ಜೈಪುರ: ನಿರ್ಮಾಣ ಹಂತದಲ್ಲಿರುವ ಬ್ರಿಡ್ಜ್ಗೆ ಡಿಕ್ಕಿ ಹೊಡೆದ ಶಾಲಾ ವಾಹನ, ಶಿಕ್ಷಕಿ ಸಾವು, 15 ಮಕ್ಕಳಿಗೆ ಗಂಭೀರ ಗಾಯ
ಜೈಪುರದಲ್ಲಿ ಶಾಲಾ ಬಸ್ ಭಾರಿ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ ಸುಮಾರು 30 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಅತಿವೇಗದಲ್ಲಿ ನಿಯಂತ್ರಣ ಕಳೆದುಕೊಂಡು ನಿರ್ಮಾಣ ಹಂತದಲ್ಲಿರುವ ಬ್ರಿಡ್ಜ್ಗೆ ಡಿಕ್ಕಿ ಹೊಡೆದಿದೆ.ಜೈಪುರದ ಚೋಮು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಈ ಅಪಘಾತದಲ್ಲಿ 15 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನಿರ್ಮಾಣ ಹಂತದಲ್ಲಿರುವ ಬ್ರಿಡ್ಜ್ಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿ ಸಾವನ್ನಪ್ಪಿದ್ದು, 15 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜೈಪುರದಲ್ಲಿ ನಡೆದಿದೆ. NH 52 ರ ಭೋಜ್ಲಾವಾ ಕಟ್ ಬಳಿ ಅಪಘಾತ ಸಂಭವಿಸಿದೆ. ಬ್ರಿಡ್ಜ್ನಿಂದ ಇಳಿಯುವಾಗ ಬಸ್ ಬ್ರೇಕ್ ಫೇಲ್ ಆದ ಕಾರಣ ನಿರ್ಮಾಣ ಹಂತದಲ್ಲಿದ್ದ ಮತ್ತೊಂದು ಬ್ರಿಡ್ಜ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಬಸ್‌ನಲ್ಲಿ 30-35 ಮಕ್ಕಳಿದ್ದರು.
ಡಿಕ್ಕಿ ಹೊಡೆದ ನಂತರ ಶಿಕ್ಷಕಿ ಬಸ್ನಿಂದ ಹೊರಗೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೆಲವು ಮಕ್ಕಳನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದ್ದು, ಕೆಲವು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಲಾ ಬಸ್ ನಿಯಮ ಉಲ್ಲಂಘಿಸಿ ವೇಗವಾಗಿ ಚಲಿಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದಲ್ಲದೇ ಸಾರಿಗೆ ಇಲಾಖೆಯ ನಿರ್ಲಕ್ಷ್ಯದಿಂದ ನಗರದಲ್ಲಿ ಪರ್ಮಿಟ್, ವಿಮೆ ಇಲ್ಲದೇ ಹಲವು ಶಾಲಾ ಬಸ್ ಗಳು ರಸ್ತೆಗಿಳಿದಿರುವುದು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಟಿಟಿ ವಾಹನದ ಟೈಯರ್ ಬ್ಲಾಸ್ಟ್ ಆಗಿ ಸರಣಿ ಅಪಘಾತ, ಮೂವರು ಸ್ಥಳದಲ್ಲೇ ಸಾವು
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್ ಬಳಿ ಇಂದು (ಡಿಸೆಂಬರ್ 25) ಎರಡೂ ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದೆಡೆ ಕಲಬುರಗಿಯಲ್ಲಿ ಟಿಟಿ ವಾಹನದ ಟೈಯರ್ ಬ್ಲಾಸ್ಟ್ ಆಗಿ ಸರಣಿ ಅಪಘಾತ ಸಂಭವಿಸಿದೆ.
ಕಲಬುರಗಿ ಬಳಿಯ ಗೊಬ್ಬೂರ್(ಬಿ) ಗ್ರಾಮದ ಬಳಿ ಟಿಟಿ, ಲಾರಿ ಮತ್ತು ಬೈಕ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. 29 ವರ್ಷದ ಅನೂಪ್ ಮಾಧವ್, ವಿನುತಾ(54) ಹಾಗೂ ಬಸವರಾಜ್(33) ಮೃತ ದುರ್ವೈವಿಗಳು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ