AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶೇರ್​ಷಾ’ ಬೆನ್ನಲ್ಲೇ ಅಭಿಮಾನಿಗಳಿಗೆ ಸಿದ್ಧಾರ್ಥ್​-ಕರಣ್ ಕಡೆಯಿಂದ ಹೊಸ ನ್ಯೂಸ್​

‘ಸ್ಟುಡೆಂಟ್​ ಆಫ್​ ದಿ ಇಯರ್​’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಸಿದ್ಧಾರ್ಥ್​, ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ನಟನೆಯನ್ನು ಇಷ್ಟು ದೊಡ್ಡ ಮಟ್ಟಕ್ಕೆ ಹೊಗಳುವಂತೆ ಮಾಡಿದ್ದು ‘ಶೇರ್​ಷಾ’ ಸಿನಿಮಾ.

‘ಶೇರ್​ಷಾ’ ಬೆನ್ನಲ್ಲೇ ಅಭಿಮಾನಿಗಳಿಗೆ ಸಿದ್ಧಾರ್ಥ್​-ಕರಣ್ ಕಡೆಯಿಂದ ಹೊಸ ನ್ಯೂಸ್​
‘ಶೇರ್​ಷಾ’ ಬೆನ್ನಲ್ಲೇ ಅಭಿಮಾನಿಗಳಿಗೆ ಸಿದ್ಧಾರ್ಥ್​-ಕರಣ್ ಕಡೆಯಿಂದ ಹೊಸ ನ್ಯೂಸ್​
TV9 Web
| Edited By: |

Updated on: Aug 27, 2021 | 7:15 AM

Share

ಸಿದ್ಧಾರ್ಥ್​ ಮಲ್ಹೋತ್ರಾ ನಟನೆಯ ‘ಶೇರ್​ಷಾ’ ಬಯೋಪಿಕ್​ ಸಾಕಷ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಕ್ಯಾಪ್ಟನ್​ ವಿಕ್ರಮ್​ ಬಾತ್ರ ಅವರ ಜೀವನ ಆಧರಿಸಿ ಸಿದ್ಧಗೊಂಡ ಈ ಸಿನಿಮಾ ಸಿದ್ಧಾರ್ಥ್​ ವೃತ್ತಿ ಜೀವನಕ್ಕೆ ಮೈಲೇಜ್​ ನೀಡಿದೆ. ಕರಣ್​ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್​ ಈ ಸಿನಿಮಾ ನಿರ್ಮಾಣ ಮಾಡಿತ್ತು. ಈಗ ಇವರ ಕಡೆಯಿಂದ ಹೊಸ ಅಪ್​ಡೇಟ್​ ಒಂದು ಕೇಳಿ ಬಂದಿದೆ.

ಸಿದ್ಧಾರ್ಥ್​ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್​ ಜೋಹರ್. ‘ಸ್ಟುಡೆಂಟ್​ ಆಫ್​ ದಿ ಇಯರ್​’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಸಿದ್ಧಾರ್ಥ್​, ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ನಟನೆಯನ್ನು ಇಷ್ಟು ದೊಡ್ಡ ಮಟ್ಟಕ್ಕೆ ಹೊಗಳುವಂತೆ ಮಾಡಿದ್ದು ‘ಶೇರ್​ಷಾ’ ಸಿನಿಮಾ. ಈ ಚಿತ್ರದಲ್ಲಿನ ಅವರ ಅದ್ಭುತ ನಟನೆ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಹೀಗಾಗಿ, ಅವರಿಗೆ ಬರೋ ಆಫರ್​ಗಳ ಸಂಖ್ಯೆ ಕೂಡ ಹೆಚ್ಚಿದೆ.

ಈಗ ಧರ್ಮ ಪ್ರೊಡಕ್ಷನ್​ ಜತೆ ಸಿದ್ಧಾರ್ಥ್ ಮತ್ತೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿದೆ. ಇದು ಆ್ಯಕ್ಷನ್​ ಸಿನಿಮಾ ಆಗಿದ್ದು, ಹಿಂದೆಂದೂ ಕಾಣಿಸದ ಅವತಾರದಲ್ಲಿ ಸಿದ್ಧಾರ್ಥ್​ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದು ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ಹೈಪ್​ ಸೃಷ್ಟಿ ಆಗುತ್ತಿದೆ.

ಪುಷ್ಕರ್​ ಓಝಾ ಹಾಗೂ ಸಾಗರ್​ ಅಂಬ್ರೆ ಅವರು ಒಟ್ಟಾಗಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಕಿಕ್’​, ‘ವಾರ್’​ ಸಿನಿಮಾಗಳಿಗೆ ಪುಷ್ಕರ್​ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರೆ, ಸಾಗರ್​ ಅವರು ‘ಉರಿ’, ‘ಧಡಕ್’​ ಮುಂತಾದ ಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  ಕಳೆದ ಒಂದು ವರ್ಷದಿಂದ ಈ ಸಿನಿಮಾಗಾಗಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಧರ್ಮ ಪ್ರೊಡಕ್ಷನ್​ ಜತೆ ಸಿದ್ಧಾರ್ಥ್​ಗೆ ಇದು ಎಂಟನೇ ಸಿನಿಮಾ. ‘ಹಸೀ ತೋ ಫಸೀ’, ‘ಬ್ರದರ್ಸ್’​ ಮೊದಲಾದ ಸಿನಿಮಾ​ಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ ಸಿದ್ಧಾರ್ಥ್​ ಹಾಗೂ ಕರಣ್​. ಈಗ ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ವಿಚಾರ ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ಬಿಗ್​ಬಾಸ್​ ಒಟಿಟಿ ನಿರೂಪಕ ಕರಣ್ ಜೋಹರ್ ವಿರುದ್ಧ ಜೋರಾಯ್ತು ಅಸಮಾಧಾನ; ಕಾರಣವೇನು?

ಆಹಾ ಏನಿಂಥ ಅಚ್ಚರಿ; ಬದ್ಧ ವೈರಿ ಕರಣ್​ ಜೋಹರ್​ ಕೆಲಸಕ್ಕೆ ಮನಸಾರೆ ಹೊಗಳಿದ ಕಂಗನಾ ರಣಾವತ್​

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!