ದುಡ್ಡಿಲ್ಲದಾಗ ರವಿಚಂದ್ರನ್​ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್​; ಕ್ರೇಜಿಸ್ಟಾರ್​ ಉತ್ತರ ಹೇಗಿತ್ತು?

‘ಮಠ’ ಗುರುಪ್ರಸಾದ್​ ಹಾಗೂ ಜಗ್ಗೇಶ್​ ಕಾಂಬಿನೇಷನ್​ನಲ್ಲಿ ಈಗ ‘ರಂಗನಾಯಕ’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡೋಕೆ ಇಂದು ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಹಳೆ ದಿನಗಳನ್ನು ಜಗ್ಗೇಶ್​ ನೆನಪಿಸಿಕೊಂಡಿದ್ದಾರೆ.

ದುಡ್ಡಿಲ್ಲದಾಗ ರವಿಚಂದ್ರನ್​ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್​; ಕ್ರೇಜಿಸ್ಟಾರ್​ ಉತ್ತರ ಹೇಗಿತ್ತು?
ದುಡ್ಡಿಲ್ಲದಾಗ ರವಿದ್ರನ್​ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್​; ಕ್ರೇಜಿಸ್ಟಾರ್​ ಉತ್ತರ ಹೇಗಿತ್ತು?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 19, 2021 | 5:35 PM

ನಟ ಜಗ್ಗೇಶ್​ ಅವರು ತುಂಬಾನೇ ಕಷ್ಟದಿಂದ ಚಿತ್ರರಂಗಕ್ಕೆ ಬಂದವರು. ಚಿತ್ರರಂಗದ ಆರಂಭದ ದಿನಗಳಲ್ಲೂ ಅವರು ಕಷ್ಟಗಳನ್ನು ಎದುರಿಸಿದ್ದರು. ಈಗ ಅವರ ಕೈಯಲ್ಲಿ  ಸಾಕಷ್ಟು ಸಿನಿಮಾಗಳಿವೆ. ‘ಮಠ’ ಗುರುಪ್ರಸಾದ್​ ಹಾಗೂ ಜಗ್ಗೇಶ್​ ಕಾಂಬಿನೇಷನ್​ನಲ್ಲಿ ಈಗ ‘ರಂಗನಾಯಕ’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡೋಕೆ ಇಂದು ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಹಳೆ ದಿನಗಳನ್ನು ಜಗ್ಗೇಶ್​ ನೆನಪಿಸಿಕೊಂಡಿದ್ದಾರೆ.

‘ನಾನು ಮತ್ತೆ ಸೆಟ್​ಗೆ ಮರಳಿದ್ದೇನೆ. ಈ ಖುಷಿ ಎರಡು ವರ್ಷದಿಂದ ನಿಂತು ಹೋಗಿತ್ತು. ಬ್ಯೂಟಿಫುಲ್​ ಇಂಡಸ್ಟ್ರಿಯಲ್ಲಿ ನಾವಿದೀವಿ ಎನ್ನುವ ಹೆಮ್ಮೆ ನನಗೆ ಇದೆ. ಆದರೆ, ಈ ಕೊರೊನಾದಿಂದ ತಾಂತ್ರಿಕ ವರ್ಗದವರಿಗೆ ಎಷ್ಟು ತೊಂದರೆ ಆಗಿರಬಹುದು ಎಂದು ಯೋಚಿಸುತ್ತಿದ್ದೆ. ಇಂದು ನಾವು ಯಾಂತ್ರಿಕ ಬದುಕಲ್ಲಿ ಬದುಕ್ತಾ ಇದೀವಿ. ಅಂದು ತುಂಬಾ ಭಾವುಕರಾಗುತ್ತಿದ್ದೆವು. ಅಂದು ಸೆಟ್​ಗೆ ಬಂದರೆ ಅದೆಷ್ಟೇ ದೊಡ್ಡ ನಟ ಇರಲಿ ಎಲ್ಲರನ್ನೂ ಮಾತನಾಡಿಸುತ್ತಿದ್ದರು. ಸೆಟ್​ನಲ್ಲಿ ಯಾರಿಗಾದರೂ ಸಂಭಾವನೆ ಸಿಕ್ಕಿಲ್ಲ ಎಂದರೆ ಕೆಲ ನಟರು ನಿರ್ಮಾಪಕರಿಗೆ ನೇರವಾಗಿ ಕ್ಲಾಸ್​ ತೆಗೆದುಕೊಳ್ಳುತ್ತಿದ್ದರು’ ಎಂದಿದ್ದಾರೆ ಜಗ್ಗೇಶ್​.

‘ಗಣೇಶ ಹಬ್ಬ ಬಂದಿತ್ತು. ಮನೆಯಲ್ಲಿ ಹಣ ಇದೆಯೇ ಎಂದು ಹೆಂಡತಿ ಕೇಳಿದೆ. ಹೆಂಡತಿ ಇಲ್ಲ ಎಂದಳು. ಈ ವೇಳೆ 200 ರೂಪಾಯಿ ಕೊಡಿ ಎಂದು ರವಿಚಂದ್ರನ್​ಗೆ ಕೇಳಿದೆ. ಆಗ ಅವರು ಐದುನೂರು ಕೊಟ್ಟರು’ ಎಂದು ಹಳೆಯ ದಿನಗಳನ್ನು ಅವರು ನೆನೆದಿದ್ದಾರೆ.

‘ಕೊವಿಡ್​ ನಿಧಾನವಾಗಿ ಕಡಿಮೆ ಆಗುತ್ತಿದೆ. ಈ ಬಗ್ಗೆ ಮಾತನಾಡಿರುವ ಅವರು, ಈಗ ಕಷ್ಟಕಾಲ ಮುಗಿದು ಸಿನಿಮಾ ಶುರುವಾಗಿದೆ. ಈ ವರ್ಷ ನಾಲ್ಕು ಸಿನಿಮಾ ಸಿಕ್ತು. ಅದು ದೊಡ್ಡ ಬಜೆಟ್​ ಚಿತ್ರ ಅನ್ನೋದು ಖುಷಿಯ ವಿಚಾರ’ ಎಂದರು ಜಗ್ಗೇಶ್​.

‘ಮಠ’, ‘ಎದ್ದೇಳು ಮಂಜುನಾಥ’ದಂಥ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಗುರುಪ್ರಸಾದ್​ ಅವರಿಗೆ ಸಲ್ಲುತ್ತದೆ. ಜಗ್ಗೇಶ್​ ಹಾಗೂ ಅವರ ಕಾಂಬಿನೇಷನ್​ನಲ್ಲಿ ಬಂದ ಈ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದ್ದವು. ಈಗ ಈ ಕಾಂಬಿನೇಷನ್​ನಲ್ಲಿ ‘ರಂಗನಾಯಕ’ ಸಿನಿಮಾ ಮೂಡಿ ಬರುತ್ತಿದೆ.

ಇದನ್ನೂ ಓದಿ: Jaggesh: ಶೂಟಿಂಗ್​ ವೇಳೆ ಜಗ್ಗೇಶ್​ ಮೈಮೇಲಿತ್ತು ನಿಜವಾದ ಹಾವು; ಭಯದಲ್ಲಿ ಬಾಯಿಗೆ ಬಂದಂತೆ ಡೈಲಾಗ್​ ಹೇಳಿದ್ದ ನವರಸ ನಾಯಕ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ