ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ

Ganapathi Sharma
|

Updated on:Dec 27, 2024 | 8:07 AM

ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮಾತನಾಡಿದ್ದು ಬಹಳ ಕಡಿಮೆ. ಆದರೆ, ಕೆಲವು ಸಂದರ್ಭಗಳಲ್ಲಿ ಅವರು ಮಾತನಾಡಿದ್ದು ದೊಡ್ಡ ಸುದ್ದಿಯಾಗಿತ್ತಲ್ಲದೆ ಚರ್ಚೆಯಾಗಿತ್ತು. ಆದರೆ, ಮನಮೋಹನ್ ಸಿಂಗ್ ಹಾಸ್ಯಪ್ರಜ್ಞೆಯುಳ್ಳವರೂ ಆಗಿದ್ದರು ಎಂಬುದನ್ನೂ ನೀವು ಒಪ್ಪಲೇಬೇಕು. ಸಂಸತ್​​ನಲ್ಲಿ ಒಮ್ಮೆ ಅವರು ಕಾವ್ಯ ವಾಚಿಸಿದ್ದು ನಗೆಗಡಲಲ್ಲಿ ತೇಲುವಂತೆ ಮಾಡಿತ್ತು. ಹೇಗೆಂಬುದನ್ನು ಈ ವಿಡಿಯೋದಲ್ಲಿ ನೋಡಿ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗ್ ಮಾತನಾಡಿದ್ದು ಬಹಳ ಕಡಿಮೆಯೇ. ಆದರೆ, ಅವರು ಮಾತನಾಡಿದಾಗಲೆಲ್ಲ ಬಹಳ ದೊಡ್ಡ ಸುದ್ದಿಯಾಗಿತ್ತಲ್ಲದೆ, ಚರ್ಚೆಗೂ ಗ್ರಾಸವಾಗಿತ್ತು. ಸಂಸತ್​​ನಲ್ಲಿ ಅಂದಿನ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ನೀಡಿದ್ದ ಹೇಳಿಕೆಗೆ ಮನಮೋಹನ್ ಸಿಂಗ್ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಮನಮೋಹನ್ ಸಿಂಗ್ ಕಾವ್ಯ ಶೈಲಿಯಲ್ಲಿ ನೀಡಿದ ಉತ್ತರದಿಂದ ಇಡೀ ಸಂಸತ್ ನಗೆಗಡಲಲ್ಲಿ ತೇಲಿತು.

ಅಲ್ಲಮ ಇಕ್ಬಾಲ್ ಅವರ ಕವನದ ಸಾಲನ್ನು ಮಹಮೋಹನ್ ಸಿಂಗ್ ಉಲ್ಲೇಖಿಸಿದ್ದರು. ‘‘ಮಾನ್ ಕೀ ತೇರಿ ದೀದ್ ಕೆ ಕಾಬಿಲ್ ನಹೀಂ ಹೂಂ ಮೈನ್, ತು ಮೇರಾ ಶೌಕ್ ದೇಖ್ ಮಿರಾ ಇಂತಿಜಾರ್ ದೇಖ್’’ ಎಂದು ಮನಹೋಹನ್ ಸಿಂಗ್ ಹೇಳಿದರೆ ಇಡೀ ಸದನ ನಗೆಗಡಲಲ್ಲಿ ತೇಲಿತು. ವಿಡಿಯೋ ನೋಡಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 27, 2024 07:59 AM