AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mirae Asset MF

Mirae Asset MF

ಭಾರತದಲ್ಲಿ ಇರುವ ಕೆಲ ಪ್ರಮುಖ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳಲ್ಲಿ ಮಿರಾಯ್ ಅಸೆಟ್ ಮ್ಯೂಚುವಲ್ ಫಂಡ್ ಕೂಡ ಒಂದು. ದಕ್ಷಿಣ ಕೊರಿಯಾ ಮೂಲದ ಮಿರಾಯ್ ಅಸೆಟ್ ಕಂಪನಿಯ ಅಂಗಸಂಸ್ಥೆ ಇದು. ಭಾರತದಲ್ಲಿ 2008ರಲ್ಲಿ ಮಿರಾಯ್ ಅಸೆಟ್ ಮ್ಯೂಚುವಲ್ ಫಂಡ್ ಕಾರ್ಯಾರಂಭಿಸಿದೆ. ಎಲ್ಲಾ ವಿಭಾಗಗಳ ಮ್ಯೂಚುವಲ್ ಫಂಡ್, ಇಟಿಎಫ್ ಯೋಜನೆಗಳನ್ನು ನಡೆಸುವ ಈ ಸಂಸ್ಥೆಯು ಹೂಡಿಕೆದಾರರ ವಿಶ್ವಾಸ ಗಳಿಸಲು ಯಶಸ್ವಿಯಾಗಿದೆ. ಈಕ್ವಿಟಿ ಫಂಡ್​ಗಳು, ಮಲ್ಟಿಕ್ಯಾಪ್ ಫಂಡ್, ಫ್ಲೆಕ್ಸಿ ಕ್ಯಾಪ್ ಫಂಡ್, ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಇತ್ಯಾದಿ ವಿಭಾಗಗಳ ಫಂಡ್​ಗಳನ್ನು ಇದು ನಿರ್ವಹಿಸುತ್ತದೆ. ಒಟ್ಟಾರೆ ಒಂದೂವರೆ ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ಹೂಡಿಕೆಗಳನ್ನು ಇದು ನಿರ್ವಹಿಸುತ್ತದೆ.

ಇನ್ನೂ ಹೆಚ್ಚು ಓದಿ

ಎಷ್ಟು ಥರದ ಇಟಿಎಫ್​ಗಳಿವೆ? ನಿಮಗೆ ಸೂಕ್ತವೆನಿಸಿವ ಫಂಡ್​ಗಳನ್ನು ಆಯ್ದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

Types of ETFs: ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್​ಗಳಲ್ಲಿ ಮೂರು ರೀತಿಯದ್ದಿರುತ್ತವೆ. ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಕಮಾಡಿಟಿ ಇಟಿಎಫ್​ಗಳ ವಿಧಗಳನ್ನು ನೋಡಬಹುದು. ಈಕ್ವಿಟಿ ಇಟಿಎಫ್​ಗಳು ಷೇರುಗಳ ಸೂಚ್ಯಂಕಗಳನ್ನು ಟ್ರ್ಯಾಕ್ ಮಾಡುತ್ತವೆ. ಫಿಕ್ಸೆಡ್ ಇನ್ಕಮ್ ಇಟಿಎಫ್​ಗಳು ಬಾಂಡ್, ಡೆಟ್ ಇತ್ಯಾದಿಯಲ್ಲಿ ಹೂಡಿಕೆ ಮಾಡುತ್ತವೆ. ಕಮಾಡಿಟಿ ಇಟಿಎಫ್​ಗಳು ಚಿನ್ನ ಇತ್ಯಾದಿ ಸರಕುಗಳನ್ನು ಟ್ರ್ಯಾಕ್ ಮಾಡುತ್ತವೆ.

ಇಟಿಎಫ್​ನಲ್ಲಿ ಹೂಡಿಕೆ ಮಾಡಿದರೆ ಏನು ಲಾಭ? ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು…

Investments in ETF: ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ನಲ್ಲಿ ಹೂಡಿಕೆ ಮಾಡಿದರೆ ಹಲವು ಅನುಕೂಲತೆಗಳಿವೆ. ಅಂತೆಯೇ ಇದು ಬಹಳಷ್ಟು ಹೂಡಿಕೆದಾರರಿಗೆ ಪ್ರಧಾನ ಆಯ್ಕೆ ಆಗಿದೆ. ಇಟಿಎಫ್​ನಲ್ಲಿ ರಿಸ್ಕ್ ಅಂಶ ಕಡಿಮೆ ಇರುತ್ತದೆ, ಎಕ್ಸ್​ಪೆನ್ಸ್ ರೇಶಿಯೋ ಕೂಡ ಕಡಿಮೆ ಇರುತ್ತದೆ. ಷೇರು ಮಾರುಕಟ್ಟೆಯ ವಹಿವಾಟು ಅವಧಿಯಲ್ಲಿ ಷೇರುಗಳ ರೀತಿಯಲ್ಲಿ ಇಟಿಎಫ್ ಅನ್ನು ರಿಯಲ್ ಟೈಮ್​ನಲ್ಲಿ ಟ್ರೇಡಿಂಗ್ ಮಾಡಬಹುದು.

Thematic ETF ಎಂದರೇನು? ಈ ಹೂಡಿಕೆ ಯಾರಿಗೆ ಹೇಳಿ ಮಾಡಿಸಿದ್ದು? ಇಲ್ಲಿದೆ ಮಾಹಿತಿ

Thematic ETF: ಥೀಮ್ಯಾಟಿಕ್ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿರುವ ಹೂಡಿಕೆ ಆಯ್ಕೆ. ಇಂಥ ಇಟಿಎಫ್​ಗಳು ನಿಫ್ಟಿ50, ನಿಫ್ಟಿ100 ಇತ್ಯಾದಿ ವಿಸ್ತೃತ ಮಾರುಕಟ್ಟೆಯ ಸೂಚ್ಯಂಕಗಳ ಬದಲು ಬಹಳ ನಿರ್ದಿಷ್ಟ ಕ್ಷೇತ್ರವನ್ನು ಟ್ರ್ಯಾಕ್ ಮಾಡುತ್ತವೆ. ಮ್ಯಾನುಫ್ಯಾಕ್ಚರಿಂಗ್, ರಿನಿವಬಲ್ ಎನರ್ಜಿ, ಎಲೆಕ್ಟ್ರಿಕ್ ವಾಹನ ಇತ್ಯಾದಿ ಯಾವುದಾದರೂ ನಿರ್ದಿಷ್ಟ ಕ್ಷೇತ್ರದ ಷೇರುಗಳ ಮೇಲೆ ಹೂಡಿಕೆ ಮಾಡುವ ಇಟಿಎಫ್ ಅನ್ನು ಥೀಮ್ಯಾಟಿಕ್ ಇಟಿಎಫ್ ಎನ್ನಬಹುದು.

ಹೂಡಿಕೆಯಲ್ಲಿ ಲಿಕ್ವಿಡಿಟಿ ಅಂಶ ಎಷ್ಟು ಮುಖ್ಯ? ಉತ್ತಮ ಲಿಕ್ವಿಡಿಟಿ ಇರುವ ಇಟಿಎಫ್​ನ ಪ್ರಯೋಜನಗಳಿವು…

Liquidity factor in ETF: ಯಾವುದೇ ಹೂಡಿಕೆಯಲ್ಲೂ ಹಣ ತೊಡಗಿಸುವ ಮುನ್ನ ಅದರಲ್ಲಿನ ಲಿಕ್ವಿಡಿಟಿ ಅಂಶ ಎಷ್ಟಿದೆ ಎಂಬುದನ್ನು ತಿಳಿದಿರುವುದು ಉತ್ತಮ. ಲಿಕ್ವಿಡಿಟಿ ಎಂದರೆ ನಿಮಗೆ ಬೇಕಾದಾಗ ಹೂಡಿಕೆ ಮಾಡುವುದು, ಮತ್ತು ಹೂಡಿಕೆ ಹಿಂಪಡೆಯುವುದು. ಇಂಥ ಸ್ವಾತಂತ್ರ್ಯವನ್ನು ನೀವು ಇಟಿಎಫ್ ಅಥವಾ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ನಲ್ಲಿ ಪಡೆಯಬಹುದು.

Exchange Traded Fund: ಇಟಿಎಫ್‌ಗಳಲ್ಲಿ ಸ್ಮಾರ್ಟ್ ಬೀಟಾ ತಂತ್ರವು ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ಮ್ಯೂಚುವಲ್‌ ಫಂಡ್‌ ಕಂಪೆನಿಗಳು ಹೂಡಿಕೆದಾರರನ್ನು ಆಕರ್ಷಿಸಲು, ತಮ್ಮ ಯೋಜನೆಗಳಲ್ಲಿ ವಿವಿಧ ಆವಿಷ್ಕಾರಗಳನ್ನು ತರುತ್ತಿರುತ್ತವೆ. ಅದೇ ರೀತಿ ಸ್ಮಾರ್ಟ್‌ ಬೀಟಾ ಇಟಿಎಫ್‌ ಎಂಬ ತಂತ್ರ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ನ ಒಂದು ಹೂಡಿಕೆ ತಂತ್ರವಾಗಿದೆ. ಇಲ್ಲಿ ಕೆಲವು ಅಂಶಗಳ ಆಧಾರದ ಮೇಲೆ ಫಂಡ್‌ ಮ್ಯಾನೇಜರ್‌ಗಳು ಷೇರುಗಳನ್ನು ಆಯ್ಕೆ ಮಾಡುತ್ತಾರೆ. ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳಲ್ಲಿ ಈ ಸ್ಮಾರ್ಟ್‌ ಬೀಟಾ ತಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ, ಹೂಡಿಕೆದಾರನಿಗೆ ಇದು ಲಾಭದಾಯಕವೇ ಎಂಬುದನ್ನು ತಿಳಿಯೋಣ.

ETF Investment: ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಫುಲ್‌ ಡಿಟೇಲ್ಸ್

ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ ಒಂದು ನಿಷ್ಕ್ರೀಯ ಹೂಡಿಕೆಯಾಗಿದ್ದು, ಹೀಗಾಗಿ ಕೆಲವರು ಮ್ಯೂಚುವಲ್ ಫಂಡ್‌ಗಿಂತ ಇಟಿಎಫ್ ಅನ್ನು ಉತ್ತಮ ಹೂಡಿಕೆ ಆಯ್ಕೆ ಎಂದು ಪರಿಗಣಿಸುತ್ತಾರೆ. ನೀವು ಕೂಡಾ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ, ಇನ್ವೆಸ್ಟ್‌ಮೆಂಟ್ ಮಾಡಲು ಸರಿಯಾದ ಸಮಯವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಮುಖ್ಯ ಎನ್ನುತ್ತಾರೆ ತಜ್ಞರು. ಹಾಗಾದರೆ ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಯಾವುದು ಎಂಬುದನ್ನು ನೋಡೋಣ ಬನ್ನಿ.

ETF Investment: ಮ್ಯೂಚುವಲ್ ಫಂಡ್‌ಗಿಂತ ಇಟಿಎಫ್ ಮೇಲಿನ ಹೂಡಿಕೆಯೂ ಲಾಭದಾಯಕವೇ? ವಾರ್ಷಿಕವಾಗಿ ತಗಲುವ ವೆಚ್ಚ ಎಷ್ಟು?

ಇತ್ತೀಚೆಗಿನ ದಿನಗಳಲ್ಲಿ ಇಟಿಎಫ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಬಹುದು. ಈ ಇಟಿಎಫ್ ಹೂಡಿಕೆಯೂ ಮ್ಯೂಚುವಲ್ ಫಂಡ್‌ಗಿಂತ ಉತ್ತಮ ಆಯ್ಕೆಯಾಗಿದೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಆದರೆ ದೇಶದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯೂ ಇಟಿಎಫ್‌ಗಳಿಗಿಂತ ಹೆಚ್ಚಾಗಿದೆ. ಆದರೆ ಕಡಿಮೆ ವೆಚ್ಚದ ಇಟಿಎಫ್ ಹೂಡಿಕೆದಾರರಿಗೆ ಎಷ್ಟು ಲಾಭದಾಯಕವಾಗಿದೆ? ವಾರ್ಷಿಕವಾಗಿ ತಗಲುವ ವೆಚ್ಚಗಳ ಕುರಿತಾದ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ETF Investment: ಎಕ್ಸ್‌ಚೇಂಜ್‌-ಟ್ರೇಡೆಡ್‌ ಫಂಡ್‌ಗಳು ಯಾವುವು? ಅದು ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೂಡಿಕೆಗೆ ಸಂಬಂಧಿಸಿದಂತೆ ಜನರ ಮನಸ್ಸಿನಲ್ಲಿ ಕೆಲವೊಂದು ಗೊಂದಲಗಳು ಮೂಡುತ್ತವೆ. ನಾವು ಮ್ಯೂಚುವಲ್‌ ಫಂಡ್‌ ಅಥವಾ ಷೇರು ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಮಾಡಿದರೆ ಸೂಕ್ತ ಅಂತೆಲ್ಲಾ ಯೋಚಿಸುತ್ತಾರೆ. ಇಂತಹವರಿಗೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ (ಇಟಿಎಫ್)‌ ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಹಾಗಾದರೆ ಮೊದಲಿಗೆ ಈ ಇಟಿಎಫ್‌ ಏನು? ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿಯಿರಿ.

ಸ್ಮಾರ್ಟ್ ಬೀಟಾ ಇಟಿಎಫ್​ನಲ್ಲಿ Low Volatility ಸ್ಟ್ರಾಟಿಜಿಯಿಂದ ಉಪಯೋಗಗಳು ತಿಳಿದಿರಿ

Low Volatility strategy in ETF: ಷೇರು ಮಾರುಕಟ್ಟೆಯಲ್ಲಿ ಹೆಚ್ಚು ರಿಸ್ಕ್ ಇಲ್ಲದೇ ಹೂಡಿಕೆ ಮಾಡಲು ಬಯಸುವವರಿಗೆ ಇಟಿಎಫ್ ಉತ್ತಮ ಮಾರ್ಗ. ಈಗ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್​ಗಳಲ್ಲಿ ಸ್ಮಾರ್ಟ್ ಬೀಟಾ ತಂತ್ರ ಜನಪ್ರಿಯವಾಗುತ್ತಿದೆ. ಇದು ಲೋ ವೊಲಾಟಿಲಿಟಿ ತಂತ್ರ ಅನುಸರಿಸಲಿದ್ದು, ನಿಫ್ಟಿ100 ಸ್ಟಾಕುಗಳಲ್ಲಿ ಕಡಿಮೆ ಸಂಚಲನವಿರುವ 30 ಷೇರುಗಳನ್ನು ಟ್ರ್ಯಾಕ್ ಮಾಡುತ್ತದೆ.

ETF Investment : ಇಟಿಎಫ್‌ ಗಳ ಖರೀದಿ ಹಾಗೂ ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಷೇರು ಹಾಗೂ ಮ್ಯೂಚುಯಲ್ ಫಂಡ್ ಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಈಗಾಗಲೇ ಎಷ್ಟೋ ಜನರು ಮ್ಯೂಚುಯಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡಿ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಇಟಿಎಫ್‌ (ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ) ನಲ್ಲಿ ಹೂಡಿಕೆ ಮಾಡಬಹುದು ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ. ಇದು ಕಂಪನಿಯ ಷೇರುಗಳಂತೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲೂ ವ್ಯಾಪಾರ ಮಾಡಲಾಗುತ್ತದೆ. ನೀವು ಇಟಿಎಫ್‌ಗಳನ್ನು ಎಲ್ಲಿ ಖರೀದಿಸಬಹುದು ಹಾಗೂ ಮಾರಾಟ ಮಾಡಬಹುದು? ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆಯನ್ನು ಹೊಂದಿರುವುದು ಅಗತ್ಯವೇ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್
ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್
ಯುದ್ಧದ ಭೀತಿ; ಎಲ್​ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?
ಯುದ್ಧದ ಭೀತಿ; ಎಲ್​ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?
ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’