AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿಣಿ ಹಾಗೂ ಸಂಜನಾ ಡ್ರಗ್ ಸೇವನೆ ದೃಢ; ಮತ್ತೆ ಜೈಲು ಸೇರಲಿದ್ದಾರಾ ನಟಿಯರು? ಮುಂದಿನ ಆಯ್ಕೆ ಏನು?

Sandalwood Drug Scandal: ಸ್ಯಾಂಡಲ್​ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಡ್ರಗ್ ಸೇವಿಸಿರುವುದು ಎಫ್​ಎಸ್​ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮುಂದಿನ ನಡೆ ಹಾಗೂ ಪ್ರಕರಣದ ವಿಚಾರಣೆಯ ಮುಂದಿನ ಹಂತಗಳೇನು ಎಂಬ ಕುರಿತ ಮಾಹಿತಿ ಇಲ್ಲಿದೆ.

ರಾಗಿಣಿ ಹಾಗೂ ಸಂಜನಾ ಡ್ರಗ್ ಸೇವನೆ ದೃಢ; ಮತ್ತೆ ಜೈಲು ಸೇರಲಿದ್ದಾರಾ ನಟಿಯರು? ಮುಂದಿನ ಆಯ್ಕೆ ಏನು?
ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ
TV9 Web
| Edited By: |

Updated on:Aug 24, 2021 | 12:41 PM

Share

ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ತನಿಖಾಧಿಕಾರಿ ಇನ್ಸ್​ಪೆಕ್ಟರ್​ ಪುನೀತ್​ ಬೆಂಗಳೂರಿನ 33ನೇ CCH​ ಕೋರ್ಟ್​ಗೆ FSL​ ವರದಿಯನ್ನು ಸಲ್ಲಿಸಿದ್ದಾರೆ. ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಡ್ರಗ್ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಪರೀಕ್ಷೆಯ ಸಂಪೂರ್ಣ ಮಾಹಿತಿಯನ್ನು ವರದಿ ಒಳಗೊಂಡಿದೆ.  ನಿನ್ನೆ FSL ವರದಿ ಸಹಿತ ಸೆಕೆಂಡರಿ ಚಾರ್ಜ್​​ಶೀಟ್​ ಸಲ್ಲಿಸಲಾಗಿದ್ದು, ಈ ಹಿಂದೆ ಸಿಸಿಬಿ 2500 ಪುಟಗಳ ಪ್ರಿಲಿಮಿನರಿ ಚಾರ್ಜ್​​ಶೀಟ್ ಸಲ್ಲಿಸಿತ್ತು. ಈಗ ಹೆಚ್ಚುವರಿ ತನಿಖಾ ವರದಿ ಸಲ್ಲಿಸಿರುವ ಸಿಸಿಬಿ ತಂಡ, FSL ವರದಿ ಸಹಿತ 10 ಪುಟಗಳ ಹೆಚ್ಚುವರಿ ಚಾರ್ಜ್​​ಶೀಟ್ ಸಲ್ಲಿಸಿದೆ. ವಿಚಾರಣೆ ಬಳಿಕ ಅಂತಿಮ ತನಿಖಾ ವರದಿ ಸಲ್ಲಿಸಲಾಗುವುದು ಎಂದು ಸಿಸಿಬಿ ತಿಳಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯ ಹಂತಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನ್ಯಾಯಾಲಯದಲ್ಲಿ ಮುಂದಿನ ಪ್ರಕ್ರಿಯೆ ನಡೆಯಲಿದ್ದು, ನ್ಯಾಯಾಲಯ ಆರೋಪ ಪಟ್ಟಿ ಅಂಗೀಕಾರ ಮಾಡಲಿದೆ. ಬಳಿಕ ಆರೋಪಿಗಳಿಗೆ ಸಮನ್ಸ್​ ನೀಡಿ, ನ್ಯಾಯಾಲಯಕ್ಕೆ​ ಕರೆಸಿ ವಿಚಾರಣೆ ಮಾಡಲಾಗುತ್ತದೆ. ನಂತರ, ಎಲ್ಲಾ ಆರೋಪಿಗಳ ಮೇಲೆ ಆರೋಪ ನಿಗದಿ ಪಡಿಸಲಾಗುತ್ತದೆ. ನಂತರ ಕೋರ್ಟ್​ ಸಾಕ್ಷಿಗಳಿಗೆ ಸಮನ್ಸ್​ ಜಾರಿಗೊಳಿಸಲಿದ್ದು, ಸಾಕ್ಷಿಗಳ ವಿಚಾರಣೆ ನಡೆಯಲಿದೆ. ಈ ಪ್ರಕ್ರಿಯೆ ಮುಗಿದ ಬಳಿಕ, ಕೋರ್ಟ್​ ಪ್ರಶ್ನೆಗಳಿಗೆ ಆರೋಪಿಗಳ ಉತ್ತರವನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ನಂತರ ಸಿಸಿಬಿ, ಆರೋಪಿಗಳ ವಾದ ಮಂಡನೆ ಆಲಿಸಿ ತೀರ್ಪು ನೀಡಲಿದೆ. ನಟಿ ರಾಗಿಣಿ ಹಾಗೂ ಸಂಜನಾಗೆ ಈಗಾಗಲೇ ಜಾಮೀನು ಸಿಕ್ಕಿರುವ ಕಾರಣ, ಕೋರ್ಟ್​​​ನಿಂದ ತೀರ್ಪು ಬರುವವರೆಗೂ ಬಂಧನ ಭೀತಿ ಇಲ್ಲ.

ನಟಿ ರಾಗಿಣಿ, ಸಂಜನಾ ಮುಂದಿರುವ ಆಯ್ಕೆ ಏನು?

  • ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಕೋರಬಹುದು
  • ವಿಶೇಷ ಕೋರ್ಟ್​ಗೆ​ ಈ ಬಗ್ಗೆ ಅರ್ಜಿ ಸಹ ಸಲ್ಲಿಸಬಹುದು
  • ಸಿಸಿಬಿ ಚಾರ್ಜ್​​​ಶೀಟ್​ ಪ್ರಶ್ನಿಸಿ ಹೈಕೋರ್ಟ್​ಗೂ ಚಾರ್ಜ್​​​ಶೀಟ್​ ರದ್ದು ಕೋರಿ ಅರ್ಜಿ ಸಲ್ಲಿಸಬಹುದು
  • ಚಾರ್ಜ್​​​ಶೀಟ್​​​ ರದ್ದಾದರೂ, ಪ್ರಕರಣದಿಂದ ಕೈ ಬಿಟ್ಟರೆ ನಟಿ ಸಂಜನಾ, ರಾಗಿಣಿ ಈ ಪ್ರಕರಣದಿಂದ ಸೇಫ್ ಆಗಬಹುದು
  • ಆದರೆ ನ್ಯಾಯಾಲಯ ನೀಡುವ ತೀರ್ಪಿಗೆ ಬದ್ಧರಾಗಿರಬೇಕು

FSL ವರದಿಯಲ್ಲಿ ದೃಡಪಟ್ಟಿರುವುದೇನು?

ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು FSL ಪರೀಕ್ಷೆಯಲ್ಲಿ ದೃಡಪಟ್ಟಿದೆ. ಡ್ರಗ್​ ಜಾಲದಲ್ಲಿ ಸಿಲುಕಿ ಸದ್ದು ಮಾಡಿದ್ದ ಚಂದನವನದ ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವಿಸಿರುವುದು ಖಚಿತ ಎಂದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ತಿಳಿದುಬಂದಿದೆ. ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಹೈದರಾಬಾದ್​ನ FSLಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಈಗ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದರಿ ರಿಪೋರ್ಟ್​ನಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿದ್ದರು ಎನ್ನುವುದು ದೃಢಪಟ್ಟಿದ್ದು, ಜತೆಗೆ ವಿರೇನ್​ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಕೂಡ ಡ್ರಗ್ಸ್​ ಸೇವಿಸಿರುವುದು ಖಚಿತವಾಗಿದೆ. ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಪರೀಕ್ಷೆಗೆ ಕಳುಹಿಸಲಾಗಿತ್ತು.ಬರೋಬ್ಬರಿ 10 ತಿಂಗಳ ಬಳಿಕ ಎಫ್ಎಸ್ಎಲ್ ರಿಪೋರ್ಟ್ ಬಂದಿದ್ದು, ಸದ್ಯ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಮಣಿಯರಾದ ರಾಗಿಣಿ,ಸಂಜನಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೀಗಾಗಿ ಮುಂದೆ ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎನ್ನುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:

Sandalwood Drug Scandal: ತಲೆಗೂದಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರಿಂದ ಡ್ರಗ್​ ಸೇವನೆ ಪತ್ತೆ ಸುಲಭವಾಯ್ತು: ಸಂದೀಪ್ ಪಾಟೀಲ್

Sandalwood Drug Scandal: ರಾಗಿಣಿ ದ್ವಿವೇದಿ , ಸಂಜನಾ ಗಲ್ರಾನಿ ಡ್ರಗ್ ಸೇವಿಸಿದ್ದು ನಿಜ: FSL ವರದಿಯಲ್ಲಿ ದೃಢ

(Ragini Dwivedi and Sanjana Galrani drug consume confirmed and next investigation information is here)

Published On - 11:43 am, Tue, 24 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್