ತಲೆಗೂದಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರಿಂದ ಡ್ರಗ್​ ಸೇವನೆ ಪತ್ತೆ ಸುಲಭವಾಯ್ತು: ಸಂದೀಪ್ ಪಾಟೀಲ್

TV9 Digital Desk

| Edited By: Skanda

Updated on:Aug 24, 2021 | 11:10 AM

Sandalwood Drug Scandal: ಒಂದು ಅಧ್ಯಯನದಲ್ಲಿ ತಲೆ ಕೂದಲಿನಲ್ಲಿ ಒಂದು ವರ್ಷದವರೆಗೂ ಡ್ರಗ್ಸ್ ಸ್ಯಾಂಪಲ್ಸ್ ಇರುತ್ತದೆ ಎಂದು ಗೊತ್ತಾದ ಕಾರಣ ಅದನ್ನು ಸದುಪಯೋಗಪಡಿಸಿಕೊಳ್ಳಲೆಂದು ಕಳೆದ ವರ್ಷ ಆರೋಪಿಗಳ ಕೂದಲು ಸ್ಯಾಂಪಲ್ಸ್ ಸಂಗ್ರಹಿಸಿ ಹೈದರಾಬಾದ್​ನ CFSLಗೆ ಕಳುಹಿಸಲಾಗಿತ್ತು.

ತಲೆಗೂದಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರಿಂದ ಡ್ರಗ್​ ಸೇವನೆ ಪತ್ತೆ ಸುಲಭವಾಯ್ತು: ಸಂದೀಪ್ ಪಾಟೀಲ್
ಸಂದೀಪ್ ಪಾಟೀಲ್ (ಸಂಗ್ರಹ ಚಿತ್ರ)

Follow us on

ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಮಾದಕ ವಸ್ತು ಸೇವನೆ ಮಾಡಿದ್ದರು (Sandalwood Drug Scandal) ಎನ್ನುವುದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಈ ಬಗ್ಗೆ ಅಧಿಕೃತ ಮಾಹಿತಿಯೂ ಲಭ್ಯವಾಗಿದೆ. ಈ ಬಗ್ಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿದ್ದು, ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ ಮತ್ತು ಯೂರಿನ್ ಸ್ಯಾಂಪಲ್​ ಕಳುಹಿಸಲಾಗುತ್ತದೆ. ಅದರಲ್ಲಿ ಡ್ರಗ್ಸ್ ಸೇವಿಸಿ ಒಂದೆರಡು ದಿನ ಆಗಿದ್ದರೆ ಮಾತ್ರ ಪಾಸಿಟಿವ್ ಬರುತ್ತಿತ್ತು. ಕೆಲವು ಪ್ರಕರಣದಲ್ಲಿ ಆರೋಪಿಯನ್ನ ತಡವಾಗಿ ಅರೆಸ್ಟ್ ಮಾಡಿದಾಗ ಡ್ರಗ್ಸ್ ತೆಗೆದುಕೊಂಡಿದ್ದರೂ ಪತ್ತೆ ಮಾಡುವುದು ಕಷ್ಟ ಆಗುತ್ತಿತ್ತು. ಒಂದು ಅಧ್ಯಯನದಲ್ಲಿ ತಲೆ ಕೂದಲಿನಲ್ಲಿ ಒಂದು ವರ್ಷದವರೆಗೂ ಡ್ರಗ್ಸ್ ಸ್ಯಾಂಪಲ್ಸ್ ಇರುತ್ತದೆ ಎಂದು ಗೊತ್ತಾದ ಕಾರಣ ಅದನ್ನು ಸದುಪಯೋಗಪಡಿಸಿಕೊಳ್ಳಲೆಂದು ಕಳೆದ ವರ್ಷ ಆರೋಪಿಗಳ ಕೂದಲು ಸ್ಯಾಂಪಲ್ಸ್ ಸಂಗ್ರಹಿಸಿ ಹೈದರಾಬಾದ್​ನ CFSLಗೆ ಕಳುಹಿಸಲಾಗಿತ್ತು. ಅದರಲ್ಲಿ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿದ್ದಾರೆಂಬ ಪಾಸಿಟಿವ್ ರಿಪೋರ್ಟ್ ಬಂದಿದೆ ಎಂದು ತಿಳಿಸಿದ್ದಾರೆ.

ನಟಿಯರಿಬ್ಬರೂ ಡ್ರಗ್ಸ್​ ಸೇವಿಸಿರುವುದು ಖಚಿತವಾದ ನಂತರ ಅಂದು ಡ್ರಗ್ಸ್ ಸಿಗದೇ ನಟಿಯರನ್ನು ಅರೆಸ್ಟ್ ಮಾಡಿದ್ದಾರೆ ಎಂದವರಿಗೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಅರೋಪಿಗಳು ಸಿಂಡಿಕೇಟ್ ಅಗಿ ಒಳಸಂಚು ರೂಪಿಸಿ ದಂಧೆ ನಡೆಸುತ್ತಿದ್ದರು ಎನ್ನುವುದನ್ನು ಸಿಸಿಬಿ ಬಯಲಿಗೆಳೆದಿದ್ದರೂ ಹಲವರು ಅದನ್ನು ಒಪ್ಪಿರಲಿಲ್ಲ. ಸಂಜನಾ, ರಾಗಿಣಿ ಮನೆಯಲ್ಲಿ ಅಥವಾ ಅವರ ಬಳಿಯಲ್ಲಿ ಡ್ರಗ್ಸ್ ಸಿಗಬೇಕು ಎನ್ನುವುದು ಇಲ್ಲ. ವೀರೇನ್ ಖನ್ನಾ ಈವರೆಗಿನ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಕಿಂಗ್ ಪಿನ್. ವಿರೇನ್ ಖನ್ನಾ ಅರೋಜನೆ ಮಾಡುತ್ತಿದ್ದ ಪಾರ್ಟಿಗಳಲ್ಲಿ ಸೆಲೆಬ್ರೆಟಿಗಳು ಬರ್ತಾರೆ ಎಂದು ಯುವ ಜನತೆಯನ್ನು ಸೆಳೆಯುತಿದ್ದರು. ಅಲ್ಲಿ ಭಾಗಿಯಾಗುತಿದ್ದ ಯುವಕ ಯುವತಿಯರಿಗೆ ಡ್ರಗ್ಸ್ ನೀಡುತಿದ್ದರು. ಈ ರೀತಿಯಲ್ಲಿ ನಗರದ ನಾನಾ ಭಾಗದಲ್ಲಿ ಪಾರ್ಟಿ ನಡೆಸಿ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಡ್ರಗ್ಸ್ ಮಾರಾಟದಿಂದ ಬಂದ ಲಾಭದ ಹಣವನ್ನು ರಾಗಿಣಿ, ಸಂಜನಾ ಸೇರಿದಂತೆ ಎಲ್ಲಾ ಅರೋಪಿಗಳಿಗೆ ವಿರೇನ್ ಖನ್ನಾ ಹಂಚಿದ್ದಾರೆ. ಕೋಟಿ ಕೋಟಿ ವ್ಯವಹಾರ ನಡೆಸಿರುವ ವಿರೇನ್ ಖನ್ನಾ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಬಹುಪಾಲು ಹಣಗಳಿಕೆ ಅಕ್ರಮ ಎಂದು ಅನುಮಾನವೂ ವ್ಯಕ್ತವಾಗಿತ್ತು.

ಈ ಅರೋಪಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಿರು ಸಿಸಿಬಿ, ಫೈನಾನ್ಷಿಯರ್ಸ್, ಡ್ರಗ್ಸ್ ಪೆಡ್ಲರ್ಸ್, ಫೆಸಿಲಿಟೇಟರ್ಸ್ ಎಂದು ಗುರುತಿಸಿದೆ. ಇಲ್ಲಿ ಬಹುಮುಖ್ಯ ಹಣಕಾಸು ವ್ಯವಹಾರ ಮತ್ತು ವ್ಯವಸ್ಥೆಗಳನ್ನು ವಿರೇನ್ ಖನ್ನಾ ಮಾಡಿಸುತಿದ್ದ. ನೈಜೀರಿಯಾ ಪ್ರಜೆಗಳು, ಮೆಸ್ಸಿ, ಪ್ರತೀಕ್ ಶೆಟ್ಟಿ ಇವರುಗಳ ಮೂಲಕ ಡ್ರಗ್ಸ್ ಪೆಡ್ಲಿಂಗ್ ಮಾಡಲಾಗುತಿತ್ತು. ಇವರೊಂದಿಗೆ ರಾಗಿಣಿ, ಸಂಜನಾ ಸಹ ಹಲವು ಬಾರಿ ನೇರವಾಗಿ ವ್ಯವಹಾರ ನಡೆಸಿದ್ದಾರೆ. ಈ ಎಲ್ಲಾ ವ್ಯವಹಾರಗಳಿಗೆ ವಿರೇನ್ ಖನ್ನಾ ತನ್ನ ಕಂಪನಿ ಮೂಲಕ ಫೆಸಿಲಿಟೇಟರ್​ ಅಗಿರುತಿದ್ದ. ಆತ ರಾಗಿಣಿ ಸಂಜನಾ ಮೂಲಕ ಯುವಜನತೆಯನ್ನು ಸೆಳೆಯುತಿದ್ದ. ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗಿಯಾಗ್ತಾರೆ ಎನ್ನುವುದನ್ನೆ ಬಂಡವಾಳ ಮಾಡಿಕೊಂಡು ಐಶಾರಾಮಿ ಹೋಟೆಲ್ ಬುಕ್ ಮಾಡುತಿದ್ದ ಎನ್ನಲಾಗಿದೆ.

ತನಿಖೆ ವೇಳೆ ಮತ್ತೊಂದು ಸ್ಪೋಟಕ ಮಾಹಿತಿಯೂ ಬಹಿರಂಗವಾಗಿದ್ದು, ಇದುವರೆಗೆ ಸಿಸಿಬಿ ವಶಪಡಿಸಿಕೊಂಡ ಡ್ರಗ್ಸ್ ಮೊತ್ತ ನಿಜಕ್ಕೂ ಆಘಾತಕಾರಿಯಾಗಿದೆ. ಬಾಣಸವಾಡಿ ಡ್ರಗ್ಸ್ ಕೇಸ್ ತನಿಖೆ ವೇಳೆ ಸ್ಪೋಟಕ ಮಾಹಿತಿ ಲಭಿಸಿದ್ದು, 2018 ರಿಂದಲೂ ಈ ಗ್ಯಾಂಗ್ ಸಂಪೂರ್ಣ ಆಕ್ಟಿವ್ ಆಗಿದ್ದು, ಬಾಣಸವಾಡಿಯಲ್ಲಿ ಸಿಸಿಬಿ ವಶಪಡಿಸಿಕೊಂಡಿದ್ದ ಡ್ರಗ್ಸ್ ಮೌಲ್ಯವೇ ಸುಮಾರು ಒಂದೂವರೆ ಕೋಟಿ ರೂಪಾಯಿ ಆಗಿತ್ತು. ಒಂದುವೇಳೆ ಪೊಲೀಸರು ಡ್ರಗ್ಸ್ ವಶಕ್ಕೆ ಪಡೆದಿಲ್ಲ ಅಂದಿದ್ದರೆ ಅದು ಆದಿತ್ಯ ಅಗರ್ವಾಲ್ ಮೂಲಕ ವಿರೇನ್ ಖನ್ನಾ ಕೈಗೆ ತಲುಪುತಿತ್ತು. ಆದರೆ ಅಂದು ಖನ್ನಾ ಬಳಿಗೆ ಡ್ರಗ್ಸ್ ತಲುಪುವ ಮೊದಲೇ ಸೀಜ್ ಮಾಡಲಾಗಿದ್ದ ಕಾರಣ ಡ್ರಗ್ಸ್ ಎಲ್ಲಿಗೆ ತಲುಪುತಿತ್ತು ಎಂದು ತಿಳಿದಿರಲಿಲ್ಲ. ಆದರೆ, ಈಗ ತನಿಖೆ ವೇಳೆ ಡ್ರಗ್ಸ್ ಖನ್ನಾ ಮೂಲಕ ಪಾರ್ಟಿಯಲ್ಲಿ ಹಂಚಿಕೆ ಮಾಡಲು ಹೋಗುತ್ತಿತ್ತು ಎಂಬುದು ಬಹಿರಂಗವಾಗಿದೆ. ಈಗ ಡ್ರಗ್ಸ್ ಕೇಸ್​ನಲ್ಲಿ ಸೀಜ್ ಅಗಿರುವ ಡ್ರಗ್ಸ್ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ್ದು ಎನ್ನುವುದು ಈ ಪ್ರಕರಣಕ್ಕೆ ಮತ್ತಷ್ಟು ಮಹತ್ತರ ಮಾಹಿತಿ ಒದಗಿಸಿದಂತಾಗಿದೆ.

ನಗರದಲ್ಲಿ ನಡೆಯುತ್ತಿದ್ದ ಹೈಫೈ ಪಾರ್ಟಿಯಲ್ಲಿ ಸಂಜನಾ, ರಾಗಿಣಿ ಹಲವು ಬಾರಿ ಡ್ರಗ್ಸ್ ಮಾರಾಟ ಮಾಡಿದ್ದಾರೆ ಎಂದು ಗೊತ್ತಾಗಿದೆ. ಸಂಜನಾ, ರಾಗಿಣಿ ತೆರಳುತಿದ್ದ ಪಾರ್ಟಿಗಳಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಮಾರಾಟ ಸಹಜ ಎನ್ನುವಂತಾಗಿದ್ದು, ನಿರಂತರವಾಗಿ ಪಾರ್ಟಿಗಳನ್ನು ಅಯೋಜನೆ ಮಾಡಲಾಗುತ್ತಿದ್ದ ಕಾರಣ ಅದು ದೊಡ್ಡ ಜಾಲವೇ ಆಗಿದೆ. ನಿರಂತರವಾಗಿ ಪಾರ್ಟಿ ಅಯೋಜನೆ ಮಾಡಿದ್ದಕ್ಕೆ ಸೂಕ್ತ ಸಾಕ್ಷಿಗಳು ಲಭ್ಯ ಆಗಿವೆಯಾದರೂ ಇದುವರೆಗೆ ಪಾರ್ಟಿಗಳಲ್ಲಿ ಎಷ್ಟು ಡ್ರಗ್ಸ್ ಮಾರಾಟ ಅಗಿದೆ ಎಂಬುದರ ಪತ್ತೆ ಅಗಿಲ್ಲ. ಇದನ್ನೆಲ್ಲಾ ಗಮನಿಸಿದಾಗ ನಟಿಯರು ಕಡಿಮೆ ಪ್ರಮಾಣದಲ್ಲಿ ಡ್ರಗ್ಸ್ ಸೇವನೆ ಮಾಡಿರಬಹುದು ಅದ್ರೆ ಬೃಹತ್ ಪ್ರಮಾಣದ ಮಾರಾಟ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.

ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು FSL ಪರೀಕ್ಷೆಯಲ್ಲಿ ದೃಡಪಟ್ಟಿದೆ. ಡ್ರಗ್​ ಜಾಲದಲ್ಲಿ ಸಿಲುಕಿ ಸದ್ದು ಮಾಡಿದ್ದ ಚಂದನವನದ ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವಿಸಿರುವುದು ಖಚಿತ ಎಂದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ತಿಳಿದುಬಂದಿದೆ. ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಹೈದರಾಬಾದ್​ನ FSLಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಈಗ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದರಿ ರಿಪೋರ್ಟ್​ನಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿದ್ದರು ಎನ್ನುವುದು ದೃಢಪಟ್ಟಿದ್ದು, ಜತೆಗೆ ವಿರೇನ್​ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಕೂಡ ಡ್ರಗ್ಸ್​ ಸೇವಿಸಿರುವುದು ಖಚಿತವಾಗಿದೆ. ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಪರೀಕ್ಷೆಗೆ ಕಳುಹಿಸಲಾಗಿತ್ತು.ಬರೋಬ್ಬರಿ 10 ತಿಂಗಳ ಬಳಿಕ ಎಫ್ಎಸ್ಎಲ್ ರಿಪೋರ್ಟ್ ಬಂದಿದ್ದು, ಸದ್ಯ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಮಣಿಯರಾದ ರಾಗಿಣಿ,ಸಂಜನಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೀಗಾಗಿ ಮುಂದೆ ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎನ್ನುವುದು ಕುತೂಹಲ ಮೂಡಿಸಿದೆ.

(CCB Police Sandeep Patil on Sandalwood Drug Scandal Sanjana Galrani Ragini Dwivedi CFSL report)

ಇದನ್ನೂ ಓದಿ: ರಾಗಿಣಿ ದ್ವಿವೇದಿ , ಸಂಜನಾ ಗಲ್ರಾನಿ ಡ್ರಗ್ ಸೇವಿಸಿದ್ದು ನಿಜ: FSL ವರದಿಯಲ್ಲಿ ದೃಢ 

ಸುದ್ದಿ ವಿಶ್ಲೇಷಣೆ | ಡ್ರಗ್ಸ್​ ಜಾಲ ನಿರ್ಮೂಲನೆಯಾಗಿಲ್ಲ, ಇದು ಕಳಂಕವಲ್ಲದೇ ಇನ್ನೇನು?

ತಾಜಾ ಸುದ್ದಿ

Related Stories

Click on your DTH Provider to Add TV9 Kannada