‘ಮೊಘಲರೇ ನಿಜವಾಗಿ ಈ ದೇಶ ಕಟ್ಟಿದ್ದು; ಅವರ ಬಗ್ಗೆ ಕೆಟ್ಟ ಮಾತು ಸರಿಯಲ್ಲ’: ನಿರ್ದೇಶಕ ಕಬೀರ್​ ಖಾನ್​

Kabir Khan: ಬಾಲಿವುಡ್​ನಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದವರು ಕಬೀರ್​ ಖಾನ್​. ಈಗ ಅವರು ಮೊಘಲರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣ ಆಗುತ್ತಿದೆ.

‘ಮೊಘಲರೇ ನಿಜವಾಗಿ ಈ ದೇಶ ಕಟ್ಟಿದ್ದು; ಅವರ ಬಗ್ಗೆ ಕೆಟ್ಟ ಮಾತು ಸರಿಯಲ್ಲ’: ನಿರ್ದೇಶಕ ಕಬೀರ್​ ಖಾನ್​
ಕಬೀರ್ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 26, 2021 | 9:03 AM

ಭಾರತದಲ್ಲಿ ಆಡಳಿತ ನಡೆಸಿದ ಮುಸ್ಲಿಂ ರಾಜರನ್ನು ಸಿನಿಮಾಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಬಾಲಿವುಡ್​ ನಿರ್ದೇಶಕ ಕಬೀರ್​ ಖಾನ್​ ಅಭಿಪ್ರಾಯ ಪಟ್ಟಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ‘ಹಲವು ಸಿನಿಮಾಗಳಲ್ಲಿ ಮೊಘಲರನ್ನು ದುಷ್ಟರಂತೆ ತೋರಿಸಲಾಗಿದೆ. ಆದರೆ ಅವರೇ ನಿಜವಾಗಿ ಈ ದೇಶವನ್ನು ಕಟ್ಟಿದವರು’ ಎಂದು ಕಬೀರ್​ ಖಾನ್​ ಹೇಳಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ‘ದಿ ಎಂಪೈರ್​’ ಸೀರಿಸ್​ ಬಿಡುಗಡೆ ಆಗಲು ಸಜ್ಜಾಗಿರುವ ಈ ಸಮಯದಲ್ಲಿ ಅವರು ಇಂಥ ಹೇಳಿಕೆ ನೀಡಿದ್ದಾರೆ.

ಬಾಲಿವುಡ್​ನಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದವರು ಕಬೀರ್​ ಖಾನ್​. ಬಜರಂಗಿ ಭಾಯಿಜಾನ್​, ಏಕ್​ ಥಾ ಟೈಗರ್​, ಕಾಬೂಲ್ ಎಕ್ಸ್​ಪ್ರೆಸ್​ ಮುಂತಾದ ಸಿನಿಮಾಗಳ ಮೂಲಕ ಅವರು ಫೇಮಸ್​ ಆಗಿದ್ದಾರೆ. 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನೇ ಆಧರಿಸಿ ತಯಾರಾಗಿರುವ ‘83’ ಚಿತ್ರಕ್ಕೂ ಕಬೀರ್​ ಖಾನ್​ ಅವರದ್ದೇ ನಿರ್ದೇಶನವಿದೆ. ಈಗ ಅವರು ಮೊಘಲರ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ.

‘ಭಿನ್ನ ದೃಷ್ಟಿಕೋನಗಳು ಇರಬಹುದು. ನೀವು ಮೊಘಲರನ್ನು ಕೆಟ್ಟವರು ಎಂದು ಬಿಂಬಿಸುವುದಾದರೆ ಅದಕ್ಕೆ ಸೂಕ್ತ ಸಾಕ್ಷಿಗಳನ್ನು ನೀಡಿ. ಅವರು ಯಾಕೆ ವಿಲನ್​ ಆಗಿದ್ದರು ಎಂಬುದನ್ನು ಸಂಶೋಧನೆ, ಅಧ್ಯಯನಗಳ ಮೂಲಕ ತಿಳಿಸಿಕೊಡಿ. ಸರಿಯಾಗಿ ​ಇತಿಹಾಸ ನೋಡಿದಾಗ ಅವರನ್ನು ಕೆಟ್ಟವರು ಎಂದು ಹೇಳುವುದನ್ನು ಒಪ್ಪಿಕೊಳ್ಳುವುದು ಕಷ್ಟ ಆಗುತ್ತದೆ. ನನಗೆ ಅನಿಸಿದಂತೆ ಅವರೇ ನಿಜವಾಗಿ ದೇಶ ಕಟ್ಟಿದವರು’ ಎಂದು ಕಬೀರ್​ ಖಾನ್​ ಹೇಳಿದ್ದಾರೆ.

‘ಮೊಘಲರನ್ನು ನೀವು ಕೊಲೆಗಡುಕರು ಎನ್ನುತ್ತೀರಿ. ಅದಕ್ಕೆ ಸಾಕ್ಷಿ ಏನಿದೆ? ಮುಕ್ತವಾಗಿ ಚರ್ಚೆ ಮಾಡಿ. ಭಾರತವನ್ನು ಆಳಿದ ಮುಸ್ಲಿಂ ರಾಜರ ಮೇಲೆ ಆರೋಪ ಹೊರಿಸುವುದು ಇಂದು ತುಂಬ ಸುಲಭದ ಕೆಲಸವಾಗಿದೆ. ಅಂಥ ಸಿನಿಮಾಗಳ ಬಗ್ಗೆ ನನಗೆ ಗೌರವ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಕಬೀರ್​ ಖಾನ್​ ಹೇಳಿದ್ದಾರೆ.

ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ಬಗ್ಗೆಯೂ ಕಬೀರ್​ ಖಾನ್​ ಇತ್ತೀಚೆಗೆ ಮಾತನಾಡಿದ್ದರು. ‘ನನ್ನ ಮೊದಲ ಸಿನಿಮಾ ‘ಕಾಬೂಲ್​ ಎಕ್ಸ್​​ಪ್ರೆಸ್’​ ಶೂಟಿಂಗ್​ಗಾಗಿ ನಾನು ಅಪ್ಘಾನಿಸ್ತಾನಕ್ಕೆ ತೆರಳಿದ್ದೆ. ಆದಿತ್ಯ ಚೋಪ್ರಾ ಅವರು ಅಪ್ಘಾನಿಸ್ತಾನದಲ್ಲಿ ಶೂಟ್​ ಮಾಡೋದು ಕಷ್ಟ ಎಂದು ಹೇಳಿದ್ದರು. ಆದರೆ, ಅಲ್ಲಿಯ ಜನರು ಸಿನಿಮಾ ಶೂಟ್​ಗೆ ಸಹಾಯ ಮಾಡಿದ್ದರು. ಈ ವೇಳೆ ತಾಲಿಬಾನಿಗಳಿಂದ ಜೀವ ಬೆದರಿಕೆ ಇತ್ತು. ಆದರೆ, ಅಲ್ಲಿನ ಜನರು ನನಗೆ ಸಂಪೂರ್ಣ ಬೆಂಬಲ ನೀಡಿದ್ದರು. ಈಗ ಅವರೇ ಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸಹಾಯ ಮಾಡೋಕೆ ಆಗುತ್ತಿಲ್ಲ ಎನ್ನುವ ಬೇಸರ ನನಗಿದೆ’ ಎಂದು ಕಬೀರ್​ ಖಾನ್​ ಹೇಳಿದ್ದರು.

ಇದನ್ನೂ ಓದಿ:

ಅಫ್ಘಾನಿಸ್ತಾನದ ಜೊತೆ ನಟ ಸಲ್ಮಾನ್ ಖಾನ್​ಗೆ ಇದೆ ಒಂದು ಸಂಬಂಧ; ಏನದು?

ಮೃತದೇಹದೊಂದಿಗೂ ಸೆಕ್ಸ್ ಮಾಡಿದ ತಾಲಿಬಾನಿಗಳು; ಅಫ್ಘಾನಿಸ್ತಾನದಿಂದ ತಪ್ಪಿಸಿಕೊಂಡು ಬಂದ ಮಹಿಳೆ ಹೇಳಿದ ಆಘಾತಕಾರಿ ಸಂಗತಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ