AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಮದುವೆಯಾದ ನಟ ಪ್ರಕಾಶ್​ ರಾಜ್​ !-ಎಲ್ಲವೂ ಮಗನಿಗಾಗಿಯಂತೆ

Prakash Raj: ನಟ ಪ್ರಕಾಶ್​ ರಾಜ್​ ಸದ್ಯ ಮಣಿರತ್ನಂ ಅವರ ಪೊನ್ನಿಯಿನ್​ ಸೆಲ್ವನ್​ ಚಿತ್ರದ ಶೂಟಿಂಗ್​​ನಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಇನ್ಯಾವುದೋ ಚಿತ್ರದ ಶೂಟಿಂಗ್​​ ವೇಳೆ ಗಂಭೀರವಾಗಿ ಗಾಯಗೊಂಡು, ಸರ್ಜರಿಗೂ ಒಳಗಾಗಿದ್ದಾರೆ.

ಮತ್ತೊಮ್ಮೆ ಮದುವೆಯಾದ ನಟ ಪ್ರಕಾಶ್​ ರಾಜ್​ !-ಎಲ್ಲವೂ ಮಗನಿಗಾಗಿಯಂತೆ
ಮತ್ತೆ ಮದುವೆಯಾದ ಪ್ರಕಾಶ್​ ರಾಜ್​
TV9 Web
| Edited By: |

Updated on:Aug 25, 2021 | 12:05 PM

Share

ಬಹುಭಾಷಾ ನಟ ಪ್ರಕಾಶ್​ ರಾಜ್ (Prakash Raj)​ ಇದೀಗ ಮತ್ತೊಮ್ಮೆ ಮದುವೆಯಾಗಿದ್ದಾರೆ..ಅದೂ ಮಗನಿಗಾಗಿಯಂತೆ !-ಅರೆ ಪ್ರಕಾಶ್​ ರಾಜ್​ ಮತ್ತೆ ಮದುವೆಯಾದ್ರಾ ಅಂತ ಮುಂದುವರಿದು ಆಲೋಚನೆ ಮಾಡಬೇಡಿ. ಅವರು ಇದೀಗ ತಮ್ಮ ಪತ್ನಿಯೊಂದಿಗೇ ಮತ್ತೆ ಮದುವೆಯಾಗಿದ್ದಾರೆ. ಮಗ ವೇದಾಂತ್​ ಆಸೆಯಂತೆ ಇವರಿಬ್ಬರ ವಿವಾಹ ನಡೆದಿದೆ. ಪ್ರಕಾಶ್​ ರಾಜ್​ ಮತ್ತು ಪೋನಿ ವರ್ಮಾ (Pony Verma) ದಂಪತಿ ನಿನ್ನೆ (ಆಗಸ್ಟ್ 24) ತಮ್ಮ 11ನೇ ವಿವಾಹ ಮಹೋತ್ಸವ ಆಚರಿಸಿಕೊಂಡಿದ್ದಾರೆ. ಇವರ ಪುತ್ರ ವೇದಾಂತ್​ಗೆ ತನ್ನ ತಂದೆ-ತಾಯಿ ಮದುವೆಯನ್ನು ನೋಡುವ ಬಯಕೆ ಉಂಟಾಗಿತ್ತಂತೆ. ಅದನ್ನು ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದ. ಅದನ್ನು ಪ್ರಕಾಶ್​ ರಾಜ್​ ದಂಪತಿ ತಮ್ಮ ವೆಡ್ಡಿಂಗ್ ಆ್ಯನಿವರ್ಸರಿ ದಿನ ಈಡೇರಿಸಿದ್ದಾರೆ.

ನಟ ಪ್ರಕಾಶ್​ ರಾಜ್​ ಟ್ವೀಟ್ ಮಾಡಿಕೊಂಡು ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ನಾವಿಂದು ಇನ್ನೊಮ್ಮೆ ಮದುವೆ ಮಾಡಿಕೊಂಡಿದ್ದೇವೆ. ಯಾಕೆಂದರೆ ನಮ್ಮ ಮದುವೆ ನೋಡಲು ಮಗ ವೇದಾಂತ್​ ತುಂಬ ಆಸೆ ವ್ಯಕ್ತಪಡಿಸಿದ್ದ. ಕುಟುಂಬದೊಂದಿಗೆ ತುಂಬ ಉತ್ತಮ ಸಮಯ ಕಳೆದೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ನಿನ್ನೆ ನಡೆದ ಪ್ರಕಾಶ್​ ರಾಜ್​ ಮತ್ತು ಪೋನಿ ವರ್ಮಾ ಮದುವೆ ಸಂಭ್ರಮದಲ್ಲಿ ಪ್ರಕಾಶ್​ ರಾಜ್​ ಪುತ್ರಿಯರಾದ ಮೇಘನಾ ಮತ್ತು ಪೂಜಾ ಕೂಡ ಇದ್ದರು. ಇವರು ಪ್ರಕಾಶ್​ ರಾಜ್​ ಮೊದಲನೇ ಪತ್ನಿಯ ಮಕ್ಕಳು. ಒಟ್ಟಾರೆ ನಿನ್ನೆ ಪ್ರಕಾಶ್​ ರಾಜ್​ ತನ್ನ ಮೂವರ ಮಕ್ಕಳ ಎದುರು, ಪೋನಿ ವರ್ಮಾರನ್ನು ಮತ್ತೊಮ್ಮೆ ವಿವಾಹವಾಗಿದ್ದಾರೆ.

ನಟ ಪ್ರಕಾಶ್​ ರಾಜ್​ ಸದ್ಯ ಮಣಿರತ್ನಂ ಅವರ ಪೊನ್ನಿಯಿನ್​ ಸೆಲ್ವನ್​ ಚಿತ್ರದ ಶೂಟಿಂಗ್​​ನಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಇನ್ಯಾವುದೋ ಚಿತ್ರದ ಶೂಟಿಂಗ್​​ ವೇಳೆ ಗಂಭೀರವಾಗಿ ಗಾಯಗೊಂಡು, ಸರ್ಜರಿಗೂ ಒಳಗಾಗಿದ್ದಾರೆ. ಇದೆಲ್ಲದರ ಮಧ್ಯೆ ನಿನ್ನೆ ಕುಟುಂಬದೊಟ್ಟಿಗೆ ಉತ್ತಮ ಸಮಯ ಕಳೆದಿದ್ದಾರೆ. ಪ್ರಕಾಶ್​ ತಮ್ಮ ಮೊದಲ ಪತ್ನಿ ಲಲಿತಾ ಕುಮಾರಿಗೆ 2009ರಲ್ಲಿ ವಿಚ್ಛೇದನ ನೀಡಿದ್ದಾರೆ. ನಂತರ 2010ರಲ್ಲಿ ಪೋನಿ ವರ್ಮಾರನ್ನು ವಿವಾಹವಾಗಿದ್ದಾರೆ.

ಇದನ್ನೂ ಓದಿ: ಸುಖಾ ಸುಮ್ಮನೆ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರೆ ಹುಷಾರ್! ಸಂಚಾರಿ ಪೊಲೀಸರಿಂದ ಖಡಕ್ ರೂಲ್ಸ್ ಜಾರಿ

ನಮಗೆ 2 ಬಾರಿ ಮೇಯರ್​ ಸ್ಥಾನ ತಪ್ಪಿಹೋಗಿದೆ, ಜೆಡಿಎಸ್ ಜೊತೆ ಮಾತನಾಡಿದ್ದೇವೆ – ಸಚಿವ ಎಸ್.ಟಿ. ಸೋಮಶೇಖರ್

Published On - 12:01 pm, Wed, 25 August 21

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ