ETF Investment: ಮ್ಯೂಚುವಲ್ ಫಂಡ್‌ಗಿಂತ ಇಟಿಎಫ್ ಮೇಲಿನ ಹೂಡಿಕೆಯೂ ಲಾಭದಾಯಕವೇ? ವಾರ್ಷಿಕವಾಗಿ ತಗಲುವ ವೆಚ್ಚ ಎಷ್ಟು?
ಇತ್ತೀಚೆಗಿನ ದಿನಗಳಲ್ಲಿ ಇಟಿಎಫ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಬಹುದು. ಈ ಇಟಿಎಫ್ ಹೂಡಿಕೆಯೂ ಮ್ಯೂಚುವಲ್ ಫಂಡ್‌ಗಿಂತ ಉತ್ತಮ ಆಯ್ಕೆಯಾಗಿದೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಆದರೆ ದೇಶದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯೂ ಇಟಿಎಫ್‌ಗಳಿಗಿಂತ ಹೆಚ್ಚಾಗಿದೆ. ಆದರೆ ಕಡಿಮೆ ವೆಚ್ಚದ ಇಟಿಎಫ್ ಹೂಡಿಕೆದಾರರಿಗೆ ಎಷ್ಟು ಲಾಭದಾಯಕವಾಗಿದೆ? ವಾರ್ಷಿಕವಾಗಿ ತಗಲುವ ವೆಚ್ಚಗಳ ಕುರಿತಾದ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವೇನಾದ್ರು ಮಾರುಕಟ್ಟೆಯ ಸಂಬಂಧಿತ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಕೆಲವೊಂದು ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಈ ವೆಚ್ಚಗಳು ನೀವು ಯಾವ ಫಂಡ್ ಮೇಲೆ ಹೂಡಿಕೆಯ ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಹೂಡಿಕೆ ಮಾಡುವಾಗ ವೆಚ್ಚಗಳ ಕುರಿತಂತೆ ಕೂಡ ಗಮನ ಹರಿಸಬೇಕಾಗುತ್ತದೆ. ಈ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಗಳು ಕಡಿಮೆ ವೆಚ್ಚದ ಹೂಡಿಕೆಯಾಗಿದ್ದು, ನಿಷ್ಕ್ರಿಯ ನಿಧಿಯಾಗಿದೆ. ಈ ಫಂಡ್ ಅನ್ನು ನಿರ್ವಹಿಸಲು ವಿಧಿಸಲಾಗುವ ಶುಲ್ಕಗಳು ಸಕ್ರಿಯ ಮ್ಯೂಚುಯಲ್ ಫಂಡ್‌ಗಳಿಗೆ ಹೋಲಿಸಿದರೆ ತುಂಬಾನೇ ಕಡಿಮೆ ಎನ್ನಬಹುದು.
ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ (AMFI) ವೆಬ್‌ಸೈಟ್ ಪ್ರಕಾರ, ಇಟಿಎಫ್ ಅನ್ನು ನಿರ್ವಹಿಸುವ ವಾರ್ಷಿಕ ಶುಲ್ಕವು 0.20 ಪ್ರತಿಶತಕ್ಕಿಂತ ಕಡಿಮೆಯಾಗಿದೆ. ಆದರೆ ಇನ್ನುಳಿದಂತೆ ಕೆಲವು ಸಕ್ರಿಯ ಫಂಡ್ ಯೋಜನೆಗಳನ್ನು ನಿರ್ವಹಿಸುವ ವೆಚ್ಚವು ಶೇಕಡಾ 1 ಕ್ಕಿಂತ ಹೆಚ್ಚಾಗಿರುತ್ತದೆ. ನೀವೇನಾದ್ರು ಇಟಿಎಫ್‌ನಲ್ಲಿ ರೂ 100 ಹೂಡಿಕೆ ಮಾಡಿದರೆ, ಅದರ ವಾರ್ಷಿಕ ಶುಲ್ಕವು 50 ಪೈಸೆಯಾಗಿರುತ್ತದೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಎಕ್ಸ್ ಚೇಂಜ್ ಟ್ರೇಡಡ್ ಫಂಡ್ ನಲ್ಲಿ ಹೂಡಿಕೆ ಮಾಡಿ ಅಧಿಕ ವೆಚ್ಚದ ಹೊರೆಯಿಂದ ಪಾರಾಗಬಹುದು.
ಇದನ್ನೂ ಓದಿ: ಸ್ಮಾರ್ಟ್ ಬೀಟಾ ಇಟಿಎಫ್‌ನಲ್ಲಿ Low Volatility ಸ್ಟ್ರಾಟಿಜಿಯಿಂದ ಉಪಯೋಗಗಳು ತಿಳಿದಿರಿ
ಷೇರು ಮಾರುಕಟ್ಟೆಯಲ್ಲಿ ವಹಿವಾಟು ಮಾಡುವಾಗ ಇಟಿಎಫ್‌ಗಳ ಮೇಲಿನ ಹೂಡಿಕೆಯೂ ಹೆಚ್ಚು ಪಾರದರ್ಶಕವಾಗಿರುತ್ತದೆ. ಈ ಮ್ಯೂಚುಯಲ್ ಫಂಡ್‌ಗಳಿಗೆ ಹೋಲಿಸಿದರೆ, ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ವೆಚ್ಚದ ಅನುಪಾತವು ಕಡಿಮೆಯಾಗಿದೆ. ಈ ಇಟಿಎಫ್‌ಗಳಿಂದ ಪಡೆದ ಲಾಭಾಂಶದ ಮೇಲೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. ಅದರೊಂದಿಗೆ ಈ ಇಟಿಎಫ್ ಹಿಂಪಡೆಯುವಿಕೆಯ ವೇಳೆ ಹೂಡಿಕೆದಾರರು ಯಾವುದೇ ನಿರ್ಗಮನ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ