ನಂಗೇನೂ ಗೊತ್ತಿಲ್ಲ, ಎಫ್​​ಎಸ್​ಎಲ್​ ವರದಿ ಬಗ್ಗೆ ಮಾಹಿತಿ ಇಲ್ಲ: ಡ್ರಗ್​ ಸೇವನೆ ಬಗ್ಗೆ ಪ್ರತಿಕ್ರಿಯಿಸದ ಸಂಜನಾ ಗಲ್ರಾನಿ

Sandalwood Drug Scandal: ಈ ಬಗ್ಗೆ ಬೆಂಗಳೂರಿನ ಇಂದಿರಾನಗರದ ಮನೆಯಲ್ಲಿರುವ ಸಂಜನಾ ಗಲ್ರಾನಿ ಅವರ ಪ್ರತಿಕ್ರಿಯೆ ಕೇಳಿದಾಗ ನನಗೇನೂ ಗೊತ್ತಿಲ್ಲ, ಎಫ್​​ಎಸ್​ಎಲ್​ ವರದಿ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ನಂಗೇನೂ ಗೊತ್ತಿಲ್ಲ, ಎಫ್​​ಎಸ್​ಎಲ್​ ವರದಿ ಬಗ್ಗೆ ಮಾಹಿತಿ ಇಲ್ಲ: ಡ್ರಗ್​ ಸೇವನೆ ಬಗ್ಗೆ ಪ್ರತಿಕ್ರಿಯಿಸದ ಸಂಜನಾ ಗಲ್ರಾನಿ
ಸಂಜನಾ
Follow us
TV9 Web
| Updated By: Skanda

Updated on:Aug 24, 2021 | 11:35 AM

ಮಾದಕ ದ್ರವ್ಯ ಸೇವನೆ, ಮಾರಾಟ ಜಾಲದಲ್ಲಿ ಸದ್ದು ಮಾಡಿದ್ದ ನಟಿ ಸಂಜನಾ, ರಾಗಿಣಿ ಇಬ್ಬರೂ ಡ್ರಗ್ಸ್​ ಸೇವಿಸಿದ್ದಾರೆ ಎನ್ನುವುದು (Sandalwood Drug Scandal) ಎಫ್​ಎಸ್​ಎಲ್​ ವರದಿಯಲ್ಲಿ ದೃಢಪಟ್ಟಿದ್ದು, ಈ ಬಗ್ಗೆ ಬೆಂಗಳೂರಿನ ಇಂದಿರಾನಗರದ ಮನೆಯಲ್ಲಿರುವ ಸಂಜನಾ ಗಲ್ರಾನಿ (Sanjana Galrani) ಅವರ ಪ್ರತಿಕ್ರಿಯೆ ಕೇಳಿದಾಗ ನನಗೇನೂ ಗೊತ್ತಿಲ್ಲ, ಎಫ್​​ಎಸ್​ಎಲ್​ ವರದಿ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವನೆ ಪ್ರಕರಣ ನಿನ್ನೆ FSL ವರದಿ ಸಹಿತ ಸೆಕೆಂಡರಿ ಚಾರ್ಜ್​​ಶೀಟ್​ ಸಲ್ಲಿಕೆಯಾಗಿದ್ದು, ಈ ಹಿಂದೆ ಪ್ರಿಲಿಮಿನರಿ ಚಾರ್ಜ್​​ಶೀಟ್ ಸಲ್ಲಿಸಿದ್ದ ಸಿಸಿಬಿ ಈಗ ಮುಂದಿನ ಹೆಜ್ಜೆ ಇಟ್ಟಿದೆ.

ತನಿಖೆಯಲ್ಲಿ ಕಂಡು ಬಂದ ಇತರೆ ಅಂಶಗಳನ್ನು ಗಮನಿಸಿದಾಗ ಈ ನಟಿಯರು ಕಡಿಮೆ ಪ್ರಮಾಣದಲ್ಲಿ ಡ್ರಗ್ಸ್ ಸೇವನೆ ಮಾಡಿರಬಹುದು ಅದ್ರೆ ಬೃಹತ್ ಪ್ರಮಾಣದ ಮಾರಾಟ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ನಗರದಲ್ಲಿ ನಡೆಯುತ್ತಿದ್ದ ಹೈಫೈ ಪಾರ್ಟಿಯಲ್ಲಿ ಸಂಜನಾ, ರಾಗಿಣಿ (Ragini Dwivedi) ಹಲವು ಬಾರಿ ಡ್ರಗ್ಸ್ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಸಂಜನಾ, ರಾಗಿಣಿ ತೆರಳುತಿದ್ದ ಪಾರ್ಟಿಗಳಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಮಾರಾಟ ಸಹಜ ಎನ್ನುವಂತಾಗಿತ್ತು ಎಂಬ ಮಾಹಿತಿ ಇದೆ. ನಿರಂತರವಾಗಿ ಪಾರ್ಟಿಗಳನ್ನು ಅಯೋಜನೆ ಮಾಡಲಾಗುತ್ತಿದ್ದ ಕಾರಣ ಅದು ದೊಡ್ಡ ಜಾಲವೇ ಆಗಿದೆ. ಸಾಕಷ್ಟು ಪಾರ್ಟಿ ಅಯೋಜನೆ ಮಾಡಿದ್ದಕ್ಕೆ ಸೂಕ್ತ ಸಾಕ್ಷಿಗಳು ಲಭ್ಯ ಆಗಿವೆಯಾದರೂ ಇದುವರೆಗೆ ಪಾರ್ಟಿಗಳಲ್ಲಿ ಎಷ್ಟು ಡ್ರಗ್ಸ್ ಮಾರಾಟ ಅಗಿದೆ ಎಂಬುದು ಮಾತ್ರ ಪತ್ತೆ ಅಗಿಲ್ಲ.

ಡ್ರಗ್ಸ್‌ ಕೇಸ್‌ನಲ್ಲಿ ಬಂಧಿತರಾಗಿದ್ದ ಸಂಜನಾ, ರಾಗಿಣಿ ಒಮ್ಮೆ ಹೇರ್‌ ಸ್ಯಾಂಪಲ್ ನೀಡಲು ನಿರಾಕರಿಸುತ್ತಿದ್ದರು. ಹಾಗಾಗಿ, ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಸಿಸಿಬಿ ಅಧಿಕಾರಿಗಳ ಮನವಿಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಿದ ಕಾರಣ ತಲೆಗೂದಲ ಸ್ಯಾಂಪಲ್​ ಪಡೆದು 2020ರ ಅಕ್ಟೋಬರ್​​ನಲ್ಲಿ ಪರೀಕ್ಷೆಗೆ ಕಳುಹಿಸಲಾಗಿತ್ತು.ಬರೋಬ್ಬರಿ 10 ತಿಂಗಳ ಬಳಿಕ ಎಫ್ಎಸ್ಎಲ್ ರಿಪೋರ್ಟ್ ಬಂದಿದ್ದು, ಸದ್ಯ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಮಣಿಯರಾದ ರಾಗಿಣಿ,ಸಂಜನಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೀಗಾಗಿ ಮುಂದೆ ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎನ್ನುವುದು ಕುತೂಹಲ ಮೂಡಿಸಿದೆ.

2020ರ ಸೆಪ್ಟೆಂಬರ್ 14ನೇ ತಾರೀಖಿನಂದು ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದರು. 140 ದಿನಗಳ ಕಾಲ ಕಸ್ಟಡಿಯಲ್ಲಿದ್ದ ಅವರಿಗೆ, 2021ರ ಜನವರಿ 21ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಜನವರಿ 25ರಂದು ಅವರು ಜೈಲಿಂದ ಬಿಡುಗಡೆಯಾಗಿದ್ದರು. 2020ರ ಸೆಪ್ಟೆಂಬರ್ 16ರಂದು ಜೈಲು ಸೇರಿದ್ದ ಸಂಜನಾ ಗಲ್ರಾನಿ ಡಿಸೆಂಬರ್ 11 2020ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. 56 ದಿನಗಳ ಕಾಲ ಜೈಲಿನಲ್ಲಿ ಇದ್ದ ಸಂಜನಾ ಗಲ್ರಾನಿ, ಗಂಭೀರ ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಇದನ್ನೂ ಓದಿ: Sandalwood Drug Scandal: ರಾಗಿಣಿ ದ್ವಿವೇದಿ , ಸಂಜನಾ ಗಲ್ರಾನಿ ಡ್ರಗ್ ಸೇವಿಸಿದ್ದು ನಿಜ: FSL ವರದಿಯಲ್ಲಿ ದೃಢ 

ತಲೆಗೂದಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರಿಂದ ಡ್ರಗ್​ ಸೇವನೆ ಪತ್ತೆ ಸುಲಭವಾಯ್ತು: ಸಂದೀಪ್ ಪಾಟೀಲ್

(Sanjana Galrani denied to react over CFSL report related to Drug consumption Sandalwood Drug Scandal)

Published On - 11:34 am, Tue, 24 August 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ