AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂಡಿಕೆಯಲ್ಲಿ ಲಿಕ್ವಿಡಿಟಿ ಅಂಶ ಎಷ್ಟು ಮುಖ್ಯ? ಉತ್ತಮ ಲಿಕ್ವಿಡಿಟಿ ಇರುವ ಇಟಿಎಫ್​ನ ಪ್ರಯೋಜನಗಳಿವು…

Liquidity factor in ETF: ಯಾವುದೇ ಹೂಡಿಕೆಯಲ್ಲೂ ಹಣ ತೊಡಗಿಸುವ ಮುನ್ನ ಅದರಲ್ಲಿನ ಲಿಕ್ವಿಡಿಟಿ ಅಂಶ ಎಷ್ಟಿದೆ ಎಂಬುದನ್ನು ತಿಳಿದಿರುವುದು ಉತ್ತಮ. ಲಿಕ್ವಿಡಿಟಿ ಎಂದರೆ ನಿಮಗೆ ಬೇಕಾದಾಗ ಹೂಡಿಕೆ ಮಾಡುವುದು, ಮತ್ತು ಹೂಡಿಕೆ ಹಿಂಪಡೆಯುವುದು. ಇಂಥ ಸ್ವಾತಂತ್ರ್ಯವನ್ನು ನೀವು ಇಟಿಎಫ್ ಅಥವಾ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ನಲ್ಲಿ ಪಡೆಯಬಹುದು.

ಹೂಡಿಕೆಯಲ್ಲಿ ಲಿಕ್ವಿಡಿಟಿ ಅಂಶ ಎಷ್ಟು ಮುಖ್ಯ? ಉತ್ತಮ ಲಿಕ್ವಿಡಿಟಿ ಇರುವ ಇಟಿಎಫ್​ನ ಪ್ರಯೋಜನಗಳಿವು...
ಇಟಿಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 20, 2024 | 4:37 PM

Share

ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಲು ಪರಿಗಣಿಸಲಾಗುವ ಪ್ರಮುಖ ಅಂಶಗಳಲ್ಲಿ ಲಿಕ್ವಿಡಿಟಿಯೂ ಒಂದು. ಹೂಡಿಕೆ ದೃಷ್ಟಿಕೋನದಿಂದ ನೋಡುವುದಾದರೆ ಲಿಕ್ವಿಡಿಟಿ ಯಾಕೆ ಮುಖ್ಯ ಎನಿಸುತ್ತದೆ? ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ನಲ್ಲಿ ಲಿಕ್ವಿಡಿಟಿ ಹೇಗಿರುತ್ತದೆ? ಈ ಬಗ್ಗೆ ಮಾಹಿತಿ….

ಹೂಡಿಕೆಯಲ್ಲಿ ಲಿಕ್ವಿಡಿಟಿ ಎಷ್ಟು ಪ್ರಮುಖವಾದುದು? ಲಿಕ್ವಿಡಿಟಿ ಇರುವಂತಹ ಹೂಡಿಕೆ ಆಯ್ಕೆಗಳು ಮಾತ್ರವೇ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಯಾವುದಾದರೂ ಉತ್ಪನ್ನದಲ್ಲಿ ನೀವು ಹೂಡಿಕೆ ಮಾಡಿದ್ದರೆ ಆ ಹಣವನ್ನು ನೀವು ಅಗತ್ಯ ಸಂದರ್ಭಕ್ಕೆ ಬಳಸಲು ಆಗುತ್ತದಾ? ಹೂಡಿಕೆ ಮಾಡುವ ಮುನ್ನ ಈ ಅಂಶವನ್ನು ಪರಿಶೀಲಿಸಿ.

ಲಿಕ್ವಿಡಿಟಿ ಎಂದರೇನು? ಸರಳವಾಗಿ ಹೇಳುವುದಾದರೆ, ನಿಮಗೆ ಬೇಕಾದಾಗ ಹಣವನ್ನು ಹಿಂಪಡೆಯಲು ಸಾಧ್ಯವಾಗುವಂಥದ್ದು. ಬ್ಯಾಂಕ್ ಖಾತೆಯಲ್ಲಿರುವ ಹಣ ಬಹಳ ಹೆಚ್ಚು ಲಿಕ್ವಿಡಿಟಿ ಹೊಂದಿರುತ್ತದೆ. ಅಂದರೆ ನಿಮಗೆ ಅಗತ್ಯ ಬಿದ್ದಾಗೆಲ್ಲಾ ಖಾತೆಯಿಂದ ಹಣ ಹಿಂಪಡೆಯಬಹುದು. ಹೂಡಿಕೆ ವಿಚಾರದಲ್ಲಿ ಲಿಕ್ವಿಡಿಟಿ ಎಂದರೆ ಯಾವ ಸಮಸ್ಯೆಯೂ ಇಲ್ಲದೆ ನೀವು ಯಾವಾಗ ಬೇಕಾದರೂ ಹೂಡಿಕೆ ಮಾಡಬಹುದು. ಯಾವಾಗ ಬೇಕಾದರೂ ಹೂಡಿಕೆ ಹಿಂಪಡೆಯಬಹುದು.

ಇದನ್ನೂ ಓದಿ: ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಫುಲ್‌ ಡಿಟೇಲ್ಸ್

ಇಂಥ ಲಿಕ್ವಿಡಿಟಿ ಹೊಂದಿರುವ ಹೂಡಿಕೆಗೆ ಉತ್ತಮ ಉದಾಹರಣೆ ಎಂದರೆ ಇಟಿಎಫ್. ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಎಂಬುದು ಒಂದು ವರ್ಗದ ಮ್ಯೂಚುವಲ್ ಫಂಡ್ ಆಗಿರುತ್ತದೆ. ಇದು ಷೇರು ಮಾರುಕಟ್ಟೆಯ ಯಾವುದಾದರೂ ಇಂಡೆಕ್ಸ್ ಅಥವಾ ಸೆಕ್ಟರ್ ಅನ್ನು ಟ್ರ್ಯಾಕ್ ಮಾಡುತ್ತದೆ. ಷೇರುಗಳ ರೀತಿ ನೀವು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಮಾರುಕಟ್ಟೆ ಸಮಯದಲ್ಲಿ ಇಟಿಎಫ್​ಗಳನ್ನು ಟ್ರೇಡ್ ಮಾಡಬಹುದು.

ಮ್ಯೂಚುವಲ್ ಫಂಡ್​ನಲ್ಲಿ ನೀವು ಹೂಡಿಕೆ ಮಾಡಲು ಡೀಮ್ಯಾಟ್ ಖಾತೆ ಇರಲೇಬೇಕೆಂದಿಲ್ಲ. ಆದರೆ, ಇಟಿಎಫ್​ನಲ್ಲಿ ಹೂಡಿಕೆ ಮಾಡಲು ನಿಮಗೆ ಡಿಮ್ಯಾಟ್ ಖಾತೆ ಇರಬೇಕಾಗುತ್ತದೆ. ಡೀಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಇದ್ದಲ್ಲಿ ಇಟಿಎಫ್​ನಲ್ಲಿ ಹೂಡಿಕೆ ಸಾಧ್ಯ.

(ಗಮನಿಸಿ: ಈ ಲೇಖನದಲ್ಲಿ ಷೇರು ವಹಿವಾಟಿನ ಬಗ್ಗೆ ಮಾಹಿತಿ ನೀಡಲಾಗಿದೆಯೇ ಹೊರತು, ನಿರ್ದಿಷ್ಟ ಹೂಡಿಕೆಗೆ ಯಾವ ಶಿಫಾರಸುಗಳನ್ನು ಮಾಡಲಾಗಿಲ್ಲ.)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ