ಕೊಡಗು ಸ್ಪೆಷಲ್ ಚಿಕನ್ ಕೀಮಾ ಬಾಲ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
ಚಿಕನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಚಿಕನ್ ಲಿವರ್ ಫ್ರೈ, ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಹೀಗಾಗಿ ಚಿಕನ್ ಕೀಮಾ ಬಾಲ್ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.
ನಾನ್ ವೆಜ್ ಪ್ರಿಯರಿಗೆ ದಿನಕ್ಕೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆಯನ್ನು ಸವಿಯುವ ಬಯಕೆ ಇರುತ್ತದೆ. ಅದರಲ್ಲೂ ಚಿಕನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಚಿಕನ್ ಲಿವರ್ ಫ್ರೈ, ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಹೀಗಾಗಿ ಚಿಕನ್ ಕೀಮಾ ಬಾಲ್ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.
ಚಿಕನ್ ಕೀಮಾ ಬಾಲ್ ಮಾಡಲು ಬೇಕಾಗುವ ಸಾಮಾಗ್ರಿಗಳು ಕೀಮಾ, ಉಪ್ಪು, ಮೆಣಸು, ನಿಂಬೆ ಹಣ್ಣು, ಅರಿಶಿಣ ಪುಡಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಮೊಟ್ಟೆ, ಚೀಸ್, ಗಾಂಧರಿ ಮೆಣಸು, ಆಲೂಗಡ್ಡೆ, ಬ್ರೆಡ್ ಕ್ರಂಬ್ಸ್.
ಚಿಕನ್ ಕೀಮಾ ಬಾಲ್ ಮಾಡುವ ವಿಧಾನ
ಚಿಕನ್ ಕೀಮಾಗೆ ಉಪ್ಪು, ಮೆಣಸು, ನಿಂಬೆ ಹಣ್ಣು, ಅರಿಶಿಣ ಪುಡಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಮೊಟ್ಟೆಯ ಹಳದಿ ಭಾಗ, ಚೀಸ್, ಗಾಂಧರಿ ಮೆಣಸು, ಆಲೂಗಡ್ಡೆ, ಹಾಕಿ ಕಲಸಿ. ನಂತರ ಚಿಕ್ಕ ಉಂಡೆ ಮಾಡಿ ಮೊಟ್ಟೆಯಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್ ಹಾಕಿ, ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ರುಚಿಕರವಾದ ಕೊಡಗು ಸ್ಪೆಷಲ್ ಚಿಕನ್ ಕೀಮಾ ಬಾಲ್ ಸವಿಯಲು ಸಿದ್ಧ.
ಇದನ್ನೂ ಓದಿ:
ಗೋಡಂಬಿ ಚಿಕನ್ ಫ್ರೈ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
Chicken ghee roast: ಚಿಕನ್ ಘೀ ರೋಸ್ಟ್; ನಾನ್ ವೆಜ್ ಪ್ರಿಯರು ಒಮ್ಮೆ ಮಾಡಿ ಸವಿಯಿರಿ