Video: ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ

Video: ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ

ಅಕ್ಷತಾ ವರ್ಕಾಡಿ
|

Updated on: Dec 27, 2024 | 11:10 AM

ಮದುವೆ ಮಾಡಿಸಲು ಬಂದ ಪೂಜಾರಿ ಮಂಟಪದಲ್ಲೇ ಕೋಪಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವರನ ಸ್ನೇಹಿತರು ತಮಾಷೆಯಾಗಿ ಜೋರಾಗಿ ಹೂವುಗಳನ್ನು ಎಸೆದಾಗ, ಒಂದು ಹೂವು ಪೂಜಾರಿಯ ಮೇಲೆ ಬಿದ್ದಿದೆ. ಇದರಿಂದ ಕೋಪಗೊಂಡ ಪೂಜಾರಿ ತನ್ನ ಕೈಯಲ್ಲಿದ್ದ ತಟ್ಟೆಯನ್ನು ಎಸೆದಿದ್ದಾರೆ. ಈ ಅನಿರೀಕ್ಷಿತ ಘಟನೆಯು ಎಲ್ಲರನ್ನೂ ಆಘಾತಗೊಳಿಸಿದೆ.

ಇತ್ತೀಚಿನ ದಿನಗಳಲ್ಲಿ, ಮದುವೆಗೆ ಸಂಬಂಧಿಸಿದ ವಿವಿಧ ರೀತಿಯ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿರುತ್ತವೆ. ಅದರಲ್ಲಿ ಮದುಮಗ ಅಥವಾ ವಧುವಿಗೆ ಸಂಬಂಧಿಸಿದ ವಿಚಿತ್ರ ದೃಶ್ಯಗಳು ವ್ಯಾಪಕವಾಗಿ ಹರಿದಾಡುವುದುಂಟು. ಆದರೆ ಇದೀಗ ಮದುವೆ ಮಾಡಿಸಲು ಬಂದ ಪೂಜಾರಿ ಮಂಟಪದಲ್ಲೇ ಕೋಪಗೊಂಡಿದ್ದು, ಇದನ್ನು ಕಂಡು ಅಲ್ಲಿದ್ದವರು ಶಾಕ್​ ಆಗಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ನವಜೋಡಿ ಅಗ್ನಿ ಕುಂಡಕ್ಕೆ ಪ್ರದಕ್ಷಿಣೆ ಬರುವುದನ್ನು ಕಾಣಬಹುದು. ವರನ ಸ್ನೇಹಿತರು ಹೂಗಳನ್ನು ವರನ ಮೇಲೆ ಜೋರಾಗಿ ಎಸೆದಾಗ ಒಂದು ಹೂವು ಪೂಜಾರಿಯ ಮೇಲೂ ಬಿದ್ದಿದೆ. ಇದರಿಂದ ಕೋಪಗೊಂಡ ಪೂಜಾರಿ ತನ್ನ ಕೈಯಲ್ಲಿದ್ದ ತಟ್ಟೆಯನ್ನು ವರನ ಸ್ನೇಹಿತನ ಮೇಲೆ ಎಸೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪೂಜಾರಿಯ ಅನಿರೀಕ್ಷಿತ ವರ್ತನೆ ವಧುವರರ ಜೊತೆಗೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ಶ್ರೀಮಂತ ಸಿಂಗಲ್​ ಹುಡುಗರೇ ಈಕೆಯ ಟಾರ್ಗೆಟ್!; ಏಳನೇ ಮದುವೆಯ ವೇಳೆ ಸಿಕ್ಕಿಬಿದ್ದ ಯುವತಿ

@kumarmanish9 ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದಗಯ ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದೆ. ಡಿಸೆಂಬರ್​ 26ರಂದು ಹಂಚಿಕೊಂಡಿರುವ ವಿಡಿಯೋ ಕೇವಲ ಒಂದೇ ದಿನದಲ್ಲಿ 5ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ