ದೆಹಲಿ ಸರ್ಕಾರದ ‘ದೇಶ್ ಕೆ ಮೆಂಟರ್’ ವಿಶೇಷ ಕಾರ್ಯಕ್ರಮಕ್ಕೆ  ಸೋನು ಸೂದ್ ಬ್ರಾಂಡ್ ಅಂಬಾಸಿಡರ್

Sonu Sood: ಈ ಬಿಕ್ಕಟ್ಟಿನ ಮಧ್ಯೆ ಮಾರ್ಗದರ್ಶನ ಕಾರ್ಯಕ್ರಮವಾದ 'ದೇಶ್ ಕೆ ಮೆಂಟರ್' ಉಪಕ್ರಮವನ್ನು ಘೋಷಿಸಿದ ಕೇಜ್ರಿವಾಲ್, ಇದು ಭಾರತದ ಅತಿದೊಡ್ಡ ಮಾರ್ಗದರ್ಶನ ಕಾರ್ಯಕ್ರಮವಾಗಿದ್ದು, ಸುಮಾರು 3 ಲಕ್ಷ ಯುವ ವೃತ್ತಿಪರರು 10 ಲಕ್ಷ ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು

ದೆಹಲಿ ಸರ್ಕಾರದ 'ದೇಶ್ ಕೆ ಮೆಂಟರ್' ವಿಶೇಷ ಕಾರ್ಯಕ್ರಮಕ್ಕೆ  ಸೋನು ಸೂದ್ ಬ್ರಾಂಡ್ ಅಂಬಾಸಿಡರ್
ಸೋನು ಸೂದ್- ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 27, 2021 | 11:59 AM

ದೆಹಲಿ: ಬಾಲಿವುಡ್ ನಟ ಸೋನು ಸೂದ್ ದೆಹಲಿ ಸರ್ಕಾರದ ಮಹತ್ವಾಕಾಂಕ್ಷೆಯ ‘ದೇಶ್ ಕೆ ಮೆಂಟರ್’ ಉಪಕ್ರಮದ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಘೋಷಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಉಪಕ್ರಮ ಘೋಷಿಸಿದ ಒಂದು ದಿನದ ನಂತರ ಸೋನು ಸೂದ್  ಕೇಜ್ರಿವಾಲ್​​ನ್ನು ಭೇಟಿಯಾದರು. ಅವರ ಭೇಟಿಯ ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕೇಜ್ರಿವಾಲ್ ಕೊವಿಡ್ ಸಾಂಕ್ರಾಮಿಕ ರೋಗದ ವೇಳೆ ವಲಸಿಗರ ಸ್ಥಳಾಂತರ ಬಿಕ್ಕಟ್ಟಿನ ಸಂದರ್ಭದಲ್ಲಿ ಸೂದ್ ಕೈಗೊಂಡ ವಿವಿಧ ಲೋಕೋಪಕಾರಿ ಕಾರ್ಯಗಳನ್ನು ಪ್ರಶಂಸಿಸಿದರು.

ಈ ಬಿಕ್ಕಟ್ಟಿನ ಮಧ್ಯೆ ಮಾರ್ಗದರ್ಶನ ಕಾರ್ಯಕ್ರಮವಾದ ‘ದೇಶ್ ಕೆ ಮೆಂಟರ್’ ಉಪಕ್ರಮವನ್ನು ಘೋಷಿಸಿದ ಕೇಜ್ರಿವಾಲ್, ಇದು ಭಾರತದ ಅತಿದೊಡ್ಡ ಮಾರ್ಗದರ್ಶನ ಕಾರ್ಯಕ್ರಮವಾಗಿದ್ದು, ಸುಮಾರು 3 ಲಕ್ಷ ಯುವ ವೃತ್ತಿಪರರು 10 ಲಕ್ಷ ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಲು ಸೋನು ಸೂದ್ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.

‘ದೇಶ್ ಕೆ ಮೆಂಟರ್’ ಉಪಕ್ರಮದ ಅಡಿಯಲ್ಲಿ ತಮ್ಮ ವೃತ್ತಿಯಲ್ಲಿ ಅನುಭವ ಹೊಂದಿರುವ ಜನರನ್ನು ದೆಹಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾದ ಮಕ್ಕಳ ಮಾರ್ಗದರ್ಶಕರ ಗುಂಪಿಗೆ ಪ್ರೋತ್ಸಾಹಿಸಲಾಗುವುದು ಎಂದು ಸಿಎಂ ಅರವಿಂದ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು, ಈ ಉಪಕ್ರಮವನ್ನು ಸೆಪ್ಟೆಂಬರ್ ಮಧ್ಯದಲ್ಲಿ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸೋನು ಸೂದ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜನ ಕಲ್ಯಾಣ ಉಪಕ್ರಮಗಳಿಗಾಗಿ ಪ್ರಶಂಸಿಸಿದರು ಮತ್ತು ರಾಷ್ಟ್ರ ರಾಜಧಾನಿ ಶಿಕ್ಷಣಕ್ಕೆ ಆದರ್ಶ ಮಾದರಿ ಎಂದು ಹೇಳಿದರು. ಸಾಮಾಜಿಕ ಸೂಚಕಗಳಲ್ಲಿ ಪ್ರಗತಿಯು ಶಿಕ್ಷಣದಿಂದ ಮಾತ್ರ ಬರುತ್ತದೆ ಎಂದು ಹೇಳಿದ ನಟ ಮಕ್ಕಳ ಉಜ್ವಲ ಭವಿಷ್ಯದ ಕಡೆಗೆ ಮಾರ್ಗದರ್ಶನ ಮಾಡುವ ‘ಮಾರ್ಗದರ್ಶಕರ’ ಅಗತ್ಯತೆ ಇದೆ ಎಂದು ಹೇಳಿದರು. ವಲಸೆಗಾರರ ಬಿಕ್ಕಟ್ಟಿನ ಸಮಯದಲ್ಲಿ ಕೆಲಸ ಮಾಡುವಾಗ ಸೂದ್ ಎದುರಿಸಿದ ಸಮಸ್ಯೆ ಇದಾಗಿದ್ದು, ಪ್ರಸ್ತುತ ಸುಮಾರು 20,000 ವಲಸಿಗ ಮಕ್ಕಳಿಗೆ ಚಾರಿಟಿ ಸಂಸ್ಥೆಗಳ ಅಡಿಯಲ್ಲಿ ಕಲಿಸಲಾಗುತ್ತಿದೆ. ಆದರೆ ಶಾಲಾ ಮಕ್ಕಳಿಗಾಗಿ ದೆಹಲಿ ಸರ್ಕಾರದ ಉಪಕ್ರಮದ ಅಡಿಯಲ್ಲಿ ಇದನ್ನು ಔಪಚಾರಿಕಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಆದಾಗ್ಯೂ, ನಟ ಮತ್ತು ರಾಜಕಾರಣಿ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ತಮ್ಮ ಸಭೆಯಲ್ಲಿ “ರಾಜಕೀಯ ಏನೂ ಇಲ್ಲ ” ಎಂದು ಹೇಳಿದ್ದಾರೆ. ಮುಂದಿನ ವರ್ಷ ಪಂಜಾಬ್ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸೋನು ಸೂದ್, ಇದುವರೆಗೂ ರಾಜಕೀಯ ವಿಷಯಗಳ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ.

ಎಎಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಇಂದು ಬೆಳಿಗ್ಗೆ ಹಂಚಿಕೊಂಡ ಫೋಟೋಗಳಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡಾ ಸೋನು ಸೂದ್ ಮತ್ತು ಕೇಜ್ರಿವಾಲ್ ಜತೆಗಿದ್ದಾರೆ. ಎಎಪಿ ಶಾಸಕರಾದ ರಾಘವ್ ಚಡ್ಡಾ ಮತ್ತು ಪ್ಲಾಕ್ಷಾ ವಿಶ್ವವಿದ್ಯಾಲಯದ ಸಂಸ್ಥಾಪಕ ಕರಣ್ ಗಿಲ್ಹೋತ್ರಾ ಕೂಡಾ ಇದ್ದರು.

ಇದನ್ನೂ ಓದಿ:  Sonu Sood: ದೂಕುಡು ಸಿನಿಮಾದಲ್ಲಿ ಸೋನು ಸೂದ್​ಗೆ ಹೊಡೆದದ್ದಕ್ಕೆ ಸಿಟ್ಟಿನಿಂದ ಮನೆಯ ಟಿವಿ ಕುಟ್ಟಿ ಪುಡಿ ಮಾಡಿದ ಪೋರ

ಇದನ್ನೂ ಓದಿ: ದೆಹಲಿಯಲ್ಲಿ ಹೊಂಜು ಗೋಪುರ ಉದ್ಘಾಟಿಸಿದ ಅರವಿಂದ ಕೇಜ್ರಿವಾಲ್

(Bollywood actor Sonu Sood to be brand ambassador for Delhi government’s Desh Ke Mentor initiative says Arvind Kejriwal)

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ