ಬಿಗ್​ಬಾಸ್​ ಒಟಿಟಿ ನಿರೂಪಕ ಕರಣ್ ಜೋಹರ್ ವಿರುದ್ಧ ಜೋರಾಯ್ತು ಅಸಮಾಧಾನ; ಕಾರಣವೇನು?

ಬಿಗ್​ಬಾಸ್​ ಒಟಿಟಿ ನಿರೂಪಕ ಕರಣ್ ಜೋಹರ್ ವಿರುದ್ಧ ಜೋರಾಯ್ತು ಅಸಮಾಧಾನ; ಕಾರಣವೇನು?
ಕರಣ್ ಜೋಹರ್

Big Boss OTT: ಬಿಗ್​ಬಾಸ್ ಒಟಿಟಿ ನಿರೂಪಕ ಕರಣ್ ಜೋಹರ್ ವಿರುದ್ಧ ಅಸಮಾಧಾನ ಹೆಚ್ಚಾಗುತ್ತಿದೆ. ವೀಕ್ಷಕರ ವಲಯದಲ್ಲಿ ಹಾಗೂ ಬಿಗ್​ಬಾಸ್ ಮನೆಯ ಒಳಗೆ ಕರಣ್ ವಿರುದ್ಧ ಆರೋಪ ಬಂದಿದ್ದು, ಪೂರ್ವಗ್ರಹ ಪೀಡಿತರಾಗಿ ವರ್ತಿಸುತ್ತಾರೆ ಎಂದು ಅಸಮಾದಾನ ಎದ್ದಿದೆ.

TV9kannada Web Team

| Edited By: shivaprasad.hs

Aug 25, 2021 | 4:39 PM

ಬಿಗ್​ಬಾಸ್ ಒಟಿಟಿಯಲ್ಲಿ ಕಳೆದ ವಾರ ಹೊರಬಿದ್ದ ಸ್ಪರ್ಧಿ ಕರಣ್ ನಾಥ್ ನಿರೂಪಕ ಕರಣ್ ಜೋಹರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ನೊಮ್ಮೆ ಬಿಗ್​ಬಾಸ್​ಗೆ ಹಿಂದಿರುಗುವ ಅವಕಾಶ ಸಿಕ್ಕರೆ ಖುಷಿಪಡುತ್ತೇನೆ. ಆದರೆ ಕರಣ್​ಗಿಂತ ಸಲ್ಮಾನ್ ಅವರನ್ನು ಭೇಟಿಯಾಗಲು ಇಷ್ಟಪಡುತ್ತೇನೆ’’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕರಣ್ ನಿರೂಪಣೆಯಲ್ಲಿನ ಕೆಲವು ನ್ಯೂನ್ಯತೆಗಳ ಕುರಿತು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಲಿದ್ದು, ಸದ್ಯ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ನಿರೂಪಣೆ ಮಾಡುತ್ತಿದ್ದಾರೆ. ಕರಣ್ ನಾಥ್ ಈ ಕುರಿತು ಮಾತನಾಡಿದ್ದು, ‘‘ಕರಣ್ ಜೋಹರ್ ಅವರನ್ನು ಚಿತ್ರರಂಗದ ಸಾಧನೆಯಿಂದ ಗೌರವಿಸುತ್ತೇನೆ. ಆದರೆ ಬಿಗ್​ಬಾಸ್ ನಿರೂಪಕನಾಗಿ ಅವರು ಕೆಲವೊಂದು ಕಾರಣಗಳಿಂದ ನನ್ನ ಕುರಿತು ಅಷ್ಟೊಂದು ಗಮನ ಹರಿಸಿಲ್ಲ. ಅವರು ಕೆಲವೊಂದು ವಿಷಯಗಳನ್ನು ನನಗೆ ಹೇಳಿದ್ದರು, ನಾನು ಅವನ್ನು ಎಂದಿಗೂ ಒಪ್ಪುವುದಿಲ್ಲ ಮತ್ತು ಅದು ನನಗಿಷ್ಟವಾಗುವುದಿಲ್ಲ. ಆದ್ದರಿಂದಲೇ ಅವರಿಗೆ ನನ್ನ ಕುರಿತು ಹೇಳಲು ಏನೂ ಸಿಗದಿರಬಹುದು. ಬಿಗ್​ಬಾಸ್​ನಲ್ಲಿ ನೆಗೆಟಿವ್ ಸುದ್ದಿಯಾದರೆ ಎಲ್ಲರೂ ಮಾತನಾಡುತ್ತಾರೆ. ನಾನು ಅಂತಹ ವ್ಯಕ್ತಿಯಲ್ಲ. ಹಾಗಾಗಿಯೇ ನನ್ನ ಕುರಿತು ಬಹುಶಃ ಯಾರೂ ಮಾತನಾಡಿಲ್ಲ’’ ಎಂದು ಅವರು ಹೇಳಿಕೊಂಡಿದ್ದಾರೆ.

ವಾರಾಂತ್ಯದ ಎಪಿಸೋಡ್​ಗಳಲ್ಲಿ ಪಾಸಿಟಿವ್ ವಿಚಾರಗಳನ್ನೂ ಚರ್ಚಿಸಿದ್ದರೆ ಚೆನ್ನಾಗಿರುತ್ತದೆ ಎಂದು ಕರಣ್ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ನನಗೆ ಮರಳಿ ಬಿಗ್​ಬಾಸ್​ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಖುಷಿ ಪಡುತ್ತೇನೆ. ಸಲ್ಮಾನ್ ಖಾನ್ ನಿರೂಪಕರಾದಾಗ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕರೆ ಸಂತೋಷವಾಗುತ್ತದೆ. ಕಾರಣ, ಅವರೊಬ್ಬ ಒಳ್ಳೆಯ ನಿರೂಪಕರಾಗಿದ್ದು, ಋಣಾತ್ಮಕ ವಿಚಾರಗಳ ಜೊತೆಗೆ, ಧನಾತ್ಮಕ ವಿಚಾರಗಳನ್ನೂ ಮಾತನಾಡುತ್ತಾರೆ. ಆದ್ದರಿಂದಲೇ ನನ್ನ ಪ್ರಕಾರ ಅವರೊಬ್ಬ ಒಳ್ಳೆಯ ನಿರೂಪಕ ಎಂದು ಕರಣ್ ನಾಥ್ ಹೇಳಿದ್ದಾರೆ.

ಕರಣ್ ಜೋಹರ್ ವಿರುದ್ಧ ಕರಣ್ ನಾಥ್ ಮಾತ್ರ ಆರೋಪ ಮಾಡಿರುವುದಲ್ಲ. ಈಗಾಗಲೇ ಬಿಗ್​ಬಾಸ್ ಮನೆಯ ಒಳಗೆ ಮತ್ತು ಹೊರಗೆ ಕರಣ್ ನಿರೂಪಣೆಯ ವಿಧಾನ ಸಾಕಷ್ಟು ಚರ್ಚೆಯಾಗಿದೆ. ಅವರು ಯಾರಾದರೊಬ್ಬರ ಪರವಿರುತ್ತಾರೆಂದೋ ಅಥವಾ ಸರಿಯಾದ ತೀರ್ಮಾನ ಮಾಡುವುದಿಲ್ಲವೆಂದೋ ಹಲವರು ಆರೋಪಿಸಿದ್ದಾರೆ. ಜೀಶಾನ್ ಖಾನ್ ಹಾಗೂ ಮಿಲಿಂದ್ ಗಾಬಾ ಈ ಕುರಿತು ಮನೆಯೊಳಗಿದ್ದುಕೊಂಡೇ ಅಸಮಾಧಾನ ತೋಡಿಕೊಂಡಿದ್ದರು. ದಿವ್ಯಾ ಅಗರ್ವಾಲ್ ಜೊತೆ ಕರಣ್ ನಡೆದುಕೊಂಡ ರೀತಿಗೆ ಸುಯ್ಯಾಶ್ ರೈ ಅಸಮಾದಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:

ದಲಿತ ಸಂಘರ್ಷ ಸಮಿತಿಯ ರಘು ವಿರುದ್ಧ ಬಹಿರಂಗವಾಗಿ ಕಾನೂನು ಸಮರ ಸಾರಿದ ನಟ ಜಗ್ಗೇಶ್​

Sandalwood Drug Case: ಡ್ರಗ್ ಸೇವನೆ ದೃಢಪಟ್ಟ ಬೆನ್ನಲ್ಲೇ ವಕೀಲರ ಸಲಹೆ ಪಡೆದ ನಟಿ ರಾಗಿಣಿ ದ್ವಿವೇದಿ!

(Big Boss evicted contestant Karan Nath says he prefers Salman Khan over Karan Johar)

Follow us on

Related Stories

Most Read Stories

Click on your DTH Provider to Add TV9 Kannada