸಮುದಾಯದಿಂದ ಹೊಮ್ಮಿದೆ.
ಕಿಸಾನ್ ರೈಲ್ನಲ್ಲೇ ಏನೆಲ್ಲ ಸಾಗಿಸಬಹುದು? ದೀರ್ಘಕಾಲ ಉಳಿಯದ, ತಕ್ಷಣದ ಬಳಕೆಯ ತರಕಾರಿ,ಹಣ್ಣುಗಳನ್ನು ದೇಶದ ಉದ್ದಗಲಕ್ಕೂ ಸಾಗಿಸುವ ಮೂಲಕ ಆಹಾರ ಪದಾರ್ಥಗಳು ವ್ಯರ್ಥವಾಗುವುದನ್ನು ತಡೆಗಟ್ಟಬೇಕು. ಕಡಿಮೆ ದರದಲ್ಲಿ ತರಕಾರಿ, ಹಣ್ಣುಗಳು ಎಲ್ಲೆಡೆ ಲಭ್ಯವಾಗಬೇಕು. ಜತೆಗೆ, ಗೋದಾಮಿನ ಸಮಸ್ಯೆಯೂ ನಿವಾರಣೆಯಾಗಬೇಕು ಎಂಬುದು ಕಿಸಾನ್ ರೈಲುಗಳ ಬಹುಮುಖ್ಯ ಉದ್ದೇಶ. ಹೂಕೋಸು,ಮೆಣಸಿನಕಾಯಿ, ಈರುಳ್ಳಿ, ಎಲೆಕೋಸು, ದೊಡ್ಡಮೆಣಸು, ನುಗ್ಗೇಕಾಯಿಗಳಂತಹ ತರಕಾರಿಗಳು, ಬಾಳೆಹಣ್ಣು, ದ್ರಾಕ್ಷಿ, ಸೇಬು, ಕಿತ್ತಳೆಯಂತಹ ಹಣ್ಣುಗಳು, ಮೀನು,ಮಾಂಸಗಳನ್ನು ಕೊಳೆತು ವ್ಯರ್ಥವಾಗಲು ಬಿಡದಂತೆ ಶೈತ್ಯಾಗಾರ ಸೌಲಭ್ಯವಿರುವ ರೈಲುಗಳ ಮೂಲಕ ದೇಶದೆಲ್ಲೆಡೆ ಸಾಗಾಟ ಮಾಡಲಾಗುತ್ತಿತ್ತು.
Budget 2021 | ಆರ್ಥಿಕತೆ ಸಬಲ, ಭವಿಷ್ಯ ಆಶಾದಾಯಕ: Economic Survey ಮುಖ್ಯಾಂಶಗಳಿವು