ETF Investment: ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಫುಲ್ ಡಿಟೇಲ್ಸ್
ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ ಒಂದು ನಿಷ್ಕ್ರೀಯ ಹೂಡಿಕೆಯಾಗಿದ್ದು, ಹೀಗಾಗಿ ಕೆಲವರು ಮ್ಯೂಚುವಲ್ ಫಂಡ್‌ಗಿಂತ ಇಟಿಎಫ್ ಅನ್ನು ಉತ್ತಮ ಹೂಡಿಕೆ ಆಯ್ಕೆ ಎಂದು ಪರಿಗಣಿಸುತ್ತಾರೆ. ನೀವು ಕೂಡಾ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ, ಇನ್ವೆಸ್ಟ್‌ಮೆಂಟ್ ಮಾಡಲು ಸರಿಯಾದ ಸಮಯವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಮುಖ್ಯ ಎನ್ನುತ್ತಾರೆ ತಜ್ಞರು. ಹಾಗಾದರೆ ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಯಾವುದು ಎಂಬುದನ್ನು ನೋಡೋಣ ಬನ್ನಿ.

ಸಾಕಷ್ಟು ಜನ ಎಕ್ಸ್‌ಚೇಂಜ್ ಟ್ರೇಡ್ ಫಂಡ್‌ಗಳಲ್ಲಿ (ಇಟಿಎಫ್) ಹೂಡಿಕೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಮ್ಯೂಚುವಲ್ ಫಂಡ್ ಹಾಗೂ ಷೇರುಗಳಂತೆ ಇಟಿಎಫ್ ಕೂಡಾ ಹೂಡಿಕೆಯ ಸಾಧನವಾಗಿದ್ದು, ಇಲ್ಲಿ ನೀವು ಗೋಲ್ಡ್, ಇಂಡೆಕ್ಸ್, ಬಾಂಡ್ ಇಟಿಎಫ್ ಮತ್ತು ಇಂಟರ್ನ್ಯಾಷನಲ್ ಇಟಿಎಫ್ ಹೀಗೆ ಯಾವುದೇ ರೂಪದಲ್ಲಿ ಹೂಡಿಕೆ ಮಾಡಬಹುದು. ಇದು ನಿಷ್ಕ್ರೀಯ ಹೂಡಿಕೆಯಾಗಿದ್ದು, ಹೆಚ್ಚಿನವರು ಮ್ಯೂಚುವಲ್ ಫಂಡ್‌ಗಿಂತ ಇಟಿಎಫ್ ಅನ್ನೇ ಹೂಡಿಕೆಗೆ ಉತ್ತಮ ಆಯ್ಕೆ ಎಂದು ಪರಿಗಣಿಸುತ್ತಾರೆ. ನೀವು ಕೂಡಾ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ, ಇನ್ವೆಸ್ಟ್‌ಮೆಂಟ್ ಮಾಡಲು ಸರಿಯಾದ ಸಮಯವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು. ಹಾಗಾದರೆ ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಯಾವುದು ಎಂಬುದನ್ನು ನೋಡೋಣ ಬನ್ನಿ.
ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು?
ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳನ್ನು (ಇಟಿಎಫ್) ಸಾಮಾನ್ಯವಾಗಿ ನಿವೃತ್ತಿ ಯೋಜನೆಗಳಂತಹ ಗುರಿಗಳಿಗಾಗಿ ಉತ್ತಮ ಹೂಡಿಕೆಯೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವುಗಳ ಕಡಿಮೆ ವೆಚ್ಚಗಳು ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇಟಿಎಫ್ ಸಂಬಂಧಿತ ಹೂಡಿಕೆಗಳಲ್ಲಿ ತಜ್ಞರು ಹೂಡಿಕೆಯ ಸಮಯಕ್ಕೆ ವಿಶೇಷ ಒತ್ತು ನೀಡುತ್ತಾರೆ. ನೀವು ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ಯಾವಾಗ ಈ ಹೂಡಿಕೆಯನ್ನು ಮಾಡಬೇಕು? ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಸರಿಯಾದ ತಂತ್ರವನ್ನು ಅಳವಡಿಸಿಕೊಂಡು ನೀವು ಅದರಲ್ಲಿ ಹೂಡಿಕೆ ಮಾಡದಿದ್ದರೆ, ಭವಿಷ್ಯದಲ್ಲಿ ನಷ್ಟದ ಅಪಾಯವನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಸುಲಭವಾದ ಮಾರ್ಗವೆಂದರೆ “ಬೈ ಆನ್ ಡಿಪ್ಸ್.” ಅಂದ್ರೆ ಸ್ಟಾಕ್ ಮಾರ್ಕೆಟ್ ಅಥವಾ ಇಟಿಎಫ್ ಸೂಚ್ಯಂಕದಲ್ಲಿ ಕುಸಿತ ಕಂಡಾಗ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಎಂದು ತಜ್ಞರು ಸಲಹೆ ನೀಡುತ್ತಾರೆ.
ಮತ್ತೊಂದು ವಿಷಯ ಏನೆಂದರೆ, ವಾಸ್ತವವಾಗಿ ಇಟಿಎಫ್ ನಿಷ್ಕ್ರಿಯ ಹೂಡಿಕೆಯಾಗಿದ್ದು, ಅದನ್ನು ಖರೀದಿಸಲು ಮತ್ತು ಮಾರಾಟ ಮಾಡಲು ನಿರ್ದಿಷ್ಟ ಸಮಯ ಎಂಬುದು ಇಲ್ಲ. ಆದರೆ ನೀವು ಯೋಚಿಸಿ ಉತ್ತಮ ರೀತಿಯಲ್ಲಿ ಹೂಡಿಕೆ ಮಾಡಿ ನಿಮ್ಮ ಹೂಡಿಕೆಗೆ ಸಂಬಂಧಿಸಿದ ನಷ್ಟದ ಅಪಾಯವನ್ನು ಕಡಿಮೆ ಮಾಡಬಹುದು.
ನೀವು 5 ರಿಂದ 10 ವರ್ಷಗಳವರೆಗೆ ದೀರ್ಘಾವಧಿಗೆ ಹೂಡಿಕೆ ಮಾಡುತ್ತಿದ್ದರೆ ನಿಮ್ಮ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ನೀವು 2-3 ವರ್ಷಗಳ ಅವಧಿಗೆ ಹೂಡಿಕೆ ಮಾಡಲು ಬಯಸಿದರೆ, ನೀವು ಚಿಂತನಶೀಲವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಹೂಡಿಕೆಗಾಗಿ ನೀವು ನಿರ್ದಿಷ್ಟ ವಲಯ ಆಧಾರಿತ ಇಟಿಎಫ್ ಅನ್ನು ಆಯ್ಕೆ ಮಾಡಬಹುದು. ಉದಾಹರಣೆಗೆ ಪ್ರಸ್ತುತ, ಹೆಚ್ಚುತ್ತಿರುವ ಮಾಲಿನ್ಯದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಪ್ರೋತ್ಸಾಹಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, EV ಆಧಾರಿತ ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದು ನಿಮಗೆ ಉತ್ತಮ ಆಯ್ಕೆಯಾಗಿದೆ. ಜೊತೆಗೆ ನೀವು ಇಟಿಎಫ್‌ಗಳನ್ನು ಯಾವಾಗ ಖರೀದಿಸಬೇಕು ಮತ್ತು ಮಾರಾಟ ಮಾಡಬೇಕು ಎಂದು ಹೂಡಿಕೆ ಸಲಹೆಗಾರರನ್ನು ಕೂಡಾ ಸಂಪರ್ಕಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




