ಎಷ್ಟು ಥರದ ಇಟಿಎಫ್ಗಳಿವೆ? ನಿಮಗೆ ಸೂಕ್ತವೆನಿಸಿವ ಫಂಡ್ಗಳನ್ನು ಆಯ್ದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
Types of ETFs: ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್ಗಳಲ್ಲಿ ಮೂರು ರೀತಿಯದ್ದಿರುತ್ತವೆ. ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಕಮಾಡಿಟಿ ಇಟಿಎಫ್ಗಳ ವಿಧಗಳನ್ನು ನೋಡಬಹುದು. ಈಕ್ವಿಟಿ ಇಟಿಎಫ್ಗಳು ಷೇರುಗಳ ಸೂಚ್ಯಂಕಗಳನ್ನು ಟ್ರ್ಯಾಕ್ ಮಾಡುತ್ತವೆ. ಫಿಕ್ಸೆಡ್ ಇನ್ಕಮ್ ಇಟಿಎಫ್ಗಳು ಬಾಂಡ್, ಡೆಟ್ ಇತ್ಯಾದಿಯಲ್ಲಿ ಹೂಡಿಕೆ ಮಾಡುತ್ತವೆ. ಕಮಾಡಿಟಿ ಇಟಿಎಫ್ಗಳು ಚಿನ್ನ ಇತ್ಯಾದಿ ಸರಕುಗಳನ್ನು ಟ್ರ್ಯಾಕ್ ಮಾಡುತ್ತವೆ.
ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳು ಅಥವಾ ಇಟಿಎಫ್ಗಳು ದಿನೇ ದಿನೇ ಜನಪ್ರಿಯತೆ ಪಡೆಯುತ್ತಿವೆ. ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಇಟಿಎಫ್ಗಳು ಷೇರುಗಳ ಸೂಚ್ಯಂಕವನ್ನು ಟ್ರ್ಯಾಕ್ ಮಾಡುತ್ತವೆ. ಅಷ್ಟೇ ಅಲ್ಲ, ಇನ್ನೂ ಹೂಡಿಕೆ ಮಾರ್ಗಗಳ ಆಯ್ಕೆ ಇಟಿಎಫ್ನಲ್ಲಿದೆ. ಮೂರು ರೀತಿಯ ಇಟಿಎಫ್ಗಳನ್ನು ಗುರುತಿಸಬಹುದು. ಮೊದಲನೆಯದು ಈಕ್ವಿಟಿ ಇಟಿಎಫ್, ಎರಡನೆಯದು ಫಿಕ್ಸೆಡ್ ಇನ್ಕಮ್ ಇಟಿಎಫ್, ಮೂರನೆಯದು ಕಮಾಡಿಟಿ ಇಟಿಎಫ್.
ಗವರ್ನ್ಮೆಂಟ್ ಬಾಂಡ್, ಕಾರ್ಪೊರೇಟ್ ಬಾಂಡ್ ಇತ್ಯಾದಿ ಫಿಕ್ಸೆಡ್ ಇನ್ಕಮ್ ಹೂಡಿಕೆಗಳಲ್ಲಿ ಹಣ ಹಾಕುವ ಇಟಿಎಫ್ಗಳಿರುತ್ತವೆ. ಷೇರು ಮಾರುಕಟ್ಟೆಯ ಯಾವ ರಿಸ್ಕೂ ಬೇಡ ಎನ್ನುವವರಿಗೆ ಫಿಕ್ಸೆಡ್ ಇನ್ಕಮ್ ಇಟಿಎಫ್ ಬೇರೆ ಒಂದು ಆಯ್ಕೆಯಾಗಿರುತ್ತದೆ.
ಇದನ್ನೂ ಓದಿ: ಸ್ಮಾರ್ಟ್ ಬೀಟಾ ಇಟಿಎಫ್ನಲ್ಲಿ Low Volatility ಸ್ಟ್ರಾಟಿಜಿಯಿಂದ ಉಪಯೋಗಗಳು ತಿಳಿದಿರಿ
ಕಮಾಡಿಟಿ ಇಟಿಎಫ್ಗಳು ಚಿನ್ನ, ಕೃಷಿ ಉತ್ಪನ್ನ ಇತ್ಯಾದಿ ಸರಕುಗಳಲ್ಲಿ ಹೂಡಿಕೆ ಮಾಡುತ್ತವೆ.
ಈಕ್ವಿಟಿ ಇಟಿಎಫ್ಗಳು…
ಈಕ್ವಿಟಿ ಇಟಿಎಫ್ಗಳು ಷೇರುಗಳ ಇಂಡೆಕ್ಸ್ ಅಥವಾ ನಿರ್ದಿಷ್ಟ ಸೆಕ್ಟರ್ನ ಷೇರುಗಳನ್ನು ಟ್ರ್ಯಾಕ್ ಮಾಡುತ್ತವೆ. ನಿಫ್ಟಿ50, ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ, ನಿಫ್ಟಿ ಎಫ್ಎಂಸಿಜಿ ಇತ್ಯಾದಿ ಬೆಂಚ್ಮಾರ್ಕ್ ಇಂಡೆಕ್ಸ್ಗಳು ಇದಕ್ಕೆ ಉದಾಹರಣೆ. ನಿಫ್ಟಿ50 ಇಂಡೆಕ್ಸ್ ಟ್ರ್ಯಾಕ್ ಮಾಡುವ ಪ್ರತ್ಯೇಕ ಇಟಿಎಫ್ ಇರುತ್ತದೆ. ಹೀಗೆ ಬೇರೆ ಬೇರೆ ಇಂಡೆಕ್ಸ್ಗಳನ್ನು ಟ್ರ್ಯಾಕ್ ಮಾಡುವ ಬೇರೆ ಬೇರೆ ಇಟಿಎಫ್ಗಳಿರುತ್ತವೆ. ಇವೆಲ್ಲವೂ ಈಕ್ವಿಟಿ ಇಟಿಎಫ್ಗಳಾಗಿರುತ್ತವೆ.
ಇದನ್ನೂ ಓದಿ: ಇಟಿಎಫ್ನಲ್ಲಿ ಹೂಡಿಕೆ ಮಾಡಿದರೆ ಏನು ಲಾಭ? ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು…
ಇಟಿಎಫ್ನಲ್ಲಿ ಎಷ್ಟರ ಮಟ್ಟದವರೆಗೆ ಲಾಭ ಸಿಗುತ್ತದೆ ಎಂಬುದು ಟ್ರ್ಯಾಕಿಂಗ್ ಎರರ್ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಇಟಿಎಫ್ನ ಟ್ರ್ಯಾಕಿಂಗ್ ಎರರ್ ಎಂಬುದು ಗರಿಷ್ಠ ಸಾಧ್ಯವಾದ ಲಾಭಕ್ಕೆ ಬಂದಿರುವ ಕೊರತೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ಒಂದು ಇಟಿಎಫ್ ನಿಫ್ಟಿ50 ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ ಎಂದಿಟ್ಟುಕೊಳ್ಳಿ. ನಿಫ್ಟಿ50 ಇಂಡೆಕ್ಸ್ ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಲಾಭ ತಂದಿರುತ್ತದೆ. ಅದೇ ಅವಧಿಯಲ್ಲಿ ಇಟಿಎಫ್ ತಂದಿರುವ ಲಾಭ ಮತ್ತು ಇಂಡೆಕ್ಸ್ನ ಲಾಭ ಇವೆರಡರ ವ್ಯತ್ಯಾಸವೇ ಟ್ರ್ಯಾಕಿಂಗ್ ಎರರ್.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ