ಸಂಚಾರಿ ವಿಜಯ್ ಅವರನ್ನು ಜೀವನಪೂರ್ತಿ ನಾನು ಮರೆಯಲ್ಲ: ನಟಿ ಎಸ್ತರ್ ನರೊನಾ
Sanchari Vijay: ಇತ್ತೀಚೆಗೆ ‘ಲಂಕೆ’ ಚಿತ್ರದ ಸುದ್ದಿಗೋಷ್ಠಿ ನಡೆಯಿತು. ಸಂಚಾರಿ ವಿಜಯ್ ಅವರು ನಮ್ಮ ಜೊತೆ ಇಲ್ಲ ಎಂಬ ಕೊರಗು ಎಲ್ಲರನ್ನೂ ಕಾಡುತ್ತಿದೆ. ಆ ಬಗ್ಗೆ ನಟಿ ಎಸ್ತರ್ ನರೊನಾ ಮಾತನಾಡಿದ್ದಾರೆ.
ನಟ ಸಂಚಾರಿ ವಿಜಯ್ ಅವರು ನಿಧನರಾಗುವುದಕ್ಕೂ ಮುನ್ನ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಆ ಪೈಕಿ ಬಹುತಾರಾಗಣದ ‘ಲಂಕೆ’ ಕೂಡ ಪ್ರಮುಖವಾದದ್ದು. ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಜೊತೆ ಎಸ್ತರ್ ನರೊನಾ, ‘ಲೂಸ್ ಮಾದ’ ಯೋಗಿ, ಕಾವ್ಯಾ ಶೆಟ್ಟಿ, ಕೃಷಿ ತಾಪಂಡ ಮುಂತಾದವರು ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಸುದ್ದಿಗೋಷ್ಠಿ ನಡೆಯಿತು. ಸಂಚಾರಿ ವಿಜಯ್ ಅವರು ನಮ್ಮ ಜೊತೆ ಇಲ್ಲ ಎಂಬ ಕೊರಗು ಎಲ್ಲರನ್ನೂ ಕಾಡುತ್ತಿದೆ. ಆ ಬಗ್ಗೆ ನಟಿ ಎಸ್ತರ್ ನರೊನಾ ಮಾತನಾಡಿದ್ದಾರೆ.
ಶೂಟಿಂಗ್ ವೇಳೆ ಸಂಚಾರಿ ವಿಜಯ್ ಜೊತೆಗಿನ ತಮ್ಮ ಒಡನಾಟವನ್ನು ಎಸ್ತರ್ ನರೊನಾ ಅವರು ಮೆಲುಕು ಹಾಕಿದ್ದಾರೆ. ‘ವಿಜಯ್ ಅವರನ್ನು ನಾನು ಜೀವನಪೂರ್ತಿ ನೆನಪಿಟ್ಟುಕೊಳ್ಳುತ್ತೇನೆ. ಅವರಿಂದ ಅನೇಕ ವಿಚಾರಗಳನ್ನು ಕಲಿತಿದ್ದೇನೆ. ಅವರ ಜೊತೆ ಒಂದು ಸಿನಿಮಾ ಮಾಡಿದ್ದೇನೆ ಎಂಬುದು ನಾನು ಜೀವನವಿಡೀ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ವಿಷಯ. ಒಂದು ಒಳ್ಳೆಯ ಚಿತ್ರದಲ್ಲಿ ನಟಿಸಿದ ತೃಪ್ತಿ ನನಗಿದೆ’ ಎಂದು ಎಸ್ತರ್ ನರೊನಾ ಹೇಳಿದ್ದಾರೆ.
ಇದನ್ನೂ ಓದಿ:
ಸಂಚಾರಿ ವಿಜಯ್ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ
ಸಂಚಾರಿ ವಿಜಯ್ಗೆ ಅಪಘಾತವಾದ ದಿನ ನಿಜಕ್ಕೂ ನಡೆದಿದ್ದೇನು? ಪೊಲೀಸರಿಗೆ ಹೇಳಿಕೆ ನೀಡಿದ ಸ್ನೇಹಿತ ನವೀನ್