ಸ್ಮಾರ್ಟ್ ಬೀಟಾ ಇಟಿಎಫ್​ನಲ್ಲಿ Low Volatility ಸ್ಟ್ರಾಟಿಜಿಯಿಂದ ಉಪಯೋಗಗಳು ತಿಳಿದಿರಿ

Low Volatility strategy in ETF: ಷೇರು ಮಾರುಕಟ್ಟೆಯಲ್ಲಿ ಹೆಚ್ಚು ರಿಸ್ಕ್ ಇಲ್ಲದೇ ಹೂಡಿಕೆ ಮಾಡಲು ಬಯಸುವವರಿಗೆ ಇಟಿಎಫ್ ಉತ್ತಮ ಮಾರ್ಗ. ಈಗ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್​ಗಳಲ್ಲಿ ಸ್ಮಾರ್ಟ್ ಬೀಟಾ ತಂತ್ರ ಜನಪ್ರಿಯವಾಗುತ್ತಿದೆ. ಇದು ಲೋ ವೊಲಾಟಿಲಿಟಿ ತಂತ್ರ ಅನುಸರಿಸಲಿದ್ದು, ನಿಫ್ಟಿ100 ಸ್ಟಾಕುಗಳಲ್ಲಿ ಕಡಿಮೆ ಸಂಚಲನವಿರುವ 30 ಷೇರುಗಳನ್ನು ಟ್ರ್ಯಾಕ್ ಮಾಡುತ್ತದೆ.

ಸ್ಮಾರ್ಟ್ ಬೀಟಾ ಇಟಿಎಫ್​ನಲ್ಲಿ Low Volatility ಸ್ಟ್ರಾಟಿಜಿಯಿಂದ ಉಪಯೋಗಗಳು ತಿಳಿದಿರಿ
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 20, 2024 | 1:37 PM

ಸ್ಮಾರ್ಟ್ ಬೀಟಾ ಸ್ಟ್ರಾಟಿಜಿಯಿಂದ ಹಲವು ಉಪಯೋಗಗಳಿವೆ. ರಿಸ್ಕ್ ಅಂಶವನ್ನು ಕಡಿಮೆ ಮಾಡಿ ಹೆಚ್ಚು ರಿಟರ್ನ್ ತರಲು ಅದು ಸಹಕಾರಿಯಾಗಬಲ್ಲುದು. ಅದರ ಒಂದು ತಂತ್ರಗಳಲ್ಲಿ ಲೋ ವೊಲಾಟಿಲಿಟಿ ಸ್ಟ್ರಾಟಿಜಿಯೂ ಇದೆ. ಈ Low Volatility ಸ್ಟ್ರಾಟಿಜಿ ಹೇಗೆ ಕೆಲಸ ಮಾಡುತ್ತದೆ? ಷೇರು ಮಾರುಕಟ್ಟೆಯ ಸಂಚಲನಗಳಿಂದ ಹೂಡಿಕೆದಾರರಿಗೆ ಇದು ಹೇಗೆ ರಕ್ಷಣೆ ಕೊಡಬಲ್ಲುದು?

ಇಟಿಎಫ್‌ನ Low Volatility ಸ್ಟ್ರಾಟಿಜಿ ಹೇಗೆ ಕೆಲಸ ಮಾಡುತ್ತೆ ನೋಡಿ…

ಮ್ಯೂಚುವಲ್ ಫಂಡ್​ಗಳನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಒಂದು ಆ್ಯಕ್ಟಿವ್ ಮ್ಯೂಚುವಲ್ ಫಂಡ್, ಮತ್ತೊಂದು ಪಾಸಿವ್ ಮ್ಯೂಚುವಲ್ ಫಂಡ್. ಆ್ಯಕ್ಟಿವ್ ಸ್ಕೀಮ್​ನಲ್ಲಿ ಫಂಡ್ ಮ್ಯಾನೇಜರ್ ಅವರು ಹೂಡಿಕೆಯನ್ನು ನಿರ್ವಹಿಸುತ್ತಾರೆ. ಯಾವ ಷೇರು ಅಥವಾ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡಬೇಕೆಂದು ಫಂಡ್ ಮ್ಯಾನೇಜರ್ ನಿರ್ಧರಿಸುತ್ತಾರೆ. ಎರಡನೇ ವಿಧವಾದ ಪಾಸಿವ್ ಮ್ಯೂಚುವಲ್ ಫಂಡ್​ನಲ್ಲಿ ಎಲ್ಲಿ ಹೂಡಿಕೆ ಆಗಬೇಕು ಎಂಬುದು ಬಹುತೇಕ ಪೂರ್ವನಿರ್ಧಾರಿತವಾಗಿರುತ್ತದೆ. ಉದಾಹರಣೆಗೆ, ನಿಫ್ಟಿ50 ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುವ ಫಂಡ್ ಅನ್ನು ಪಾಸಿವ್ ಫಂಡ್ ಎನ್ನಬಹುದು. ಇದು ನಿಫ್ಟಿ50 ಇಂಡೆಕ್ಸ್​ನಲ್ಲಿರುವ 50 ಷೇರುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಇದಕ್ಕೆ ಫಂಡ್ ಮ್ಯಾನೇಜರ್ ಅವಶ್ಯಕತೆ ಇರುವುದಿಲ್ಲ.

ಇದನ್ನೂ ಓದಿ: ಈಕ್ವಿಟಿಯಿಂದ ಫೈನಾನ್ಸಿಂಗ್​ವರೆಗೆ, ಅತ್ಯಧಿಕ ಲಾಭ ತರುವ ಹೂಡಿಕೆ ಆಯ್ಕೆಗಳಿವು…

ಇಟಿಎಫ್ ಅಥವಾ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಕೂಡ ಪಾಸಿವ್ ಫಂಡ್ ಆಗಿರುತ್ತದೆ. ಇಟಿಎಫ್​ನಲ್ಲಿ ಸ್ಮಾರ್ಟ್ ಬೀಟಾ ಎಂಬ ಹೊಸ ತಂತ್ರ ಜನಪ್ರಿಯವಾಗುತ್ತಿದೆ. ಇದು ಆ್ಯಕ್ಟಿವ್ ಮತ್ತು ಪಾಸಿವ್ ಸ್ಕೀಮ್​ಗಳ ಸಂಯೋಜನೆ ಎಂದರೆ ತಪ್ಪಾಗುವುದಿಲ್ಲ. ಮೊಮೆಂಟಮ್, ವ್ಯಾಲ್ಯೂ, ವೊಲಾಟಿಲಿಟಿ ಮತ್ತು ಕ್ವಾಲಿಟಿಯಂತಹ ಅಂಶಗಳ ಆಧಾರದ ಮೇಲೆ ಸ್ಟಾಕ್​ಗಳನ್ನು ಆಯ್ಕೆ ಮಾಡಲಾಗುತ್ತದೆ. ಲೋ ವೊಲಾಟಿಲಿಟಿ ಇಂತಹ ತಂತ್ರಗಳಲ್ಲಿ ಒಂದು.

ಈ ತಂತ್ರವನ್ನು ಅನುಸರಿಸುವ ಇಟಿಎಫ್‌ಗಳು ನಿಫ್ಟಿ100 Low Volatility 30 ಸೂಚ್ಯಂಕವನ್ನು ಟ್ರ್ಯಾಕ್ ಮಾಡುತ್ತವೆ. ಈ ಸೂಚ್ಯಂಕಗಳು ನಿಫ್ಟಿ 100 ಸೂಚ್ಯಂಕದಲ್ಲಿ ಒಳಗೊಂಡಿರುವ 100 ಕಂಪನಿಗಳ ಪೈಕಿ, ಕಳೆದ ಒಂದು ವರ್ಷದಲ್ಲಿ ಕಡಿಮೆ ಚಂಚಲತೆ ಅಥವಾ ಲೋ ವೊಲಾಟಿಲಿಟಿ ಇರುವ 30 ಷೇರುಗಳನ್ನು ಟ್ರ್ಯಾಕ್ ಮಾಡುತ್ತವೆ. ಇಂಥ ಇಟಿಎಫ್‌ಗಳು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ಹೂಡಿಕೆದಾರರಿಗೆ ಸೂಕ್ತವೆನಿಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
"ನನ್ನ ಕೊಲೆ ಮಾಡುವ ಸಂಚು ನಡೆಸಿದ್ದೀರಿ" ಪೊಲೀಸರ ವಿರುದ್ಧ ಸಿಟಿ ರವಿ ಗರಂ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ
ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ
ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದೇಕೆ? ಇಲ್ಲಿದೆ ಕಾರಣ
ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದೇಕೆ? ಇಲ್ಲಿದೆ ಕಾರಣ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ