ಸಂಜನಾಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ; ಆದ್ದರಿಂದಲೇ ಅವರು ಊಟ ಕೊಡಲು ಬಂದಿಲ್ಲ: ರೇಷ್ಮಾ ಗಲ್ರಾನಿ
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಸಂಜನಾ ಗಲ್ರಾನಿ ತಾಯಿ ರೇಷ್ಮಾ ಗಲ್ರಾನಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಡ್ರಗ್ಸ್ ಸೇವನೆ ಪ್ರಕರಣದ ಎಫ್ಎಸ್ಎಲ್ ವರದಿಯಲ್ಲಿ ಈರ್ವರು ನಟಿಯರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಜನಾ ತಾಯಿ ರೇಷ್ಮಾ ಗಲ್ರಾನಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಸಂಜನಾ ಅವರಿಗೆ ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ತಪ್ಪು ಮಾಡಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ತಮ್ಮ ಫೌಂಡೇಶನ್ ಮುಖಾಂತರ ಅಗತ್ಯವಿರುವವರಿಗೆ ಸ್ವತಃ ಆಹಾರ ಹಂಚುತ್ತಿದ್ದ ಸಂಜನಾ, ಊಟ ಕೊಡಲು ಬರದೇ ಗೈರಾದ ಕುರಿತು ರೇಷ್ಮಾ ಪ್ರತಿಕ್ರಿಯಿಸಿದ್ದಾರೆ. ‘‘ಎಲ್ಲವೂ ಹಣೆಬರಹ, ದೇವರಿದ್ದಾರೆ, ನಾವೇನೂ ತಪ್ಪು ಮಾಡಿಲ್ಲ. ಸಂಜನಾಗೆ ಹುಷಾರಿಲ್ಲ ಹಾಗಾಗಿ ಊಟ ನೀಡಲು ಬಂದಿಲ್ಲ. ಇಲ್ಲವೆಂದಾದರೆ ಸಂಜನಾ ಅವರೇ ಬಂದು ಊಟ ಕೊಡುತ್ತಿದ್ದರು. ಪದೇಪದೆ ಅದೇ ಮಾತು ಕೇಳಿ ಬರ್ತಿದ್ರೆ ಬೇಜಾರಾಗುತ್ತದೆ. ಹಳೆಯ ಘಟನೆಗಳನ್ನು ಮರೆತು ಬದುಕಬೇಕು ಎಂದುಕೊಂಡಿದ್ದಾರೆ. ಗ್ರಹಚಾರಾನೋ ಏನೋ ಗೊತ್ತಿಲ್ಲ, ಮತ್ತೆ ಅದೇ ಬರ್ತಿದೆ’’ ಎಂದು ಅವರು ಅಳಲು ತೋಡಿಕೊಂಡಿದ್ಧಾರೆ.
ಪ್ರಕರಣದ ಕುರಿತಂತೆ ಸಂಜನಾ ಹೇಳಿದ್ದೇನು? ಮಾದಕ ದ್ರವ್ಯ ಸೇವನೆ, ಮಾರಾಟ ಜಾಲದಲ್ಲಿ ಸದ್ದು ಮಾಡಿದ್ದ ನಟಿ ಸಂಜನಾ, ರಾಗಿಣಿ ಇಬ್ಬರೂ ಡ್ರಗ್ಸ್ ಸೇವಿಸಿದ್ದಾರೆ ಎನ್ನುವುದು (Sandalwood Drug Scandal) ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದ್ದು, ಈ ಬಗ್ಗೆ ಬೆಂಗಳೂರಿನ ಇಂದಿರಾನಗರದ ಮನೆಯಲ್ಲಿರುವ ಸಂಜನಾ ಗಲ್ರಾನಿ (Sanjana Galrani) ಅವರ ಪ್ರತಿಕ್ರಿಯೆ ಕೇಳಿದಾಗ ‘‘ನನಗೇನೂ ಗೊತ್ತಿಲ್ಲ, ಎಫ್ಎಸ್ಎಲ್ ವರದಿ ಬಗ್ಗೆ ಮಾಹಿತಿ ಇಲ್ಲ’’ ಎಂದು ಹೇಳಿದ್ದಾರೆ. ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್ ಸೇವನೆ ಪ್ರಕರಣ ನಿನ್ನೆ FSL ವರದಿ ಸಹಿತ ಸೆಕೆಂಡರಿ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ಈ ಹಿಂದೆ ಪ್ರಿಲಿಮಿನರಿ ಚಾರ್ಜ್ಶೀಟ್ ಸಲ್ಲಿಸಿದ್ದ ಸಿಸಿಬಿ ಈಗ ಮುಂದಿನ ಹೆಜ್ಜೆ ಇಟ್ಟಿದೆ.
ತನಿಖೆಯಲ್ಲಿ ಕಂಡು ಬಂದ ಇತರ ಅಂಶಗಳಿಂದ ತಿಳಿದ ಮಾಹಿತಿಗಳ ಪ್ರಕಾರ, ಈರ್ವರು ನಟಿಯರು ಡ್ರಗ್ಸ್ ಸೇವನೆಯಲ್ಲದೇ ಅದರ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಸಂಜನಾ, ರಾಗಿಣಿ ತೆರಳುತಿದ್ದ ಪಾರ್ಟಿಗಳಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಮಾರಾಟ ಸಹಜ ಎನ್ನುವಂತಾಗಿತ್ತು ಎಂಬ ಮಾಹಿತಿ ಇದೆ. ನಿರಂತರವಾಗಿ ಪಾರ್ಟಿಗಳನ್ನು ಅಯೋಜನೆ ಮಾಡಲಾಗುತ್ತಿದ್ದ ಕಾರಣ ಅದು ದೊಡ್ಡ ಜಾಲವೇ ಆಗಿದೆ. ಸಾಕಷ್ಟು ಪಾರ್ಟಿ ಅಯೋಜನೆ ಮಾಡಿದ್ದಕ್ಕೆ ಸೂಕ್ತ ಸಾಕ್ಷಿಗಳು ಲಭ್ಯ ಆಗಿವೆಯಾದರೂ ಇದುವರೆಗೆ ಪಾರ್ಟಿಗಳಲ್ಲಿ ಎಷ್ಟು ಡ್ರಗ್ಸ್ ಮಾರಾಟ ಅಗಿದೆ ಎಂಬುದು ಮಾತ್ರ ಪತ್ತೆ ಅಗಿಲ್ಲ. ಈ ಕುರಿತು ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
ಇದನ್ನೂ ಓದಿ:
ಸಹೋದರ ಕೋಮಲ್ ವಿರುದ್ಧ ಕೇಳಿ ಬಂದ ಗಂಭೀರ ಆರೋಪಕ್ಕೆ ಪರೋಕ್ಷವಾಗಿ ಉತ್ತರ ನೀಡಿದರಾ ಜಗ್ಗೇಶ್?
(Sanjana Galrani mother Reshma Galrani reacted to TV9 on FSL report of Sanjana and Ragini)
Published On - 2:50 pm, Wed, 25 August 21