‘ರಣವೀರ್ ಸಿಂಗ್ ತಂದೆ ಆಗಿಬಿಟ್ರಾ?’; ದೀಪಿಕಾ ಬದಲಿಗೆ ಬೇರೆ ನಟಿಗೆ ಪ್ರಶ್ನೆ ಕೇಳಿದ ಫ್ಯಾನ್ಸ್
ರಣವೀರ್ ಸಿಂಗ್ ಮತ್ತು ಪರಿಣೀತಿ ಚೋಪ್ರಾ ನಡುವೆ ಒಳ್ಳೆಯ ಗೆಳೆತನ ಇದೆ. ‘ಲೇಡೀಸ್ ವರ್ಸಸ್ ವಿಕ್ಕಿ ಬಹ್ಲ್’ ಮತ್ತು ‘ಕಿಲ್ ದಿಲ್’ ಸಿನಿಮಾಗಳಲ್ಲಿ ಅವರಿಬ್ಬರು ಜೋಡಿಯಾಗಿ ನಟಿಸಿದ್ದರು.
ನಟ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಈ ಕಲಾವಿದರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಹಲವು ಪ್ರಾಜೆಕ್ಟ್ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರಾ ಎಂಬ ಅನುಮಾನ ಮೂಡಿದೆ. ಅಷ್ಟೇ ಅಲ್ಲ, ಈಗಾಗಲೇ ದೀಪಿಕಾ ಅವರು ಮಗುವಿಗೆ ಜನ್ಮ ನೀಡಿರಬಹುದೇ ಎಂಬ ಪ್ರಶ್ನೆ ಕೂಡ ಕೆಲವರ ತಲೆಗೆ ಬಂದಿದೆ. ಆ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಆದರೆ ನೇರವಾಗಿ ದೀಪಿಕಾ ಪಡುಕೋಣೆ ಅಥವಾ ರಣವೀರ್ ಸಿಂಗ್ಗೆ ಈ ಪ್ರಶ್ನೆ ಕೇಳುವ ಬದಲು ನಟಿ ಪರಿಣೀತಿ ಚೋಪ್ರಾ (Parineeti Chopra) ಅವರನ್ನು ಜನರು ಪ್ರಶ್ನಿಸುತ್ತಿದ್ದಾರೆ ಎಂಬುದು ಅಚ್ಚರಿ ವಿಷಯ!
ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಅವರು ಇತ್ತೀಚೆಗೆ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದರು. ಇನ್ಸ್ಟಾಗ್ರಾಮ್ ಮೂಲಕ ಜನರ ಹಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು. ಅಚ್ಚರಿ ಎಂದರೆ ಅವರಿಗೆ ಸಂಬಂಧವೇ ಇಲ್ಲದ ಒಂದು ಪ್ರಶ್ನೆ ಕೇಳಿಬಂದಿದೆ. ‘ರಣವೀರ್ ಸಿಂಗ್ ತಂದೆ ಆಗಿಬಿಟ್ರಾ’? ಎಂದು ಪರಿಣೀತಿಗೆ ನೆಟ್ಟಿಗರೊಬ್ಬರು ಕೇಳಿದ್ದಾರೆ. ‘ರಣವೀರ್ ಸಿಂಗ್, ದಯವಿಟ್ಟು ಇದನ್ನು ಖಚಿತಪಡಿಸಿ’ ಎಂದು ಪರಿಣೀತಿ ಹೇಳಿದ್ದಾರೆ. ಅಲ್ಲದೆ, ಇದನ್ನು ರಣವೀರ್ಗೆ ಅವರು ಟ್ಯಾಗ್ ಮಾಡಿದ್ದಾರೆ.
ರಣವೀರ್ ಸಿಂಗ್ ಮತ್ತು ಪರಿಣೀತಿ ಚೋಪ್ರಾ ನಡುವೆ ಒಳ್ಳೆಯ ಗೆಳೆತನ ಇದೆ. ‘ಲೇಡೀಸ್ ವರ್ಸಸ್ ವಿಕ್ಕಿ ಬಹ್ಲ್’ ಮತ್ತು ‘ಕಿಲ್ ದಿಲ್’ ಸಿನಿಮಾಗಳಲ್ಲಿ ಅವರಿಬ್ಬರು ಜೋಡಿಯಾಗಿ ನಟಿಸಿದ್ದರು. ನೆಟ್ಟಿಗರು ಕೇಳಿದ ಪ್ರಶ್ನೆಗೆ ರಣವೀರ್ ಸಿಂಗ್ ಇನ್ನೂ ಉತ್ತರ ನೀಡಿಲ್ಲ. ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಅವರಿಂದ ಬರುವ ಉತ್ತರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಅನೇಕ ಸಿನಿಮಾಗಳಲ್ಲಿ ದೀಪಿಕಾ ಮತ್ತು ರಣವೀರ್ ಸಿಂಗ್ ಜೊತೆಯಾಗಿ ನಟಿಸಿದ್ದಾರೆ. ‘ರಾಮ್ಲೀಲಾ’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ಚಿತ್ರಗಳಿಂದ ಈ ಜೋಡಿಗೆ ಭಾರಿ ಗೆಲುವು ಸಿಕ್ಕಿತು. ಈಗ ‘83’ ಸಿನಿಮಾದಲ್ಲಿ ಅವರು ಒಟ್ಟಿಗೆ ನಟಿಸಿದ್ದಾರೆ. ಆದರೆ ಕೊರೊನಾ ವೈರಸ್ ಕಾರಣದಿಂದ ಈ ಚಿತ್ರದ ರಿಲೀಸ್ ತಡವಾಗುತ್ತಿದೆ. 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಅವರ ಪತ್ನಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ:
ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ಗೆ ಸಿಕ್ಕ ಮೊದಲ ಸಂಬಳ ಎಷ್ಟು? ಖರೀದಿಸಿದ್ದು ಏನು?
ರಣವೀರ್ ಸಿಂಗ್-ಆಲಿಯಾ ಭಟ್ ಹೊಸ ಪ್ರೇಮ್ ಕಹಾನಿ; ಇದರ ಸೂತ್ರಧಾರ ಕರಣ್ ಜೋಹರ್