AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ETF Investment : ಇಟಿಎಫ್‌ ಗಳ ಖರೀದಿ ಹಾಗೂ ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಷೇರು ಹಾಗೂ ಮ್ಯೂಚುಯಲ್ ಫಂಡ್ ಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಈಗಾಗಲೇ ಎಷ್ಟೋ ಜನರು ಮ್ಯೂಚುಯಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡಿ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಇಟಿಎಫ್‌ (ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ) ನಲ್ಲಿ ಹೂಡಿಕೆ ಮಾಡಬಹುದು ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ. ಇದು ಕಂಪನಿಯ ಷೇರುಗಳಂತೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲೂ ವ್ಯಾಪಾರ ಮಾಡಲಾಗುತ್ತದೆ. ನೀವು ಇಟಿಎಫ್‌ಗಳನ್ನು ಎಲ್ಲಿ ಖರೀದಿಸಬಹುದು ಹಾಗೂ ಮಾರಾಟ ಮಾಡಬಹುದು? ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆಯನ್ನು ಹೊಂದಿರುವುದು ಅಗತ್ಯವೇ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ETF Investment : ಇಟಿಎಫ್‌ ಗಳ ಖರೀದಿ ಹಾಗೂ ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Dec 20, 2024 | 1:02 PM

Share

ಇಟಿಎಫ್ ಎನ್ನುವುದು ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ ಆಗಿದ್ದು, ನಿಫ್ಟಿ, ಸೆನ್ಸೆಕ್ಸ್‌ನಂತಹ ಷೇರು ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಅಥವಾ ಸೂಚ್ಯಂಕದ ತೂಕದ ಪ್ರಕಾರ ಪಿಎಸ್‌ಯು, ಬ್ಯಾಂಕಿಂಗ್ ಅಥವಾ ಐಟಿ ಸ್ಟಾಕ್‌ಗಳಂತಹ ವಿವಿಧ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಒಂದು ವಿಧದ ಮ್ಯೂಚುಯಲ್ ಫಂಡ್ ಇದಾಗಿದೆ. ಆದರೆ ಇವು ಮ್ಯೂಚುಯಲ್‌ ಫಂಡ್‌ಗಳಿಗಿಂತ ಸ್ವಲ್ಪ ಭಿನ್ನವಾಗಿಯೇ ವ್ಯವಹಾರ ನಡೆಸುತ್ತವೆ. ಅದಲ್ಲದೇ, ಚಿನ್ನ, ಸ್ವತ್ತು ಅಥವಾ ನಿಗದಿತ ವಸ್ತುಗಳ ರೀತಿಯಲ್ಲಿ ಇಎಫ್’ಟಿ ಅಡಿಯಲ್ಲಿ ಷೇರುಗಳ ರೀತಿಯಲ್ಲಿ ಇ’ಎಫ್’ಟಿ’ಗಳು ಒಳಗೊಂಡಿದೆ.

ಈ ಇಎಫ್’ಟಿಗಳು ಷೇರು ವಿನಿಮಯಗಳ ವ್ಯವಹಾರಗಳ ರೀತಿಯಲ್ಲಿ ಮಾರುಕಟ್ಟೆ ಭದ್ರತೆ ಒದಗಿಸುವುದರೊಂದಿಗೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ. ಆದರೆ ಹೂಡಿಕೆಗೂ ಮುನ್ನ ಈ ಇಟಿಎಫ್‌ಗಳನ್ನು ಎಲ್ಲಿ ಖರೀದಿಸಬಹುದು ಹಾಗೂ ಮಾರಾಟ ಮಾಡಬಹುದು. ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಇವುಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ಹೊಂದಿರುವುದು ಬಹಳ ಅವಶ್ಯಕವಾಗಿದೆ.

ಇಟಿಎಫ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆ ಹೇಗೆ?

  1. ಇಟಿಎಫ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಯು ಷೇರು ವಹಿವಾಟಿನಂತೆಯೇ ಇರುತ್ತದೆ.
  2. ದೃಢೀಕರಿಸಲ್ಪಟ್ಟ ಷೇರು ವಿನಿಮಯ ಕೇಂದ್ರ ನೋಂದಾಯಿತ ಬ್ರೋಕ್‌ ಮೂಲಕ ಇಟಿಎಫ್‌ ಖರೀದಿ ಅಥವಾ ಮಾರಾಟ ಮಾಡಲಾಗುತ್ತದೆ.
  3. ಒಂದು ವೇಳೆ ನೀವು ಕೂಡ ಇಟಿಎಫ್ ಖರೀದಿಸಲು ಬಯಸಿದರೆ, ಮೊದಲು ಬ್ರೋಕರ್‌ನೊಂದಿಗೆ ಡಿಮ್ಯಾಟ್ ಖಾತೆಯನ್ನು ತೆರೆಯಬೇಕು.
  4. ಆ ಬಳಿಕ ಡಿಮ್ಯಾಟ್ ಖಾತೆಯನ್ನು ವ್ಯಾಪಾರ ಖಾತೆಗೆ ಲಿಂಕ್ ಮಾಡುವುದು ಮುಖ್ಯ.
  5. ಈ ಟ್ರೇಡಿಂಗ್ ಖಾತೆಯಿಂದ ಆರ್ಡರ್ ಪ್ಲೇಸ್‌ಮೆಂಟ್ ಆಯ್ಕೆಗೆ ಹೋಗಿ ಅಲ್ಲಿ ನಿಮ್ಮ ಆಯ್ಕೆಯ ಇಟಿಎಫ್ ಅನ್ನು ಆಯ್ಕೆ ಮಾಡಬೇಕು.
  6. ನೀವು ಎಷ್ಟು ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದನ್ನು ನಮೂದಿಸಬೇಕು. ಆರ್ಡರ್ ಎಂಟ್ರಿ ಫಾರ್ಮ್‌ನಲ್ಲಿ ನಮೂದಿಸುವುದು ಬಹಳ ಮುಖ್ಯ.
  7. ತದನಂತರದಲ್ಲಿ ಖರೀದಿ ಮೇಲೆ ಕ್ಲಿಕ್ ಮಾಡುವ ಮೊದಲು, ನೀವು ಇಟಿಎಫ್‌ನ iNAV ಅನ್ನು ಪರಿಶೀಲಿಸಿ. ಇಟಿಎಫ್‌ನ ಘಟಕಗಳು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಗೆ ವಹಿವಾಟು ನಡೆಸುತ್ತಿವೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ iNAV ಮಾಹಿತಿ ನೀಡುತ್ತದೆ.
  8. ಹೂಡಿಕೆಯ ಮೊತ್ತವನ್ನು ಪಾವತಿಸಿದ ನಂತರ, ಇಟಿಎಫ್ ಘಟಕಗಳನ್ನು ನಿಮ್ಮ ಡಿಮ್ಯಾಟ್ ಖಾತೆಗೆ ಜಮಾ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Fri, 20 December 24