Sandalwood Drug Scandal: ರಾಗಿಣಿ ದ್ವಿವೇದಿ , ಸಂಜನಾ ಗಲ್ರಾನಿ ಡ್ರಗ್ ಸೇವಿಸಿದ್ದು ನಿಜ: FSL ವರದಿಯಲ್ಲಿ ದೃಢ

Ragini Dwivedi Sanjjanaa Galrani: ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವಿಸಿರುವುದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದೆ.

Sandalwood Drug Scandal: ರಾಗಿಣಿ ದ್ವಿವೇದಿ , ಸಂಜನಾ ಗಲ್ರಾನಿ ಡ್ರಗ್ ಸೇವಿಸಿದ್ದು ನಿಜ: FSL ವರದಿಯಲ್ಲಿ ದೃಢ
ರಾಗಿಣಿ, ಸಂಜನಾ
Follow us
TV9 Web
| Updated By: shivaprasad.hs

Updated on:Aug 24, 2021 | 4:44 PM

ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವಿಸಿರುವುದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು FSL ಪರೀಕ್ಷೆಯಲ್ಲಿ ದೃಡಪಟ್ಟಿದೆ. ಡ್ರಗ್​ ಜಾಲದಲ್ಲಿ ಸಿಲುಕಿ ಸದ್ದು ಮಾಡಿದ್ದ ಚಂದನವನದ ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವಿಸಿರುವುದು ಖಚಿತ ಎಂದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ತಿಳಿದುಬಂದಿದೆ. ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಹೈದರಾಬಾದ್​ನ FSLಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಈಗ ಸಿಸಿಬಿ ಪೊಲೀಸರ ಕೈಸೇರಿದೆ. ಸದರಿ ರಿಪೋರ್ಟ್​ನಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿದ್ದರು ಎನ್ನುವುದು ದೃಢಪಟ್ಟಿದ್ದು, ಜತೆಗೆ ವಿರೇನ್​ ಖನ್ನಾ ಕೂಡ ಡ್ರಗ್ಸ್​ ಸೇವಿಸಿರುವುದು ಖಚಿತವಾಗಿದೆ.

ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಪರೀಕ್ಷೆಗೆ ಕಳುಹಿಸಲಾಗಿತ್ತು.ಬರೋಬ್ಬರಿ 10 ತಿಂಗಳ ಬಳಿಕ ಎಫ್ಎಸ್ಎಲ್ ರಿಪೋರ್ಟ್ ಬಂದಿದ್ದು, ಸದ್ಯ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಮಣಿಯರಾದ ರಾಗಿಣಿ,ಸಂಜನಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೀಗಾಗಿ ಮುಂದೆ ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎನ್ನುವುದು ಕುತೂಹಲ ಮೂಡಿಸಿದೆ.

ಡ್ರಗ್ಸ್‌ ಕೇಸ್‌ನಲ್ಲಿ ಬಂಧಿತರಾಗಿದ್ದ ಸಂಜನಾ, ರಾಗಿಣಿ ಒಮ್ಮೆ ಹೇರ್‌ ಸ್ಯಾಂಪಲ್ ನೀಡಲು ನಿರಾಕರಿಸುತ್ತಿದ್ದರು. ಹಾಗಾಗಿ, ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಸಿಸಿಬಿ ಅಧಿಕಾರಿಗಳ ಮನವಿಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಿದ ಕಾರಣ ತಲೆಗೂದಲ ಸ್ಯಾಂಪಲ್​ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು.

ಈ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ ಮತ್ತು ಮೂತ್ರವನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅದರಲ್ಲಿ ಡ್ರಗ್ಸ್ ಸೇವಿಸಿ ಒಂದೆರಡು ದಿನದೊಳಗೆ ಪರೀಕ್ಷೆ ಮಾಡಿದರೆ ಮಾತ್ರ ಪಾಸಿಟಿವ್ ಬರುತ್ತದೆ. ಆದ್ದರಿಂದ ಆರೋಪಿಗಳ ಕೂದಲನ್ನು ಕಳೆದ ವರ್ಷ ಹೈದರಾಬಾದ್ CFSLಗೆ ಟೆಸ್ಟ್​ಗಾಗಿ ಕಳುಹಿಸಲಾಗಿತ್ತು. ಈಗ ಅದರಲ್ಲಿ ಪಾಸಿಟಿವ್ ಬಂದಿದೆ ಎಂದು ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

2020ರ ಸೆಪ್ಟೆಂಬರ್ 14ನೇ ತಾರೀಖಿನಂದು ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದರು. 140 ದಿನಗಳ ಕಾಲ ಕಸ್ಟಡಿಯಲ್ಲಿದ್ದ ಅವರಿಗೆ, 2021ರ  ಜನವರಿ 21ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಜನವರಿ 25ರಂದು ಅವರು ಜೈಲಿಂದ ಬಿಡುಗಡೆಯಾಗಿದ್ದರು.

2020ರ ಸೆಪ್ಟೆಂಬರ್ 16ರಂದು ಜೈಲು ಸೇರಿದ್ದ ಸಂಜನಾ ಗಲ್ರಾನಿ ಡಿಸೆಂಬರ್ 11 2020ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. 56 ದಿನಗಳ ಕಾಲ ಜೈಲಿನಲ್ಲಿ ಇದ್ದ ಸಂಜನಾ ಗಲ್ರಾನಿ, ಗಂಭೀರ ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Published On - 10:20 am, Tue, 24 August 21