Sandalwood Drug Case: ಡ್ರಗ್ ಸೇವನೆ ದೃಢಪಟ್ಟ ಬೆನ್ನಲ್ಲೇ ವಕೀಲರ ಸಲಹೆ ಪಡೆದ ನಟಿ ರಾಗಿಣಿ ದ್ವಿವೇದಿ!
ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಎಫ್ಎಸ್ಎಲ್ ವರದಿ ಬಂದ ಬೆನ್ನಲ್ಲೇ ವಕೀಲರನ್ನು ಭೇಟಿಯಾಗಿದ್ದಾರೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ.
ಚಂದನವನವನ್ನೇ ಬೆಚ್ಚಿಬೀಳಿಸಿದ್ದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಎಸ್ಎಲ್ ವರದಿ ಬಂದಿದ್ದು, ಅದರಲ್ಲಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ. ಈ ಹಿಂದೆ ಈರ್ವರು ನಟಿಯರೂ ಕೂಡಾ ತಾವು ಯಾವುದೇ ತಪ್ಪು ಮಾಡಿಲ್ಲ ಎಂದೇ ಹೇಳಿಕೊಂಡು ಬಂದಿದ್ದರು. ಈಗ ಆರೋಪದ ಕುಣಿಕೆ ಬಿಗಿಯಾಗುವ ಲಕ್ಷಣಗಳಿವೆ. ಆದ್ದರಿಂದಲೇ ಈರ್ವರೂ ಕೂಡ ಮಾಧ್ಯಮದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ನಟಿ ಸಂಜನಾ ತಾಯಿ ರೇಷ್ಮಾ ಗಲ್ರಾನಿ, ಸಂಜನಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿದ್ದಾರೆ. ಈ ನಡುವೆ ನಟಿ ರಾಗಿಣಿ ದ್ವಿವೇದಿ, ಸತತವಾಗಿ ವಕೀಲರ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:
ಸಂಜನಾಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ; ಆದ್ದರಿಂದಲೇ ಅವರು ಊಟ ಕೊಡಲು ಬಂದಿಲ್ಲ: ರೇಷ್ಮಾ ಗಲ್ರಾನಿ
‘ರಣವೀರ್ ಸಿಂಗ್ ತಂದೆ ಆಗಿಬಿಟ್ರಾ?’; ದೀಪಿಕಾ ಬದಲಿಗೆ ಬೇರೆ ನಟಿಗೆ ಪ್ರಶ್ನೆ ಕೇಳಿದ ಫ್ಯಾನ್ಸ್
(After FSL report confirms consuming drugs Ragini contacts her lawyer)