ಈಕ್ವಿಟಿಯಿಂದ ಫೈನಾನ್ಸಿಂಗ್ವರೆಗೆ, ಅತ್ಯಧಿಕ ಲಾಭ ತರುವ ಹೂಡಿಕೆ ಆಯ್ಕೆಗಳಿವು…
Top investment options: ಹೆಚ್ಚು ರಿಸ್ಕ್ ತೆಗೆದುಕೊಳ್ಳಬಯಸುವವರು ಹೆಚ್ಚು ರಿಟರ್ನ್ ಪಡೆಯುವ ಅವಕಾಶ ಹೆಚ್ಚಿರುತ್ತದೆ. ಷೇರುಗಳಲ್ಲಿ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಮಾಡಬಹುದು. ರಿಯಲ್ ಎಸ್ಟೇಟ್ನಲ್ಲಿ ದೀರ್ಘಾವಧಿಯಲ್ಲಿ ಉತ್ತಮ ಲಾಭ ಮಾಡಬಹುದು. ಹೆಚ್ಚು ರಿಸ್ಕ್ ಇಲ್ಲದೆ ಉತ್ತಮ ಲಾಭ ಬೇಕೆಂದರೆ ಚಿನ್ನ ಮತ್ತು ರಿಯಲ್ ಎಸ್ಟೇಟ್ ಉತ್ತಮ ಆಯ್ಕೆ. ಫೈನಾನ್ಸಿಂಗ್ ಕೂಡ ಬಹಳ ರಿಸ್ಕಿಯಾದರೂ ಲಾಭದ ಮಾರ್ಗವಾಗಿದೆ.
ನಿಮ್ಮ ಬಳಿ ಕೆಲ ಲಕ್ಷ ರೂಗಳಷ್ಟು ಹಣ ಇದ್ದು, ಅದನ್ನು ಹೆಚ್ಚು ಲಾಭ ತರುವ ಹೂಡಿಕೆಗಳಿಗೆ ಉಪಯೋಗಿಸುವ ಆಲೋಚನೆ ಇದ್ದರೆ ಕೆಲ ಮಾರ್ಗೋಪಾಯಗಳಿವೆ. ಸಾಂಪ್ರದಾಯಿಕವಾದ ಫಿಕ್ಸೆಡ್ ಡೆಪಾಸಿಟ್ಗಳಿಗಿಂತ ಬಹಳ ಹೆಚ್ಚು ರಿಟರ್ನ್ಸ್ ನೀಡಬಲ್ಲಂತಹ ಹೂಡಿಕೆ ಆಯ್ಕೆಗಳಿವೆ. ಇವುಗಳು ವರ್ಷಕ್ಕೆ ಶೇ. 10ಕ್ಕಿಂತಲೂ ಹೆಚ್ಚು ರಿಟರ್ನ್ ತರಬಲ್ಲುವು. ನಿಮ್ಮ ಹಣವನ್ನು ಕಡಿಮೆ ವರ್ಷಗಳಲ್ಲಿ ಡಬಲ್ ಮಾಡಬಲ್ಲಂತಹವು. ಇಂಥ ಕೆಲ ಹೂಡಿಕೆ ಆಯ್ಕೆಗಳು ಇಲ್ಲಿವೆ…
ಈಕ್ವಿಟಿಗಳಲ್ಲಿ ಹೂಡಿಕೆ….
ಷೇರು ಮಾರುಕಟ್ಟೆಯಲ್ಲಿ ನೇರವಾಗಿ ನೀವು ಹೂಡಿಕೆ ಮಾಡಬಹುದು. ಹೂಡಿಕೆಗೆ ಮುನ್ನ ಒಂದಷ್ಟು ಅಧ್ಯಯನದ ಅಗತ್ಯ ಇರಬಹುದು. ಬೆಳವಣಿಗೆ ಹೊಂದುವ ಅವಕಾಶ ಹೆಚ್ಚಿರುವ ಸೆಕ್ಟರ್ಗಳನ್ನು ಶಾರ್ಟ್ಲಿಸ್ಟ್ ಮಾಡಿ, ಅವುಗಳಲ್ಲಿ ಉತ್ತಮ ತಳಹದಿಯ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಆ ಷೇರುಗಳಲ್ಲಿ ಹೂಡಿಕೆ ಮಾಡುವುದು ಸರಿ. ರಿಸ್ಕ್ ಬೇಡ ಎನಿಸಿದರೆ ಇಟಿಎಫ್ ಅಥವಾ ಇಂಡೆಕ್ಸ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಇಂಟ್ರಾಡೇ ಟ್ರೇಡಿಂಗ್ನಲ್ಲಿ ಸಾಕಷ್ಟು ಜನರು ಉತ್ತಮ ಲಾಭ ಗಳಿಸುತ್ತಾರೆ. ಇಲ್ಲಿ ಶೇ. 10ರಿಂದ ಶೇ. 70ರವರೆಗೂ ರಿಟರ್ನ್ಸ್ ಪಡೆಯಬಹುದು.
ಇದನ್ನೂ ಓದಿ: 2024ರಲ್ಲಿ ಅತಿಹೆಚ್ಚು ರೆಮಿಟೆನ್ಸ್ ಪಡೆದ ದೇಶಗಳಲ್ಲಿ ಭಾರತ ಮೊದಲು; 129 ಬಿಲಿಯನ್ ಡಾಲರ್ ರೆಮಿಟೆನ್ಸ್ ಹರಿವು
ಐಪಿಒಗಳಲ್ಲಿ ಹೂಡಿಕೆ…
ಈಗೀಗ ಸಾಕಷ್ಟು ಸಂಖ್ಯೆಯಲ್ಲಿ ಐಪಿಒಗಳು ಬರುತ್ತಿವೆ. ಬಹಳಷ್ಟು ಜನರು ಲಾಭ ಗಳಿಕೆಗಾಗಿ ಐಪಿಒಗೆ ಅರ್ಜಿ ಹಾಕುವುದುಂಟು. ಐಪಿಒದಲ್ಲಿ ಖರೀದಿಸಿದ ಷೇರು ಹೆಚ್ಚಿನ ಬೆಲೆಗೆ ಲಿಸ್ಟ್ ಆಗಬಹುದು. ಆಗ ಅದನ್ನು ಮಾರಿ ಲಾಭ ಗಳಿಸಬಹುದು. ಇತ್ತೀಚೆಗೆ ಹಲವು ಷೇರುಗಳು ಐಪಿಒ ಬೆಲೆಗಿಂತ ಶೇ. 50ಕ್ಕಿಂತಲೂ ಹೆಚ್ಚು ಬೆಲೆಗೆ ಲಿಸ್ಟ್ ಆಗಿರುವುದುಂಟು.
ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ…
ನೀವು ದೀರ್ಘಕಾಲದ ಹೂಡಿಕೆಯ ಅಪೇಕ್ಷೆಯಲ್ಲಿದ್ದರೆ ರಿಯಲ್ ಎಸ್ಟೇಟ್ ಉತ್ತಮ ಆಯ್ಕೆಗಳಲ್ಲಿ ಒಂದು. ಜನಸಂಖ್ಯೆ ಹೆಚ್ಚಳ, ಉದ್ದಿಮೆ ಹೆಚ್ಚಳ ಇರುವ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ಗೆ ಒಳ್ಳೆಯ ಬೇಡಿಕೆ ಉಂಟು. ಭೂಮಿ ಬೆಲೆ ನಾಲ್ಕೈದು ವರ್ಷಕ್ಕೆ ಡಬಲ್ ಆಗುವುದುಂಟು. ಆದರೆ, ನಿಮಗೆ ಬೇಕಾದಾಗ ಹೂಡಿಕೆ ಹಿಂಪಡೆಯುವುದು ಕಷ್ಟವಾಗಬಹುದು.
ಇದನ್ನೂ ಓದಿ: MSSC scheme: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ
ಚಿನ್ನದ ಮೇಲೆ ಹೂಡಿಕೆ….
ರಿಯಲ್ ಎಸ್ಟೇಟ್ನಂತೆ ಚಿನ್ನಕ್ಕೂ ಯಾವತ್ತಿದ್ದರೂ ಬೇಡಿಕೆ ಇರುತ್ತದೆ. ಇದೂ ಕೂಡ ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದ ಮಾರ್ಗ. ಇದು ವರ್ಷಕ್ಕೆ ಶೇ. 10ರಿಂದ 20ರಷ್ಟು ರಿಟರ್ನ್ ಕೊಡಬಲ್ಲಂತಹ ಹೂಡಿಕೆ ಆಯ್ಕೆ.
ಫೈನಾನ್ಸಿಂಗ್….
ವ್ಯಕ್ತಿಗಳಿಗೆ ಕೈಸಾಲ ನೀಡುವುದು ಮೊದಲಿಂದಲೂ ಇರುವ ಉತ್ತಮ ಆದಾಯ ಮಾರ್ಗವಾಗಿದೆ. ಹಿಂದೆಲ್ಲಾ ಫೈನಾನ್ಷಿಯರ್ಗಳು ತಿಂಗಳಿಗೆ ಶೇ. 5ಕ್ಕಿಂತಲೂ ಹೆಚ್ಚು ಬಡ್ಡಿಗೆ ಸಾಲ ನೀಡುತ್ತಿದ್ದರು. ಬ್ಯಾಂಕುಗಳಲ್ಲಿ ಸಾಲ ಪಡೆಯಲು ಆಗದವರ ಸಂಖ್ಯೆ ಹೆಚ್ಚಿದೆ. ಇವರು ಶೇ. 2ರಿಂದ 3ರ ಬಡ್ಡಿಗೆ ಸಾಲ ಪಡೆಯಲು ಮುಂದಾಗಬಹುದು. ವರ್ಷಕ್ಕೆ ಶೇ. 24ರಿಂದ 36ರಷ್ಟು ಲಾಭ ನಿಮಗೆ ಸಿಗುತ್ತದೆ. ರಿಸ್ಕ್ ಹೆಚ್ಚಿರುತ್ತದೆ ಎಂಬುದು ಗಮನದಲ್ಲಿರಲಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:08 pm, Thu, 19 December 24