ದಲಿತ ಸಂಘರ್ಷ ಸಮಿತಿಯ ರಘು ವಿರುದ್ಧ ಬಹಿರಂಗವಾಗಿ ಕಾನೂನು ಸಮರ ಸಾರಿದ ನಟ ಜಗ್ಗೇಶ್
ಜಗ್ಗೇಶ್ ಸಹೋದರ ಕೋಮಲ್ ಕುಮಾರ್ ಅವರು ಬಿಬಿಎಂಪಿಯಿಂದ ಟೆಂಡರ್ ಪಡೆದು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂತು. ಈ ಪ್ರಕರಣದಲ್ಲಿ ಜಗ್ಗೇಶ್ ಅವರ ಹೆಸರನ್ನೂ ಎಳೆದುತಂದಿರುವುದು ಅವರ ಕೋಪಕ್ಕೆ ಕಾರಣ ಆಗಿದೆ.
ಸ್ಯಾಂಡಲ್ವುಡ್ನ ಖ್ಯಾತ ನಟ ಜಗ್ಗೇಶ್ (Jaggesh) ಅವರು ದಲಿತ ಸಂಘರ್ಷ ಸಮಿತಿಯ (DSS) ಅಧ್ಯಕ್ಷ ಸಿ.ಎಸ್. ರಘು (DSS Raghu) ವಿರುದ್ಧ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಟ್ವಿಟರ್ ಮೂಲಕ ರಘು ಅವರಿಗೆ ಜಗ್ಗೇಶ್ ಪರ ವಕೀಲರು ನೋಟಿಸ್ ನೀಡಿದ್ದಾರೆ. ತಮಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಹೆಸರನ್ನು ಪ್ರಸ್ತಾಪಿಸಿ, ಮಾಧ್ಯಮಗಳಲ್ಲಿ ಮಾನಹಾನಿ ಆಗುವಂತಹ ಹೇಳಿಕೆಗಳನ್ನು ರಘು ನೀಡಿದ್ದಾರೆ ಎಂದಿರುವ ಜಗ್ಗೇಶ್ ಈಗ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ಅವರು ಟ್ವಿಟರ್ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.
ಜಗ್ಗೇಶ್ ಸಹೋದರ ಕೋಮಲ್ ಕುಮಾರ್ ಅವರು ಬಿಬಿಎಂಪಿಯಿಂದ ಟೆಂಡರ್ ಪಡೆದು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂತು. ಈ ಪ್ರಕರಣದಲ್ಲಿ ಜಗ್ಗೇಶ್ ಅವರ ಹೆಸರನ್ನೂ ಎಳೆದುತಂದಿರುವುದು ಅವರ ಕೋಪಕ್ಕೆ ಕಾರಣ ಆಗಿದೆ. ‘ಮಾನ್ಯ ಡಿಎಸ್ಎಸ್ ರಘು ಅವರಿಗೆ.. ಮಾನ್ಯರೇ ತಾವು ಹಾಗೂ ತಮ್ಮ ವಿಳಾಸ ನನಗೆ ತಿಳಿಯದ ಕಾರಣ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ತಮಗೆ ತಿಳಿಸುತ್ತಿರುವೆ. ನನ್ನ ಬಗ್ಗೆ ಸತ್ಯಾಸತ್ಯತೆ ಅರಿಯದೆ, ಮಾಧ್ಯಮದ ಮುಂದೆ ನನ್ನ ತೇಜೋವಧೆ ಮಾಡಿದ್ದೀರಿ. ನಾನು ತಪ್ಪು ಮಾಡಿಲ್ಲ. ಮಾಡುವುದೂ ಇಲ್ಲ. ಹಾಗಾಗಿ ನಿಮ್ಮ ಮೇಲೆ ಕಾನೂನು ಪ್ರಕ್ರಿಯೆ. ಉತ್ತರಿಸಿ!’ ಎಂದು ಜಗ್ಗೇಶ್ ಮಾತು ಆರಂಭಿಸಿದ್ದಾರೆ.
ಎಲ್ಲೋ ಮಾಡಿದ ವಿಷಯಕ್ಕೆ ನನ್ನ ಹೆಸರು ಏಕೆ ತಂದಿರಿ!ನೀವು ನ್ಯಾಯಪರ ಹೋರಾಟ ಮಾಡಿ ನನ್ನ ಬೆಂಬಲವು ಇರುತ್ತದೆ!ಆದರೆ ನನಗು ಇದಕ್ಕು ಯಾವ ಸಂಬಂಧವಿಲ್ಲಾ ಆದರು ನನ್ನ ಹೆಸರು ಏಕೆ ತಂದಿರಿ!ಯಾವ ಪುರುಷಾರ್ಥಕ್ಕೆ?ನಾನು ತಪ್ಪು ಮಾಡಲ್ಲಾ ತಲೆಯು ಬಾಗಿಸೋಲ್ಲಾ!ನನ್ನಕೋಟ್ಯಾಂತರ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸುವ ಕಾರ್ಯ ಮಾಡಿದ್ದೀರಿ ಕ್ಷಮೆಯಿಲ್ಲಾ
— ನವರಸನಾಯಕ ಜಗ್ಗೇಶ್ (@Jaggesh2) August 25, 2021
‘ಯಾರೋ, ಎಲ್ಲೋ ಮಾಡಿದ ವಿಷಯಕ್ಕೆ ನನ್ನ ಹೆಸರು ಏಕೆ ತಂದಿರಿ? ನೀವು ನ್ಯಾಯಪರ ಹೋರಾಟ ಮಾಡಿ. ನನ್ನ ಬೆಂಬಲವು ಇರುತ್ತದೆ. ಆದರೆ ನನಗೂ ಇದಕ್ಕೂ ಯಾವ ಸಂಬಂಧವಿಲ್ಲ. ಆದರೂ ನನ್ನ ಹೆಸರು ಏಕೆ ತಂದಿರಿ? ಯಾವ ಪುರುಷಾರ್ಥಕ್ಕೆ? ನಾನು ತಪ್ಪು ಮಾಡಲ್ಲ. ತಲೆಯೂ ಬಾಗಿಸುವುದಿಲ್ಲ. ನನ್ನ ಕೋಟ್ಯಾಂತರ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸುವ ಕಾರ್ಯ ಮಾಡಿದ್ದೀರಿ. ಕ್ಷಮೆಯಿಲ್ಲ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನ ಜೊತೆಯಲ್ಲಿ ಅವರು ನೋಟಿಸ್ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ನಟ ಕೋಮಲ್ಗೆ ಕೊರೊನಾ; ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಜಗ್ಗೇಶ್
ದುಡ್ಡಿಲ್ಲದಾಗ ರವಿಚಂದ್ರನ್ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್; ಕ್ರೇಜಿಸ್ಟಾರ್ ಉತ್ತರ ಹೇಗಿತ್ತು?
Published On - 3:39 pm, Wed, 25 August 21