AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಟಿಎಫ್​ನಲ್ಲಿ ಹೂಡಿಕೆ ಮಾಡಿದರೆ ಏನು ಲಾಭ? ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು…

Investments in ETF: ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ನಲ್ಲಿ ಹೂಡಿಕೆ ಮಾಡಿದರೆ ಹಲವು ಅನುಕೂಲತೆಗಳಿವೆ. ಅಂತೆಯೇ ಇದು ಬಹಳಷ್ಟು ಹೂಡಿಕೆದಾರರಿಗೆ ಪ್ರಧಾನ ಆಯ್ಕೆ ಆಗಿದೆ. ಇಟಿಎಫ್​ನಲ್ಲಿ ರಿಸ್ಕ್ ಅಂಶ ಕಡಿಮೆ ಇರುತ್ತದೆ, ಎಕ್ಸ್​ಪೆನ್ಸ್ ರೇಶಿಯೋ ಕೂಡ ಕಡಿಮೆ ಇರುತ್ತದೆ. ಷೇರು ಮಾರುಕಟ್ಟೆಯ ವಹಿವಾಟು ಅವಧಿಯಲ್ಲಿ ಷೇರುಗಳ ರೀತಿಯಲ್ಲಿ ಇಟಿಎಫ್ ಅನ್ನು ರಿಯಲ್ ಟೈಮ್​ನಲ್ಲಿ ಟ್ರೇಡಿಂಗ್ ಮಾಡಬಹುದು.

ಇಟಿಎಫ್​ನಲ್ಲಿ ಹೂಡಿಕೆ ಮಾಡಿದರೆ ಏನು ಲಾಭ? ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು...
ಇಟಿಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 20, 2024 | 5:53 PM

Share

ನೀವು ಯಾವುದೇ ರೀತಿಯ ಹೂಡಿಕೆ ಮಾಡುವ ಮುನ್ನ ಅದರಿಂದ ಎಷ್ಟು ಲಾಭ ಸಿಗುತ್ತದೆ ಎಂಬುದನ್ನು ಗಮನಿಸುತ್ತೇವೆ. ಲಾಭದ ಜೊತೆಗೆ ಇನ್ನೂ ಹಲವಾರು ಅಂಶಗಳನ್ನು ನಾವು ಗಣನೆಗೆ ತೆಗೆದುಕೊಳ್ಳುವುದುಂಟು. ಇಟಿಎಫ್​ನಲ್ಲೂ ಹೂಡಿಕೆ ಮಾಡುವಾಗ ಹಲವು ಸಂಗತಿಗಳನ್ನು ತಿಳಿದುಕೊಂಡಿರಬೇಕು. ಇಟಿಎಫ್​ನಲ್ಲಿ ಹೂಡಿಕೆ ಮಾಡಲಾಗುತ್ತಿರುವ ಪ್ರಮಾಣ ಹೆಚ್ಚುತ್ತಲೇ ಇದೆ. ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ಗಳು ಸಾಕಷ್ಟು ಹೂಡಿಕೆಗಳನ್ನು ಆಕರ್ಷಿಸುತ್ತಿವೆ. ನೀವು ಇಟಿಎಫ್​ಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಯಾಕೆ ಇಟಿಎಫ್​ನಲ್ಲಿ ಹೂಡಿಕೆ ಮಾಡಬೇಕು, ಅದರಿಂದ ಪ್ರಯೋಜನ ಏನು ಇತ್ಯಾದಿ ಸಂಗತಿಗಳು ತಿಳಿದಿರುವುದು ಒಳ್ಳೆಯದು.

ಇಟಿಎಫ್ ಅಥವಾ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಎಂಬುದು ಒಂದು ರೀತಿಯಲ್ಲಿ ಇಂಡೆಕ್ಸ್ ಟ್ರ್ಯಾಕ್ ಮಾಡುವ ಮ್ಯುಚುವಲ್ ಫಂಡ್​ನಂತೆ. ಪ್ರಮುಖ ವ್ಯತ್ಯಾಸ ಎಂದರೆ ಇದು ಪಾಸಿವ್ ಫಂಡ್ ಆಗಿರುತ್ತದೆ, ಮತ್ತು ಷೇರು ವಿನಿಮಯ ಕೇಂದ್ರದಲ್ಲಿ ಷೇರುಗಳ ರೀತಿಯಲ್ಲಿ ಇದನ್ನೂ ಟ್ರೇಡ್ ಮಾಡಬಹುದು.

ಇದನ್ನೂ ಓದಿ: Thematic ETF ಎಂದರೇನು? ಈ ಹೂಡಿಕೆ ಯಾರಿಗೆ ಹೇಳಿ ಮಾಡಿಸಿದ್ದು? ಇಲ್ಲಿದೆ ಮಾಹಿತಿ

ಇಟಿಎಫ್​ನಲ್ಲಿ ಹೂಡಿಕೆ ಮಾಡಲು ಹಲವಾರು ಕಾರಣಗಳನ್ನು ಹೆಸರಿಸಬಹುದು. ಇಟಿಎಫ್ ಖರೀದಿಸುವುದರಿಂದ ನೀವು ಒಂದಲ್ಲ ಹಲವಾರು ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತೀರಿ. ಉದಾಹರಣೆಗೆ, ನಿಫ್ಟಿ50 ಇಟಿಎಫ್ ಎಂಬುದು ಆ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ನೀವು ನಿಫ್ಟಿ50 ಇಟಿಎಫ್ ಅನ್ನು ಖರೀದಿಸಿದಾಗ ಆ ಇಂಡೆಕ್ಸ್​ನಲ್ಲಿರುವ 50 ಷೇರುಗಳಲ್ಲಿ ಅವುಗಳ ವೈಟೇಜ್ ಆಧಾರದ ಮೇಲೆ ಹೂಡಿಕೆ ನಿಯೋಜನೆ ಆಗುತ್ತದೆ. ಒಂದು ಅಥವಾ ಎರಡು ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚಿನ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ರಿಸ್ಕ್ ಅಂಶ ತಗ್ಗುತ್ತದೆ. ಹೀಗಾಗಿ, ಇಟಿಎಫ್​ನಲ್ಲಿ ಹೂಡಿಕೆ ಮಾಡಿದರೆ ರಿಸ್ಕ್ ಅಂಶ ಸಹಜವಾಗಿ ಕಡಿಮೆ ಇರುತ್ತದೆ.

ಇಟಿಎಫ್​ನಲ್ಲಿ ಯಾಕೆ ಹೂಡಿಕೆ ಮಾಡಬೇಕು?

ಅಗಲೇ ತಿಳಿಸಿದಂತೆ ಇಟಿಎಫ್​ನಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆ ಪೋರ್ಟ್​ಫೋಲಿಯೋ ವಿಸ್ತೃತಗೊಳ್ಳುತ್ತದೆ. ನೀವು ಇಟಿಎಫ್ ಖರೀದಿಸಿದಾಗ ಯುನಿಟ್​ಗಳನ್ನು ಪಡೆಯುತ್ತೀರಿ. ಇವುಗಳನ್ನು ನೀವು ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಟ್ರೇಡ್ ಮಾಡಬಹುದು. ಮಾರುಕಟ್ಟೆ ಅವಧಿಯಲ್ಲಿ ಯಾವಾಗಬೇಕಾದೂ ನೀವು ಇಟಿಎಫ್ ಅನ್ನು ಖರೀದಿಸಬಹುದು ಮತ್ತು ಮಾರಬಹುದು.

ಇದನ್ನೂ ಓದಿ: ಹೂಡಿಕೆಯಲ್ಲಿ ಲಿಕ್ವಿಡಿಟಿ ಅಂಶ ಎಷ್ಟು ಮುಖ್ಯ? ಉತ್ತಮ ಲಿಕ್ವಿಡಿಟಿ ಇರುವ ಇಟಿಎಫ್​ನ ಪ್ರಯೋಜನಗಳಿವು…

ಈ ವಿಚಾರದಲ್ಲಿ ಮ್ಯೂಚುವಲ್ ಫಂಡ್ ತುಸು ಭಿನ್ನ. ಮ್ಯುಚುವಲ್ ಫಂಡ್​ಗಳನ್ನು ಖರೀದಿಸಿದರೆ ನಿಮಗೆ ನೆಟ್ ಅಸೆಟ್ ವ್ಯಾಲ್ಯೂ ಅಥವಾ ಎನ್​ಎಇ ಪ್ರಕಾರ ಯೂನಿಟ್ ಸಿಗುತ್ತದೆ. ಈ ಎನ್​ಎವಿ ಎನ್ನುವುದು ಟ್ರೇಡಿಂಗ್ ಕೊನೆಯಲ್ಲಿ ನಿರ್ಧಾರವಾಗುತ್ತದೆ. ಆದರೆ, ಇಟಿಎಫ್ ಎಂಬುದು ರಿಯಲ್ ಟೈಮ್ ಟ್ರೇಡಿಂಗ್​ಗೆ ಲಭ್ಯ ಇರುತ್ತದೆ. ಮಾರುಕಟ್ಟೆ ಏರುತ್ತಿದೆ ಎಂದನಿಸಿದರೆ ನೀವು ಇಟಿಎಫ್ ಮಾರಿ ಲಾಭ ಮಾಡಬಹುದು.

ಇಟಿಎಫ್​ನ ಮತ್ತೊಂದು ಅನುಕೂಲವೆಂದರೆ, ಆ್ಯಕ್ಟಿವ್ ಮ್ಯುಚುವಲ್ ಫಂಡ್​ಗೆ ಹೋಲಿಸಿದರೆ ಇದರ ಎಕ್ಸ್​ಪೆನ್ಸ್ ರೇಶಿಯೋ ಕಡಿಮೆ ಇರುತ್ತದೆ. ಅಂದರೆ, ಇದರ ನಿರ್ವಹಣಾ ವೆಚ್ಚ ಕಡಿಮೆ ಇರುತ್ತದೆ.

ಪಾಸಿವ್ ಇನ್ವೆಸ್ಟರ್ಸ್​ಗೆ ಒಳ್ಳೆಯ ಆಯ್ಕೆ

ಆ್ಯಕ್ಟಿವ್ ಫಂಡ್​ಗಳಾದರೆ ಬೆಂಚ್​ಮಾರ್ಕ್ ಇಂಡೆಕ್ಸ್​ಗಿಂತ ಹೆಚ್ಚಿನ ಲಾಭವನ್ನು ತರುವ ಗುರಿ ಮತ್ತು ಒತತಡ ಹೊಂದಿರುತ್ತವೆ. ಆದರೆ, ಇಟಿಎಫ್ ಒಂದು ಪಾಸಿವ್ ಫಂಡ್ ಮಾತ್ರವೇ ಆಗಿರುತ್ತದೆ. ಬೆಂಚ್​ಮಾರ್ಕ್ ಇಂಡೆಕ್ಸ್​ನ ಸಾಧನೆಯನ್ನು ಸರಿಗಟ್ಟುವ ಗುರಿ ಮಾತ್ರವೇ ಇದರದ್ದು. ಇದರ ಹೂಡಿಕೆಯನ್ನು ಸಕ್ರಿಯವಾಗಿ ನಿರ್ವಹಿಸುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಇದರ ಎಕ್ಸ್​ಪೆನ್ಸ್ ರೇಶಿಯೋ ಕಡಿಮೆ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು