ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್ನಲ್ಲಿ ಕಣ್ಣೀರು ಹಾಕಿದ ಗೌತಮಿ
ರಜತ್ ಅವರು ಎಲ್ಲ ಸ್ಪರ್ಧಿಗಳಿಗೆ ಸಖತ್ ಪೈಪೋಟಿ ನೀಡುತ್ತಿದ್ದಾರೆ. ಈಗ ಬಟ್ಟೆ ಕದಿಯಲು ಅವರು ಪ್ಲ್ಯಾನ್ ಮಾಡಿದ್ದಾರೆ. ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿ ರೆಸಾರ್ಟ್ ಟಾಸ್ಕ್ ನೀಡಲಾಗಿದೆ. ಇದರಲ್ಲಿ ರೆಸಾರ್ಟ್ ಸಿಬ್ಬಂದಿ ಸಮವಸ್ತ್ರ ಧರಿಸಬೇಕು. ಆದರೆ ಅವರ ಬಟ್ಟೆಗಳನ್ನು ಕದಿಯಬೇಕು ಎಂದು ರಜತ್ ಅವರು ತಮ್ಮ ತಂಡದ ಸದಸ್ಯರ ಜೊತೆ ಕುಳಿತು ಪ್ಲ್ಯಾನ್ ರೂಪಿಸಿದ್ದಾರೆ.
ರೆಸಾರ್ಟ್ ಟಾಸ್ಕ್ ನಿಭಾಯಿಸಲು ಹಲವರಿಗೆ ಕಷ್ಟ ಆಗುತ್ತಿದೆ. ಈ ಮೊದಲು ಭವ್ಯ ಗೌಡ ಕಣ್ಣೀರು ಹಾಕಿದ್ದರು. ಈಗ ಗೌತಮಿ ಜಾದವ್ ಕೂಡ ಅತ್ತಿದ್ದಾರೆ. ರಜತ್ ಅವರು ಈ ಟಾಸ್ಕ್ನಲ್ಲಿ ಎದುರಾಳಿ ತಂಡಕ್ಕೆ ಟಫ್ ಫೈಟ್ ನೀಡುತ್ತಿದ್ದಾರೆ. ಅವರ ಟಾರ್ಚರ್ ತಾಳಲಾಗದೇ ಎದುರಾಳಿ ತಂಡದವರು ಸುಸ್ತು ಹೊಡೆದಿದ್ದಾರೆ. ರೆಸಾರ್ಟ್ ಟಾಸ್ಕ್ ಮಾಡುತ್ತಿರುವವರ ಬಟ್ಟೆ ಕದಿಯುವ ಬಗ್ಗೆ ರಜತ್ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos