Exchange Traded Fund: ಇಟಿಎಫ್‌ಗಳಲ್ಲಿ ಸ್ಮಾರ್ಟ್ ಬೀಟಾ ತಂತ್ರವು ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ಮ್ಯೂಚುವಲ್‌ ಫಂಡ್‌ ಕಂಪೆನಿಗಳು ಹೂಡಿಕೆದಾರರನ್ನು ಆಕರ್ಷಿಸಲು, ತಮ್ಮ ಯೋಜನೆಗಳಲ್ಲಿ ವಿವಿಧ ಆವಿಷ್ಕಾರಗಳನ್ನು ತರುತ್ತಿರುತ್ತವೆ. ಅದೇ ರೀತಿ ಸ್ಮಾರ್ಟ್‌ ಬೀಟಾ ಇಟಿಎಫ್‌ ಎಂಬ ತಂತ್ರ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ನ ಒಂದು ಹೂಡಿಕೆ ತಂತ್ರವಾಗಿದೆ. ಇಲ್ಲಿ ಕೆಲವು ಅಂಶಗಳ ಆಧಾರದ ಮೇಲೆ ಫಂಡ್‌ ಮ್ಯಾನೇಜರ್‌ಗಳು ಷೇರುಗಳನ್ನು ಆಯ್ಕೆ ಮಾಡುತ್ತಾರೆ. ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳಲ್ಲಿ ಈ ಸ್ಮಾರ್ಟ್‌ ಬೀಟಾ ತಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ, ಹೂಡಿಕೆದಾರನಿಗೆ ಇದು ಲಾಭದಾಯಕವೇ ಎಂಬುದನ್ನು ತಿಳಿಯೋಣ.

Exchange Traded Fund: ಇಟಿಎಫ್‌ಗಳಲ್ಲಿ ಸ್ಮಾರ್ಟ್ ಬೀಟಾ ತಂತ್ರವು ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 20, 2024 | 2:45 PM

ಹೂಡಿಕೆದಾರರನ್ನು ಆಕರ್ಷಿಸಲು, ಮ್ಯೂಚುವಲ್ ಫಂಡ್ ಕಂಪನಿಗಳು ತಮ್ಮ ಯೋಜನೆಗಳಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತವೆ. ಇದರ ಅಡಿಯಲ್ಲಿ ಹೂಡಿಕೆದಾರರಿಗೆ ಹೊಸ ಇನ್ವೆಸ್ಟ್‌ಮೆಂಟ್‌ ತಂತ್ರಗಳನ್ನು ಪರಿಚಯಿಸುತ್ತವೆ. ಅದೇ ರೀತಿ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ನಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಸ್ಮಾರ್ಟ್‌ ಬೀಟಾ ಎಂಬ ತಂತ್ರವನ್ನು ಬಳಸಲಾಗುತ್ತದೆ. ಸ್ಮಾರ್ಟ್ ಬೀಟಾ ಇಟಿಎಫ್ ಎನ್ನುವುದು ಹೂಡಿಕೆ ತಂತ್ರವಾಗಿದ್ದು, ಇಲ್ಲಿ ಕೆಲವು ಅಂಶಗಳ ಆಧಾರದ ಮೇಲೆ ಫಂಡ್‌ ಮ್ಯಾನೇಜರ್‌ಗಳು ಷೇರುಗಳನ್ನು ಆಯ್ಕೆ ಮಾಡುತ್ತಾರೆ. ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳಲ್ಲಿ ಈ ಸ್ಮಾರ್ಟ್‌ ಬೀಟಾ ತಂತ್ರ ಹೇಗೆ ಕಾರ್ಯವಿರ್ವಹಿಸುತ್ತದೆ, ಹೂಡಿಕೆದಾರನಿಗೆ ಇದು ಲಾಭದಾಯಕವೇ ಎಂಬುದನ್ನು ನೋಡೋಣ.

ಇಟಿಎಫ್‌ಗಳಲ್ಲಿ ಸ್ಮಾರ್ಟ್ ಬೀಟಾ ತಂತ್ರವು ಹೇಗೆ ಕಾರ್ಯನಿರ್ವಹಿಸುತ್ತದೆ?

ಸ್ಮಾರ್ಟ್ ಬೀಟಾ ಎನ್ನುವುದು ಒಂದು ರೀತಿಯ ಹೂಡಿಕೆ ತಂತ್ರವಾಗಿದ್ದು, ಕೆಲವು ಅಂಶಗಳ ಆಧಾರದ ಮೇಲೆ ಫಂಡ್‌ ಮ್ಯಾನೇಜರ್‌ಗಳು ಇಟಿಎಫ್‌ ಸ್ಟಾಕ್‌ಗಳನ್ನು ಆಯ್ಕೆ ಮಾಡುತ್ತಾರೆ. ಬರೀ ಇಟಿಎಫ್‌ನಲ್ಲಿ ಫಂಡ್‌ ಬೆಂಚ್‌ ಮಾರ್ಕ್‌ ಇಂಡೆಕ್ಸ್‌ ಅನ್ನು ಟ್ರ್ಯಾಕ್‌ ಮಾಡಲಾಗುತ್ತದೆ. ಆದರೆ ಈ ಸ್ಮಾರ್ಟ್‌ ಬೀಟಾ ಇಟಿಎಫ್‌ಗಳಲ್ಲಿ ಫಂಡ್‌ ಮ್ಯಾನೇಜರ್‌ ನಿರ್ದಿಷ್ಟ ನೀತಿ ಅಥವಾ ಕಾರ್ಯತಂತ್ರವನ್ನು ಆಧರಿಸಿ ಸೂಚ್ಯಂಕಗಳೊಂದಿಗೆ ಕೆಲವು ಸ್ಟಾಕ್‌ಗಳನ್ನು ಆಯ್ಕೆ ಮಾಡುತ್ತಾರೆ. ಅಂದರೆ ಸ್ಮಾರ್ಟ್ ಬೀಟಾ ಇಟಿಎಫ್‌ನಲ್ಲಿ ಮೌಲ್ಯ, ಲಾಭಾಂಶ, ಆವೇಗ, ಗುಣಮಟ್ಟ, ಕಡಿಮೆ ಬಾಷ್ಟಶೀಲತೆ ಅಂಶ, ಆಲ್ಫಾ, ಮೂಲಭೂತ ಅಂಶಗಳ ಆಧಾರದ ಮೇಲೆ ಸೂಚ್ಯಂಕದಲ್ಲಿ ಒಳಗೊಂಡಿರುವ ಷೇರುಗಳನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ, ನಿಫ್ಟಿ ಸೂಚ್ಯಂಕದಲ್ಲಿ 50 ಷೇರುಗಳಿದ್ದರೆ, ಫಂಡ್ ಮ್ಯಾನೇಜರ್ ಕೆಲವು ಅಂಶಗಳ ಆಧಾರದ ಮೇಲೆ ಈ ಷೇರುಗಳಲ್ಲಿ 10 ಅನ್ನು ಮಾತ್ರ ಆಯ್ಕೆ ಮಾಡಿ ಮತ್ತು ಆ ಷೇರುಗಳನ್ನು ಹೂಡಿಕೆ ಮಾಡುತ್ತಾರೆ.

ಇದನ್ನೂ ಓದಿ: ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಫುಲ್‌ ಡಿಟೇಲ್ಸ್

ಇಂತಹ ಸ್ಮಾರ್ಟ್‌ ಬೀಟಾ ಇಟಿಎಫ್‌ ಸಾಮಾನ್ಯ ಇಟಿಎಫ್‌ಗಳಿಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ. ಇದರ ಹಿಂದಿನ ಪ್ರಮುಖ ಕಾರಣವೆಂದರೆ ಸ್ಮಾರ್ಟ್‌ ಬೀಟಾ ಇಟಿಎಫ್‌ಗಳು ಸಾಮಾನ್ಯ ಸೂಚ್ಯಂಕದಂತೆ ಬೆಂಚ್‌ಮಾರ್ಕ್‌ಗಳಲ್ಲಿರುವ ಎಲ್ಲಾ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದಿಲ್ಲ. ಇದರಲ್ಲಿ ಆಲ್ಫಾ ಅಥವಾ ಆವೇಗದ ಫಿಲ್ಟರ್‌ಗಳನ್ನು ಅನ್ವಯಿಸುವ ಮೂಲಕ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಹೆಚ್ಚು ಆದಾಯವನ್ನು ತಂದುಕೊಡುವ ತಂತ್ರವಾಗಿ ಕಾರ್ಯವನ್ನು ನಿರ್ವಹಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Fri, 20 December 24

ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
"ನನ್ನ ಕೊಲೆ ಮಾಡುವ ಸಂಚು ನಡೆಸಿದ್ದೀರಿ" ಪೊಲೀಸರ ವಿರುದ್ಧ ಸಿಟಿ ರವಿ ಗರಂ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ
ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ