ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ಡೇವಿಡ್​ ವಾರ್ನರ್​; ಕನ್ನಡಿಗರು ಫುಲ್​ ಫಿದಾ

ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ಡೇವಿಡ್​ ವಾರ್ನರ್​; ಕನ್ನಡಿಗರು ಫುಲ್​ ಫಿದಾ
ಡೇವಿಡ್​ ವಾರ್ನರ್

ವಾರ್ನರ್​ಗೆ​ ಟಿಕ್​ಟಾಕ್​ ಎಂದರೆ ಬಲು ಪ್ರೀತಿ. ಅವರು ಟಿಕ್​ಟಾಕ್​ಗೆ ಹಿಂದಿ ಹಾಗೂ ತೆಲುಗು ಸಾಂಗ್​ಗಳನ್ನು ಬಳಕೆ ಮಾಡುತ್ತಾರೆ. ಇನ್ನು, ಸ್ಟೇಡಿಯಮ್​ನಲ್ಲಿ ತೆಲುಗು ಹಾಡು ಬಂದಾಗ ಅವರು ಡಾನ್ಸ್​ ಮಾಡಿದ ಉದಾಹರಣೆ ಕೂಡ ಇದೆ.

TV9kannada Web Team

| Edited By: Rajesh Duggumane

Aug 19, 2021 | 7:39 PM

ಕ್ರಿಕೆಟರ್​ ಡೇವಿಡ್​ ವಾರ್ನರ್​ ಆಸ್ಟ್ರೇಲಿಯಾದವರಾದರೂ ಅವರಿಗೆ ಭಾರತ ಹಾಗೂ ಇಲ್ಲಿನ ಸಂಸ್ಕೃತಿ ಬಗ್ಗೆ ಎಲ್ಲಿಲ್ಲದ ಪ್ರೀತಿ ಹಾಗೂ ಗೌರವ. ಇದಕ್ಕೆ ಪ್ರಮುಖ ಕಾರಣ ಐಪಿಎಲ್​. ಅವರು ಐಪಿಎಲ್​ನಲ್ಲಿ ಹೈದರಾಬಾದ್​ ಪರ ಆಡುತ್ತಿದ್ದಾರೆ. ಐಪಿಎಲ್​ಗಾಗಿ ಭಾರತಕ್ಕೆ ಬಂದ ನಂತರದಲ್ಲಿ ಒಂದಷ್ಟು ವಿಚಾರ ಕಲಿತುಕೊಂಡಿದ್ದಾರೆ. ಈ ಬಾರಿ ವಾರ್ನರ್​ ಕನ್ನಡಿಗರ ಮನ ಗೆದ್ದಿದ್ದಾರೆ.

ವಾರ್ನರ್​ಗೆ​ ಟಿಕ್​ಟಾಕ್​ ಎಂದರೆ ಬಲು ಪ್ರೀತಿ. ಅವರು ಟಿಕ್​ಟಾಕ್​ಗೆ ಹಿಂದಿ ಹಾಗೂ ತೆಲುಗು ಸಾಂಗ್​ಗಳನ್ನು ಬಳಕೆ ಮಾಡುತ್ತಾರೆ. ಇನ್ನು, ಸ್ಟೇಡಿಯಮ್​ನಲ್ಲಿ ತೆಲುಗು ಹಾಡು ಬಂದಾಗ ಅವರು ಡಾನ್ಸ್​ ಮಾಡಿದ ಉದಾಹರಣೆ ಕೂಡ ಇದೆ. ಈ ಕಾರಣಕ್ಕೆ ಅವರು ಭಾರತೀಯರಿಗೆ ಹೆಚ್ಚು ಕನೆಕ್ಟ್​ ಆಗುತ್ತಾರೆ. ಈಗ ಅವರು ಕನ್ನಡಿಗರೂ ಹೆಚ್ಚು ಇಷ್ಟ ಆಗುವಂತ ಕೆಲಸ ಮಾಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ವಾರ್ನರ್​ ಪೋಸ್ಟ್​ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್​ನಲ್ಲಿ ವಾರ್ನರ್​ ಮಗಳು ಸ್ಟೇಡಿಯಮ್​ ಪೆವಿಲಿಯನ್​ನಲ್ಲಿ ಕೂತು ಅಪ್ಪನನ್ನು ಸಪೋರ್ಟ್​ ಮಾಡುತ್ತಿದ್ದಾಳೆ. ಈ ವಿಡಿಯೋಗೆ ವಾರ್ನರ್​ ಬಳಕೆ ಮಾಡಿದ್ದು ‘ಅಪ್ಪ ಐ ಲವ್​ ಯೂ ಪಾ..’ ಹಾಡನ್ನು. ಈ ವಿಡಿಯೋ ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

‘ನೀವು ಮನಸ್ಸು ಗೆದ್ದು ಬಿಟ್ರಿ’ ಎಂದು ಕೆಲವರು ಕಮೆಂಟ್​ ಮಾಡಿದರೆ, ಇನ್ನೂ ಕೆಲವರು ಕನ್ನಡ ಎಂದು ಹಾರ್ಟ್​ ಎಮೋಜಿ ಹಾಕಿದ್ದಾರೆ. ಈ ವಿಡಿಯೋಗೆ ಕನ್ನಡಿಗರಿಂದ ಕಮೆಂಟ್​ಗಳ ಮಳೆ ಹರಿದು ಬರುತ್ತಿದೆ.

2017ರಲ್ಲಿ ತೆರೆಗೆ ಬಂದ  ಚೌಕ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ತರುಣ್​ ಸುಧೀರ್​ ನಿರ್ದೇಶನದ ಈ ಸಿನಿಮಾದಲ್ಲಿ ತಂದೆ ಸೆಂಟಿಮೆಂಟ್​ಗೂ ಆದ್ಯತೆ ನೀಡಲಾಗಿತ್ತು. ಈ ಸಿನಿಮಾದಲ್ಲಿ ಬರುವ ‘ಅಪ್ಪ ಐ ಲವ್​ ಯೂ ಪಾ..’ ಹಾಡು ಕೂಡ ಹಿಟ್​ ಆಗಿತ್ತು. ಈಗ ಈ ಹಾಡನ್ನು ಅವರು ಕೂಡ ಬಳಕೆ ಮಾಡಿದ್ದು ವಿಶೇಷ.

ಇದನ್ನೂ ಓದಿ:  ಕೊಹ್ಲಿ ದಾಖಲೆಯನ್ನು ಮುರಿಯುವುದಿರಲಿ.. ನಮ್ಮಿಂದ ಟಚ್​ ಕೂಡ ಮಾಡಲಾಗುವುದಿಲ್ಲ; ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್

Sai Pallavi: ಸಾಯಿ ಪಲ್ಲವಿಗೆ ಜೋಡಿಯಾದ ಕ್ರಿಕೆಟಿಗ ಡೇವಿಡ್​ ವಾರ್ನರ್​; ಫ್ಯಾನ್ಸ್​ ಮೆಚ್ಚಿದ ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada