AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ

ವಿವೇಕ ಬಿರಾದಾರ
|

Updated on: Dec 27, 2024 | 7:02 AM

Share

ಬಸವರಾಜ ಗುರೂಜಿ ಅವರ ಇಂದಿನ ದೈನಂದಿನ ರಾಶಿ ಭವಿಷ್ಯ. ಗ್ರಹಗಳ ಸ್ಥಾನ, ನಕ್ಷತ್ರಗಳು, ತಿಥಿಗಳ ಆಧಾರದ ಮೇಲೆ ನಿಖರವಾದ ಮುನ್ಸೂಚನೆಗಳು. ಜ್ಯೋತಿಷ್ಯ ಶಾಸ್ತ್ರದ ಪ್ರಾಮುಖ್ಯತೆ ಮತ್ತು ಅದರ ಅನ್ವಯ. ಪಂಚಾಂಗದ ವಿವರಗಳೊಂದಿಗೆ ದಿನದ ರಾಶಿ ಫಲಗಳನ್ನು ತಿಳಿಯಿರಿ. ನಿಮ್ಮ ದಿನವನ್ನು ಯಶಸ್ವಿಯಾಗಿ ಮಾಡಲು ಜ್ಯೋತಿಷ್ಯ ಸಲಹೆಗಳು.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಧೃತಿ​, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 11 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:10 ರಿಂದ ಮಧ್ಯಾಹ್ನ 12:34ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:23 ರಿಂದ 04:47 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 08:21 ರಿಂದ 09:45 ರವರೆಗೆ.

ಮೇಷ ರಾಶಿ: ಐದು ಗ್ರಹಗಳ ಶುಭಫಲ. ಆರ್ಥಿಕ ಲಾಭ, ವಾಹನಯೋಗ, ವೈವಾಹಿಕ ಸಮಸ್ಯೆಗಳಿಂದ ಮುಕ್ತಿ, ಕೆಲಸದಲ್ಲಿ ಜಯ, ಉದ್ಯೋಗದಲ್ಲಿ ಶುಭ, ಕುಟುಂಬದಲ್ಲಿ ಒಳ್ಳೆಯ ಮಾತುಕತೆ, ಆದಾಯದಲ್ಲಿ ಹೆಚ್ಚಳ. ಕೆಂಪು ಬಣ್ಣ ಹಾಗೂ ಪೂರ್ವ ದಿಕ್ಕಿನ ಪ್ರಯಾಣ ಶುಭ. ಅದೃಷ್ಟ ಸಂಖ್ಯೆ 4. “ಓಂ ಗಿರಿಜಾಯೇ ನಮಃ” ಮಂತ್ರವನ್ನು ಒಂಬತ್ತು ಬಾರಿ ಜಪಿಸಿ.

ವೃಷಭ ರಾಶಿ: ಆರು ಗ್ರಹಗಳ ಶುಭಫಲ. ಉತ್ತಮ ಆಲೋಚನೆಗಳು, ಕೆಲಸದಲ್ಲಿ ಜಯ, ಉದ್ದೇಶಗಳ ಈಡೇರಿಕೆ, ಆರ್ಥಿಕ ಲಾಭ, ಅಲ್ಪ ಅನಾರೋಗ್ಯ, ಅಪಾರ್ಥಗಳಿಂದ ಮುಕ್ತಿ, ಪಾಲುದಾರಿಕೆಯಲ್ಲಿ ಲಾಭ, ಸರ್ಕಾರಿ ನೌಕರರಿಗೆ ಶುಭ. ಹಳದಿ ಬಣ್ಣ ಹಾಗೂ ದಕ್ಷಿಣ ದಿಕ್ಕಿನ ಪ್ರಯಾಣ ಶುಭ. ಅದೃಷ್ಟ ಸಂಖ್ಯೆ 6. “ಓಂ ಮಹೇಶ್ವರ್ಯೇ ನಮಃ” ಮಂತ್ರವನ್ನು ಹನ್ನೊಂದು ಬಾರಿ ಜಪಿಸಿ.

ಮಿಥುನ ರಾಶಿ: ಐದು ಗ್ರಹಗಳ ಶುಭಫಲ. ಚಂಚಲತೆ, ನ್ಯಾಯಾಲಯದಿಂದ ಶುಭ ಸುದ್ದಿ, ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಜಯ, ಆರ್ಥಿಕ ಲಾಭ, ಆನ್‌ಲೈನ್ ಬಿಸಿನೆಸ್‌ಗೆ ಶುಭ, ವ್ಯಾಪಾರದಲ್ಲಿ ಪ್ರಗತಿ, ಆರೋಗ್ಯ ಉತ್ತಮ, ಮಕ್ಕಳಿಂದ ಶುಭ ಸುದ್ದಿ, ಶತ್ರುಗಳ ಮಿತ್ರರಾಗುವಿಕೆ, ಸರ್ಕಾರಿ ನೌಕರರಿಗೆ ಶುಭ, ಮಹಿಳೆಯರಿಗೆ ಉದ್ಯೋಗ. ಹಳದಿ ಬಣ್ಣ ಹಾಗೂ ಪಶ್ಚಿಮ ದಿಕ್ಕಿನ ಪ್ರಯಾಣ ಶುಭ. ಅದೃಷ್ಟ ಸಂಖ್ಯೆ 2. “ಓಂ ಪದ್ಮಾಕ್ಷೇಯ ನಮಃ” ಮಂತ್ರವನ್ನು ಹನ್ನೊಂದು ಬಾರಿ ಜಪಿಸಿ.

ಕರ್ಕಾಟಕ ರಾಶಿ: ಆರು ಗ್ರಹಗಳ ಶುಭಫಲ. ಕೆಲಸದಲ್ಲಿ ಒತ್ತಡ, ಹಿತಶತ್ರುಗಳು, ಜವಾಬ್ದಾರಿಗಳ ಹೆಚ್ಚಳ, ಹಳೇಬಾಕಿ ವಸೂಲಿ, ವ್ಯಾಪಾರಸ್ಥರಿಗೆ ಶುಭ, ರೈತರಿಗೆ ಶುಭ, ಸಾಫ್ಟ್‌ವೇರ್ ಇಂಜಿನಿಯರ್ಸ್‌ಗೆ ಶುಭ, ಪ್ರೀತಿಸಿದವರ ಜೊತೆ ಒಳ್ಳೆಯ ಬಾಂಧವ್ಯ, ಸರ್ಕಾರಿ ನೌಕರರಿಗೆ ಶುಭ, ಉದ್ಯೋಗದಲ್ಲಿ ಮನ್ನಣೆ. ಬಿಳಿ ಬಣ್ಣ ಹಾಗೂ ಉತ್ತರ ದಿಕ್ಕಿನ ಪ್ರಯಾಣ ಶುಭ. ಅದೃಷ್ಟ ಸಂಖ್ಯೆ 5. “ಓಂ ವಿಮಲಾಯೇ ನಮಃ” ಮಂತ್ರವನ್ನು ಹನ್ನೊಂದು ಬಾರಿ ಜಪಿಸಿ.