ದೆಹಲಿಯಲ್ಲಿ ಹೊಂಜು ಗೋಪುರ ಉದ್ಘಾಟಿಸಿದ ಅರವಿಂದ ಕೇಜ್ರಿವಾಲ್
Smog Tower: ಕನ್ನಾಟ್ ಪ್ಲೇಸ್‌ನಲ್ಲಿರುವ ಶಿವಾಜಿ ಸ್ಟೇಡಿಯಂ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿರುವ ಈ ಗೋಪುರವನ್ನು 24.2 ಮೀಟರ್ ಎತ್ತರದಲ್ಲಿದೆ. ಎರಡು ವರ್ಷಗಳ ಕಾರ್ಯಾಚರಣೆಯ ವೆಚ್ಚ ಸೇರಿದಂತೆ ಒಟ್ಟು ಯೋಜನಾ ವೆಚ್ಚ ಸುಮಾರು ರೂ. 20 ಕೋಟಿ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ (ಡಿಪಿಸಿಸಿ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಹೊಂಜು ಗೋಪುರವನ್ನು (smog tower) ಉದ್ಘಾಟಿಸಿದರು. ಇದು ಸುಮಾರು 1 ಕಿಮೀ ವ್ಯಾಪ್ತಿಯಲ್ಲಿ ಪ್ರತಿ ಸೆಕೆಂಡ್ ಗಳಿಗೆ 1,000ಕ್ಯುಬಿಕ್ ಮೀಟರ್ ಗಾಳಿಯನ್ನು ಶುದ್ಧೀಕರಿಸುತ್ತದೆ. ದೇಶದಲ್ಲಿನ ಮೊದಲ ಹೊಂಜು ಗೋಪುರ ಇದಾಗಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಸಣ್ಣ ಪ್ರಮಾಣದ ಯೋಜನೆಯಂತೆ ಟವರ್ ಅನ್ನು ಸ್ಥಾಪಿಸಲಾಗಿದೆ ಮತ್ತು ಆರಂಭಿಕ ಪ್ರವೃತ್ತಿಗಳು ಒಂದು ತಿಂಗಳೊಳಗೆ ಲಭ್ಯವಿರುತ್ತವೆ ಎಂದು ಕೇಜ್ರಿವಾಲ್ ಹೇಳಿದರು. ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಹೊಂಜು ಗೋಪುರಗಳನ್ನು ಸ್ಥಾಪಿಸಲಾಗುವುದು. ” ಕನ್ನಾಟ್ ಪ್ಲೇಸ್ ನಲ್ಲಿ ಸ್ಥಾಪಿಸಲಾಗಿರುವ ಹೊಸದರಲ್ಲಿ ಪ್ರಾಯೋಗಿಕ ಅಧ್ಯಯನವು ಅನುಕೂಲಕರ ಫಲಿತಾಂಶಗಳನ್ನು ನೀಡಿದರೆ ನಗರದ ಇತರ ಭಾಗಗಳಲ್ಲೂ ಹೊಂಜು ಗೋಪುರಗಳನ್ನು ಸ್ಥಾಪಿಸಬಹುದು” ಎಂದು ಉದ್ಘಾಟನೆಯ ಸಂದರ್ಭದಲ್ಲಿ ಕೇಜ್ರಿವಾಲ್ ಹೇಳಿದರು.
Delhi में हवा को साफ करने के काफी प्रयास हुए है।
PM 2.5 Level- ?2014: 150 ?2021: 100
PM 10 Level- ?2014: 300 ?2021: 150
आज ये Smog Tower, Pollution की लड़ाई में मील का पत्थर साबित होगा – CM @ArvindKejriwal#DelhiFightsPollution pic.twitter.com/D0Aen0RzdC
— AAP (@AamAadmiParty) August 23, 2021
ಕನ್ನಾಟ್ ಪ್ಲೇಸ್‌ನಲ್ಲಿರುವ ಶಿವಾಜಿ ಸ್ಟೇಡಿಯಂ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿರುವ ಈ ಗೋಪುರವನ್ನು 24.2 ಮೀಟರ್ ಎತ್ತರದಲ್ಲಿದೆ. ಎರಡು ವರ್ಷಗಳ ಕಾರ್ಯಾಚರಣೆಯ ವೆಚ್ಚ ಸೇರಿದಂತೆ ಒಟ್ಟು ಯೋಜನಾ ವೆಚ್ಚ ಸುಮಾರು ರೂ. 20 ಕೋಟಿ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ (ಡಿಪಿಸಿಸಿ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಪಿಸಿಸಿ, ಗೋಪುರದ ನೋಡಲ್ ಏಜೆನ್ಸಿಯಾಗಿದೆ.
India’s first Smog Tower READY! ???
CM @ArvindKejriwal has reached Connaught Place to inaugurate it!#DelhiFightsPollution pic.twitter.com/4GgKeeWKSa
— AAP (@AamAadmiParty) August 23, 2021
ಈ ಗೋಪುರ ನಗರ ಪ್ರದೇಶಗಳಲ್ಲಿನ ವಾಯು ಮಾಲಿನ್ಯದ ಕಡಿತವನ್ನು ‘ಏರ್ ಕ್ಲೀನಿಂಗ್’ ಮೂಲಕ ಮೌಲ್ಯಮಾಪನ ಮಾಡಲು ಪ್ರಾಯೋಗಿಕ ಅಧ್ಯಯನವನ್ನು ರೂಪಿಸಿದೆ. ಎರಡು ವರ್ಷಗಳ ಅವಧಿಯ ಪ್ರಾಯೋಗಿಕ ಅಧ್ಯಯನವನ್ನು ಐಐಟಿ ದೆಹಲಿ ಮತ್ತು ಐಐಟಿ ಬಾಂಬೆ ನಡೆಸುತ್ತದೆ. ಎರಡು ಸಂಸ್ಥೆಗಳು ಯೋಜನೆಗೆ ತಾಂತ್ರಿಕ ಸಲಹೆಗಾರರಾಗಿದ್ದಾರೆ.
ಟವರ್ನ ಕೆಳಭಾಗದಲ್ಲಿ ಒಟ್ಟು 40 ಫ್ಯಾನ್ ಗಳನ್ನು ಅಳವಡಿಸಲಾಗಿದೆ. ಗೋಪುರದ ಮೇಲ್ಭಾಗದಿಂದ ಗಾಳಿಯನ್ನು ಹೀರಿಕೊಳ್ಳಲಾಗುತ್ತದೆ, ಫಿಲ್ಟರ್ ಮಾಡಿ ಮತ್ತು ಕೆಳಭಾಗದಲ್ಲಿರುವ ಫ್ಯಾನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಪ್ರಾಯೋಗಿಕ ಅಧ್ಯಯನದ ಪ್ರವೃತ್ತಿಗಳು ಒಂದು ತಿಂಗಳಲ್ಲಿ ಲಭ್ಯವಾಗಬಹುದು ಎಂದು ಕೇಜ್ರಿವಾಲ್ ಹೇಳಿದರು.
ಇದನ್ನೂ ಓದಿ: ನಾವು ಮುಂದಿನ ಚುನಾವಣೆಯನ್ನು ಜತೆಯಾಗಿ ಎದುರಿಸಲಿದ್ದೇವೆ: ಮಲ್ಲಿಕಾರ್ಜುನ ಖರ್ಗೆ
ಇದನ್ನೂ ಓದಿ: Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್ಶೀರ್
(Delhi Chief Minister Arvind Kejriwal inaugurates India’s first smog tower in Delhi)
Published On - 6:16 pm, Mon, 23 August 21